ETV Bharat / sports

ಕ್ರಿಕೆಟ್ ಆಸ್ಟ್ರೇಲಿಯಾಗೆ ಸಿಇಒ ಆಗಲಿದ್ದಾರಾ ಇಂಗ್ಲೆಂಡ್​ ತಂಡದ ಮಾಜಿ ಕ್ಯಾಪ್ಟನ್​! - ಕ್ರಿಕೆಟ್​ ಆಸ್ಟ್ರೇಲಿಯಾ ಸಿಇಒ ಸ್ಥಾನಕ್ಕೆ ಆ್ಯಂಡ್ರ್ಯೂ ಸ್ಟ್ರಾಸ್​ ಅಭ್ಯರ್ಥಿ

ಆಸ್ಟ್ರೇಲಿಯಾ ಕ್ರಿಕೆಟ್​ ದಿನದಿಂದ ದಿನಕ್ಕೆ ಕುತೂಹಲಕಾರಿ ಬೆಳವಣಿಗೆ ಕಂಡುಬರುತ್ತಿದ್ದು, ನಿನ್ನೆ ತಾನೆ ಕ್ರಿಕೆಟ್​ ಆಸ್ಟ್ರೇಲಿಯಾ ಸಿಇಒ ಸ್ಥಾನಕ್ಕೆ ಕೆವಿನ್​ ರಾಬರ್ಟ್​ ರಾಜಿನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಟಿ20 ವಿಶ್ವಕಪ್​ ಸಿಇಒ ನಿಕ್​ ಹಾಕ್ಲೆ ಹಂಗಾಮಿ ಸಿಇಒ ಆಗಿ ನೇಮಕವಾಗಿದ್ದರು.

Andrew Strauss
ಆ್ಯಂಡ್ರ್ಯೂ ಸ್ಟ್ರಾಸ್​
author img

By

Published : Jun 18, 2020, 8:48 PM IST

ಮೆಲ್ಬೋರ್ನ್​: ಕಳೆದ ಎರಡು ದಿನಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್​ ಸಂಸ್ಥೆಯಲ್ಲಿ ಅಚ್ಚರಿಯ ಬೆಳವಣಿಗೆ ಕಂಡುಬರುತ್ತಿದೆ. ಆರ್ಥಿಕ ಪರಿಸ್ಥಿತಿ ನಿರ್ವಹಿಸಲಾಗದೆ ಸಿಇಒ ಕೆವಿನ್​ ರಾಬರ್ಟ್​ ರಾಜಿಮೆ ನೀಡಿದರೆ, ನಿಕ್​ ಹಾಕ್ಲೆರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್​ ಹೆಸರು ಕೇಳಿ ಬರುತ್ತಿದೆ.

ಕೊರೊನಾ ವೈರಸ್​ನಿಂದ ಕಳೆದ ಮೂರು ತಿಂಗಳನಿಂದ ಯಾವುದೇ ಕ್ರಿಕೆಟ್​ ಟೂರ್ನಿಯಿಲ್ಲದೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿತ್ತು. ಇದರಿಂದ ಅಪಾರ ನಷ್ಟವನ್ನು ಎದುರಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ನಷ್ಟಪರಿಹಾರವಾಗಿ ಸಿಬ್ಬಂದಿ ಹಾಗೂ ಆಟಗಾರರ ವೃತನದ ಶೇ 20ರಷ್ಟನ್ನು ಕಡಿತಗೊಳಿಸಿತ್ತು. ರಾಜ್ಯ ಸಂಸ್ಥೆಗಳಿಗೆ ಅನುದಾನ ಕಡಿತ ಮಾಡಿದರು. ಆಟಗಾರರ ವೇತನ ಪರಿಷ್ಕರಿಸಲು ಮುಂದಾಗಿತ್ತು. ಈ ಕ್ರಮಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದವು. ಅದರಿಂದಾಗಿಯೇ ಕೆವಿನ್​ ರಾಬರ್ಟ್​ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಿಇಒ ಸ್ಥಾನಕ್ಕರೆ ಕೆವಿನ್ ರಾಬರ್ಟ್ಸ್‌ ರಾಜೀನಾಮೆ ನೀಡುತ್ತಿದ್ದಂತೆ ಹಂಗಾಮಿ ಸಿಇಒ ಆಗಿ 2020ರ ಟಿ20 ವಿಶ್ವಕಪ್​ ಸಿಇಒ ಆಗಿರುವ ನಿಕ್ ಹಾಕ್ಲೆ ಅಧಿಕಾರ ವಹಿಸಿಕೊಂಡಿದ್ದರು.

ಮಂಡಳಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಆದರೆ ಕೆಲವೇ ದಿನಗಳಲ್ಲಿ ಇದರಿಂದ ಹೊರಬರಲಿದ್ದೇವೆ. ಸಂಸ್ಥೆಗೆ ಹೊಸ ಸಿಇಒ ನೇಮಕ ಮಾಡುವುದು ಮಂಡಳಿಯ ಪ್ರಮುಖ ಕಾರ್ಯವಾಗಿದೆ. ಈ ಹುದ್ದೆಗಾಗಿ ದೇಶ ಮತ್ತು ವಿದೇಶಗಳಲ್ಲಿ ಸೂಕ್ತ ಅಭ್ಯರ್ಥಿಯನ್ನು ಹುಡುಕುತ್ತಿದ್ದೇವೆ ಎಂದು ಸಿಎ ಮುಖ್ಯಸ್ಥ ಇಯರ್ಲ್ ಎಡ್ಡಿಂಗ್ಸ್ ಈಚೆಗೆ ಹೇಳಿದ್ದರು.

ಇದೀಗ ಸಿಇಒ ಹುದ್ದೆಗೆ ನೇಮಕ ಕೋರಿ ಅರ್ಜಿ ಸಲ್ಲಿಸುವಂತೆ ಇಂಗ್ಲೆಂಡ್​ ತಂಡ ದ ಮಾಜಿ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೇಳಿಕೊಂಡಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸ್ಟ್ರಾಸ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯ ನಿರ್ಧೇಶಕರಾಗಿ 2015 ರಿಂದ 2018ರವರೆಗೆ ಕಾರ್ಯನಿರ್ವಹಿಸಿದ್ದರು.

43 ವರ್ಷದ ಸ್ಟ್ರಾಸ್ 100 ಟೆಸ್ಟ್​ ಪಂದ್ಯಗಳಿಂದ 7037 ರನ್​ ಹಾಗೂ 127 ಏಕದಿನ ಪಂದ್ಯಗಳಿಂದ 4205ರನ್​ ಗಳಿಸಿದ್ದಾರೆ. ಕ್ರಿಕೆಟ್​ ಆಟಗಾರನಾಗಿ ಹಾಗೂ ಅಧಿಕಾರಿಯಾಗಿ ಅಪಾರ ಅನುಭವ ಹೊಂದಿರುವ ಸ್ಟ್ರಾಸ್​ ಕ್ರಿಕೆಟ್​ ಆಸ್ಟ್ರೇಲಿಯಾದ ಸಿಇಒ ಆಗಿ ನೇಮಕವಾಗುವ ಸಾಧ್ಯತೆಯಿದ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.