ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಇದೀಗ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಮುಂಬೈ ಹಿರಿಯರ ತಂಡದಲ್ಲಿ ಮಿಂಚು ಹರಿಸುವ ನಿರೀಕ್ಷೆ ಇದೆ. ಎಡಗೈ ವೇಗದ ಬೌಲರ್ ಹಾಗೂ ಬ್ಯಾಟ್ಸ್‌ಮನ್ ಆಗಿರುವ ಅರ್ಜುನ್ ಈಗಾಗಲೇ ಕೆಲವು ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಇದರ ಆಧಾರದ ಮೇಲೆ ಮುಂಬೈ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿದೆ.
ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಮುಂಬೈ 22 ಸದಸ್ಯರ ತಂಡ ಪ್ರಕಟಗೊಳಿಸಿದ್ದು, ಮುಂಬೈ ತಂಡ E ಗ್ರೂಪ್ನಲ್ಲಿ ಡೆಲ್ಲಿ, ಹರಿಯಾಣ, ಕೇರಳ, ಆಂಧ್ರ ಹಾಗೂ ಪಾಂಡಿಚೇರಿ ತಂಡಗಳೊಂದಿಗೆ ಸೆಣಸಾಟ ನಡೆಸಲಿದೆ. ಈ ಪಂದ್ಯಗಳು ಕ್ರಮವಾಗಿ ಜನವರಿ 11,13,15,17 ಹಾಗೂ 19ರಂದು ಅಹಮದಾಬಾದ್ನಲ್ಲಿ ನಡೆಯಲಿವೆ.
ಈಗಾಗಲೇ ಟೀಂ ಇಂಡಿಯಾ ಅಂಡರ್-19 ತಂಡ ಹಾಗೂ ಮುಂಬೈನ ಅನೇಕ ಪಂದ್ಯಗಳಲ್ಲಿ ಅರ್ಜುನ್ ತೆಂಡೂಲ್ಕರ್ ಆಡಿದ್ದಾರೆ. ಇವರ ಜತೆಗೆ ಮುಂಬೈ ತಂಡದಲ್ಲಿ ತುಷಾರ್ ದೇಶಪಾಂಡೆ, ಧವಲ್ ಕುಲಕರ್ಣಿ, ಮಂಜ್ರೇಕರ್ ಹಾಗೂ ಪ್ರಾಥಮೇಶ್ ಢಾಕೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮುಂಬೈ ತಂಡ: ಸೂರ್ಯಕುಮಾರ್ ಯಾದವ್(ಕ್ಯಾಪ್ಟನ್), ಆದಿತ್ಯ ತಾರೆ( ಉಪನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ಸಿದ್ದೇಶ್ ಲಾಡ್, ಶಿವಂ ದುಬೆ, ಶುಭಂ ರಣಜೆ, ಸುಜಿತ್ ನಾಯ್ಕ, ಸಿರಾಜ್ ಪಾಟೀಲ್, ತುಷಾರ್ ದೇಶಪಾಂಡೆ, ಧವಲ್ ಕುಲಕರ್ಣಿ, ಮಂಜ್ರೇಕರ್, ಪ್ರಥಮೇಶ್ ಢಾಕೆ, ಅರ್ಜುನ್ ತೆಂಡೂಲ್ಕರ್, ಆಕಾಶ್ ಪ್ರಕಾರ್, ಹಾರ್ದಿಕ್ ಥಾಮೊರೆ