ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ನ 5ನೇ ಆವೃತ್ತಿಯನ್ನು ಗೆದ್ದ ಕರಾಚಿ ಕಿಂಗ್ಸ್ ತಂಡದ ಆಟಗಾರರಿಗೆ ಫ್ರಾಂಚೈಸಿ ಮಾಲೀಕ ತನ್ನ ಅಪಾರ್ಟ್ಮೆಂಟ್ನಲ್ಲಿ ತಲಾ ಒಂದೊಂದು ಫ್ಲಾಟ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಕರಾಚಿ ಕಿಂಗ್ಸ್ ಫೈನಲ್ ಪಂದ್ಯದಲ್ಲಿ ಲಾಹೋರ್ ಕಲಂದರ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು. ಲಾಹೋರ್ ನೀಡಿದ್ದ 135 ರನ್ಗಳ ಗುರಿಯನ್ನು ಕರಾಚಿ ತಂಡ ಬಾಬರ್ ಅಜಮ್(63)ರ ಅರ್ಧಶತಕದ ನೆರವಿನಿಂದ 5 ವಿಕೆಟ್ಗಳಿಂದ ಮಣಿಸಿ ಗೆಲುವು ಸಾಧಿಸಿತ್ತು.
ತಮ್ಮ ತಂಡ ಚಾಂಪಿಯನ್ ಆಗಿದ್ದಕ್ಕೆ ಖುಷಿಯಾಗಿರುವ ಮಾಲೀಕ ಸಲ್ಮಾನ್ ಇಕ್ಬಾಲ್ ತಮ್ಮ ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಪಾಜೆಕ್ಟ್ನಿಂದ ತಂಡಕ್ಕೆ ಅಪಾರ್ಟ್ಮೆಂಟ್ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನಿಗೂ ಆ ಅಪಾರ್ಟ್ಮೆಂಟ್ನಲ್ಲಿ ಒಂದೊಂದು ಫ್ಲಾಟ್ ದೊರೆಯಲಿದೆ ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ.
"ರಿಯಲ್ ಎಸ್ಟೇಟ್ ಮಾಲೀಕರಾಗಿರುವ ಕರಾಚಿ ಕಿಂಗ್ಸ್ ಮಾಲೀಕ ಸಲ್ಮಾನ್ ಇಕ್ಬಾಲ್, ಪಿಎಸ್ಎಲ್ ವಿಜೇತ ಕರಾಚಿ ಕಿಂಗ್ಸ್ ತಂಡಕ್ಕೆ ಅಪಾರ್ಟ್ಮೆಂಟ್ ನೀಡಲಿದ್ದಾರೆ" ಎಂದು ಪಾಕಿಸ್ತಾನ ಪತ್ರಕರ್ತ ಒಮರ್ ಆರ್. ಖುರೇಶಿ ಟ್ವೀಟ್ ಮಾಡಿದ್ದಾರೆ.
2003ರ ವಿಶ್ವಕಪ್ನಲ್ಲಿ ಭಾರತ ತಂಡ ರನ್ನರ್ ಅಪ್ ಆದಾಗ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡಕ್ಕೂ ಒಂದೊಂದು ಫ್ಲಾಟ್ ಉಡುಗೊರೆಯಾಗಿ ನೀಡಲಾಗಿತ್ತು.