ETV Bharat / sports

ಬ್ರಾತ್​ವೇಟ್​ ಕೆಚ್ಚೆದೆ ಬ್ಯಾಟಿಂಗ್​ಗೆ ಕಿವೀಸ್ ಫಿದಾ​​... ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ದೈತ್ಯನಿಗೆ ಅಭಿನಂದನೆ! - ಕೆಚ್ಚೆದೆ ಬ್ಯಾಟಿಂಗ್​

ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​​ನ ಕಾರ್ಲೋಸ್​ ಬ್ರಾಥ್​ವೇಟ್​​ ಕೆಚ್ಚೆದೆಯ ಬ್ಯಾಟಿಂಗ್​ ಪ್ರದರ್ಶನ ನೀಡಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬ್ರಾತ್​ವೇಟ್​ಗೆ ಅಭಿನಂದನೆ
author img

By

Published : Jun 23, 2019, 3:39 AM IST

ಮ್ಯಾಂಚೆಸ್ಟರ್​​: 2016ರ ವಿಶ್ವಕಪ್​ ಟಿ20 ಫೈನಲ್​ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ ಗೆಲುವಿಗೆ ಬೇಕಾಗಿದ್ದು ಬರೋಬ್ಬರಿ 19ರನ್​​. ಟೂರ್ನಿಯಲ್ಲೇ ಅತಿ ಹೆಚ್ಚು ಮಾರಕ ಬೌಲಿಂಗ್​ ಮಾಡಿದ್ದ ಸ್ಟೋಕ್ಸ್​​ ಕೊನೆ ಓವರ್​ ಮಾಡಲು ಸಜ್ಜಾಗಿದ್ದರು. ಆದರೆ ಆ ಓವರ್​​ನಲ್ಲಿ ವೆಸ್ಟ್​ ಇಂಡೀಸ್​​ನ ಕಾರ್ಲೋಸ್​​ ಬ್ರಾತ್​ವೇಟ್​​ ಸತತ ನಾಲ್ಕು ಸಿಕ್ಸರ್​ ಸಿಡಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ದು ಎಲ್ಲರಿಗೂ ಗೊತ್ತಿದೆ.

ಅದೇ ರೀತಿ ನಿನ್ನೆ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲೂ ಕಾರ್ಲೊಸ್​ ಬ್ರಾತ್​ವೇಟ್​ ಅದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಆದರೆ ಕೊನೆಯ ಓವರ್​​ನಲ್ಲಿ ತಂಡಕ್ಕೆ ಕೇವಲ 5ರನ್​ಗಳ ಅವಶ್ಯಕತೆಯಿದ್ದಾಗ ಸ್ಫೋಟಕ ಹೊಡೆತಕ್ಕೆ ಮುಂದಾಗಿ ಬೌಂಡರಿ ಗೆರೆಯಲ್ಲಿ ಕ್ಯಾಚ್​ ನೀಡುವ ಮೂಲಕ ತಂಡವನ್ನ ವಿರೋಚಿತವಾಗಿ ಸೋಲುವಂತೆ ಮಾಡಿದ್ದಾರೆ. ಆದರೆ ಇವರ ಈ ಅಬ್ಬರದ ಬ್ಯಾಟಿಂಗ್​​ ವೈಖರಿಗೆ ಎದುರಾಳಿ ನ್ಯೂಜಿಲೆಂಡ್​ ಫುಲ್​ ಫಿದಾ ಆಗಿದೆ.

  • Carlos Brathwaite brings up an absolutely magnificent century, off just 80 balls!

    His job isn't done yet though. West Indies still need six to win, from eight balls, with one wicket in hand.

    What a game!#CWC19 pic.twitter.com/ooGYiSXwiZ

    — Cricket World Cup (@cricketworldcup) June 22, 2019 " class="align-text-top noRightClick twitterSection" data=" ">

40 ಓವರ್​ಗಳಲ್ಲಿ 8ವಿಕೆಟ್​​ನಷ್ಟಕ್ಕೆ 222ರನ್​ಗಳಿಸಿದ್ದ ವೆಸ್ಟ್​ ಇಂಡೀಸ್​ ತಂಡಕ್ಕೆ ಅಂತಿಮ 10 ಓವರ್​ಗಳಲ್ಲಿ ಬೇಕಾಗಿದ್ದ ಬರೋಬ್ಬರಿ 70ರನ್​. ಆದರೆ ಕೈಯಲ್ಲಿ 2ವಿಕೆಟ್​ ಮಾತ್ರ ಇತ್ತು. ಈ ವೇಳೆ ಕಾರ್ಲೊಸ್​ ಬ್ರಾತ್​ವೇಟ್​ ಧೈರ್ಯ ಕಳೆದುಕೊಳ್ಳದೇ ಬ್ಯಾಟಿಂಗ್​ ಬೀಸಿದರು. ಕೇವಲ 80 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ಅವರು 4ನೇ ಓವರ್​​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಹಾಗೂ ಒಂದು ಬೌಂಡರಿ ಸೇರಿ 24ರನ್​ಗಳಿಸಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದರು.

ಕೊನೆಯ ಓವರ್​​ನಲ್ಲಿ ವೆಸ್ಟ್​ ಇಂಡೀಸ್​​ ಗೆಲುವಿಗೆ ಕೇವಲ 5ರನ್​ಗಳ ಅವಶ್ಯಕತೆಯಿತ್ತು. ಇನ್ನೇನು ತಂಡ ಗೆಲುವಿನ ನಗೆ ಬೀರುವಂತೆ ಮಾಡುತ್ತಾರೆ ಎನ್ನುವಷ್ಟರಲ್ಲಿ ಬೌಂಡರಿ ಗೆರೆಯಲ್ಲಿ ಬೌಲ್ಟ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಇದರಿಂದ ತಂಡ ವಿರೋಚಿತ ಸೋಲು ಕಂಡಿತು. ಈ ವೇಳೆ ಕೆಲ ನಿಮಿಷಗಳ ಕಾಲ ಮೌನಕ್ಕೆ ಶರಣಾದ ಬ್ರಾಥ್​ವೇಟ್​, ಮೈದಾನದಲ್ಲಿ ಕಣ್ಣೀರು ಸಹ ಹಾಕಿದರು.ಈ ವೇಳೆ ಮೈದಾನದಲ್ಲಿದ್ದ ನ್ಯೂಜಿಲ್ಯಾಂಡ್​ ಪ್ಲೇಯರ್ಸ್​ ಬ್ರಾಥ್​ವೇಟ್​ಗೆ ಸಮಾಧಾನಪಡಿಸಿ, ಅಭಿನಂದನೆ ಸಲ್ಲಿಕೆ ಮಾಡಿದರು. ಇಷ್ಟೇ ಅಲ್ಲದೇ ಅವರು ಪೆವಿಲಿಯನ್​ ಕಡೆ ಹೆಜ್ಜೆ ಹಾಕುತ್ತಿದ್ದಾಗ ಎದುರಾದ ಕಿವೀಸ್​ನ ಪ್ರತಿಯೊಬ್ಬ ಪ್ಲೇಯರ್ಸ್​,ಸಿಬ್ಬಂದಿ ಹಾಗೂ ಕೋಚ್​ ಅವರಿಗೆ ಹಸ್ತಲಾಘವ ಮಾಡಿ, ಕೆಚ್ಚೆದೆಯ ಬ್ಯಾಟಿಂಗ್​ಗೆ ವಿಶ್ ಮಾಡಿದ್ದಾರೆ.

Intro:Body:

ಬ್ರಾತ್​ವೇಟ್​ ಕೆಚ್ಚೆದೆ ಬ್ಯಾಟಿಂಗ್​ಗೆ ಕಿವೀಸ್ ಫಿದಾ​​... ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ದೈತ್ಯನಿಗೆ ಅಭಿನಂದನೆ!

ಮ್ಯಾಂಚೆಸ್ಟರ್​​: 2016ರ ವಿಶ್ವಕಪ್​ ಟಿ20 ಫೈನಲ್​ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ ಗೆಲುವಿಗೆ ಬೇಕಾಗಿದ್ದು ಬರೋಬ್ಬರಿ 19ರನ್​​. ಟೂರ್ನಿಯಲ್ಲೇ ಅತಿ ಹೆಚ್ಚು ಮಾರಕ ಬೌಲಿಂಗ್​ ಮಾಡಿದ್ದ ಸ್ಟೋಕ್ಸ್​​ ಕೊನೆ ಓವರ್​ ಮಾಡಲು ಸಜ್ಜಾಗಿದ್ದರು. ಆದರೆ ಆ ಓವರ್​​ನಲ್ಲಿ ವೆಸ್ಟ್​ ಇಂಡೀಸ್​​ನ ಕಾರ್ಲೋರ್ಸ್​ ಬ್ರಾತ್​ವೇಟ್​​ ಸತತ ನಾಲ್ಕು ಸಿಕ್ಸರ್​ ಸಿಡಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. 

ಅದೇ ರೀತಿ ನಿನ್ನೆ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲೂ ಕಾರ್ಲೊಸ್​ ಬ್ರಾತ್​ವೇಟ್​ ಅದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಆದರೆ ಕೊನೆಯ ಓವರ್​​ನಲ್ಲಿ ತಂಡಕ್ಕೆ ಕೇವಲ 5ರನ್​ಗಳ ಅವಶ್ಯಕತೆಯಿದ್ದಾಗ ಸ್ಫೋಟಕ ಹೊಡೆತಕ್ಕೆ ಮುಂದಾಗಿ ಬೌಂಡರಿ ಗೆರೆಯಲ್ಲಿ ಕ್ಯಾಚ್​ ನೀಡುವ ಮೂಲಕ ತಂಡವನ್ನ ವಿರೋಚಿತವಾಗಿ ಸೋಲುವಂತೆ ಮಾಡಿದ್ದಾರೆ. ಆದರೆ ಇವರ ಈ ಅಬ್ಬರದ ಬ್ಯಾಟಿಂಗ್​​ ವೈಖರಿಗೆ ಎದುರಾಳಿ ನ್ಯೂಜಿಲೆಂಡ್​ ಫುಲ್​ ಫಿದಾ ಆಗಿದೆ. 

40 ಓವರ್​ಗಳಲ್ಲಿ  8ವಿಕೆಟ್​​ನಷ್ಟಕ್ಕೆ 222ರನ್​ಗಳಿಸಿದ್ದ ವೆಸ್ಟ್​ ಇಂಡೀಸ್​ ತಂಡಕ್ಕೆ ಅಂತಿಮ 10 ಓವರ್​ಗಳಲ್ಲಿ ಬೇಕಾಗಿದ್ದ ಬರೋಬ್ಬರಿ 70ರನ್​. ಆದರೆ ಕೈಯಲ್ಲಿ 2ವಿಕೆಟ್​ ಮಾತ್ರ ಇತ್ತು. ಈ ವೇಳೆ ಕಾರ್ಲೊಸ್​ ಬ್ರಾತ್​ವೇಟ್​ ಧೈರ್ಯ ಕಳೆದುಕೊಳ್ಳದೇ ಬ್ಯಾಟಿಂಗ್​ ಬೀಸಿದರು. ಕೇವಲ 80 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ಅವರು 4ನೇ ಓವರ್​​ನಲ್ಲಿ ಹ್ಯಾಟ್ರಿಕ್​ ಸಿಕ್ಸರ್​ ಹಾಗೂ ಒಂದು ಬೌಂಡರಿ ಸೇರಿ 24ರನ್​ಗಳಿಸಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದರು. 

ಕೊನೆಯ ಓವರ್​​ನಲ್ಲಿ ವೆಸ್ಟ್​ ಇಂಡೀಸ್​​ ಗೆಲುವಿಗೆ ಕೇವಲ 5ರನ್​ಗಳ ಅವಶ್ಯಕತೆಯಿತ್ತು. ಇನ್ನೇನು ತಂಡ ಗೆಲುವಿನ ನಗೆ ಬೀರುವಂತೆ ಮಾಡುತ್ತಾರೆ ಎನ್ನುವಷ್ಟರಲ್ಲಿ ಬೌಂಡರಿ ಗೆರೆಯಲ್ಲಿ ಬೌಲ್ಟ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಇದರಿಂದ ತಂಡ ವಿರೋಚಿತ ಸೋಲು ಕಂಡಿತು. ಈ ವೇಳೆ ಕೆಲ ನಿಮಿಷಗಳ ಕಾಲ ಮೌನಕ್ಕೆ ಶರಣಾದ ಬ್ರಾಥ್​ವೇಟ್​, ಮೈದಾನದಲ್ಲಿ ಕಣ್ಣೀರು ಸಹ ಹಾಕಿದರು.ಈ ವೇಳೆ ಮೈದಾನದಲ್ಲಿದ್ದ ನ್ಯೂಜಿಲ್ಯಾಂಡ್​ ಪ್ಲೇಯರ್ಸ್​ ಬ್ರಾಥ್​ವೇಟ್​ಗೆ ಸಮಾಧಾನಪಡಿಸಿ, ಅಭಿನಂದನೆ ಸಲ್ಲಿಕೆ ಮಾಡಿದರು. ಇಷ್ಟೇ ಅಲ್ಲದೇ ಅವರು ಪೆವಿಲಿಯನ್​ ಕಡೆ ಹೆಜ್ಜೆ ಹಾಕುತ್ತಿದ್ದಾಗ ಎದುರಾದ ಕಿವೀಸ್​ನ ಪ್ರತಿಯೊಬ್ಬ ಪ್ಲೇಯರ್ಸ್​,ಸಿಬ್ಬಂದಿ ಹಾಗೂ ಕೋಚ್​ ಅವರಿಗೆ ಹಸ್ತಲಾಘವ ಮಾಡಿ, ಕೆಚ್ಚೆದೆಯ ಬ್ಯಾಟಿಂಗ್​ಗೆ ವಿಶ್ ಮಾಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.