ಅಬುಧಾಬಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟಿ-10 ಟೂರ್ನಿಯ ಫೈನಲ್ ಪಂದ್ಯದಲ್ಲಿ ನಾರ್ದರ್ನ್ ವಾರಿಯರ್ಸ್ ದೆಹಲಿ ಬುಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.
-
Winners are grinners 🏆#AbuDhabiT10 pic.twitter.com/VXTyL2JDEB
— T10 League (@T10League) February 6, 2021 " class="align-text-top noRightClick twitterSection" data="
">Winners are grinners 🏆#AbuDhabiT10 pic.twitter.com/VXTyL2JDEB
— T10 League (@T10League) February 6, 2021Winners are grinners 🏆#AbuDhabiT10 pic.twitter.com/VXTyL2JDEB
— T10 League (@T10League) February 6, 2021
ಟಾಸ್ ಗೆದ್ದು ವಾರಿಯರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ದೆಹಲಿ ಬುಲ್ಸ್ ತಂಡ ನಿಗಧಿತ 10 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 81 ರನ್ಗಳಿಸಿತು. ಬುಲ್ಸ್ ಪರ ಮೊಹಮ್ಮದ್ ನಬಿ 10 ಎಸೆತಗಳಲ್ಲಿ 21 ರನ್ ಗಳಿಸಿ ಮಿಂಚಿದರೆ, ವಾರಿಯರ್ಸ್ ಪರ ಅದ್ಭುತ ಬೌಲಿಂಗ್ ಮಾಡಿದ ಆಫ್ ಸ್ಪಿನ್ನರ್ ಮಹೀಶ್ ಥೀಕ್ಷಾನಾ ತಮ್ಮ ಎರಡು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಮೂರು ವಿಕೆಟ್ ಪಡೆದರು.
ಓದಿ : ಮೂರನೇ ಬಾರಿಗೆ ಸಿಡ್ನಿ ಸಿಕ್ಸರ್ಸ್ಗೆ ಬಿಬಿಎಲ್ ಚಾಂಪಿಯನ್ ಪಟ್ಟ!
ಈ ಸಾಧರಣ ಟಾರ್ಗೆಟ್ ಬೆನ್ನತ್ತಿದ ವಾರಿಯರ್ಸ್ ತಂಡ 8.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 85 ರನ್ಗಳಿಸುವ ಮೂಲಕ ಎರಡನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು.
ಸಂಕ್ಷಿಪ್ತ ಸ್ಕೋರ್: ದೆಹಲಿ ಬುಲ್ಸ್ 81/9 ( ನಬಿ 21, ಎಂ ಥೀಕ್ಷಾನಾ 3/14), ನಾರ್ದರ್ನ್ ವಾರಿಯರ್ಸ್ 85/2 ( ಮುಹಮ್ಮದ್ 27, ಎಫ್ ಎಡ್ವರ್ಡ್ಸ್ 1/18) .