ETV Bharat / sports

ಮಾನವೀಯತೆ,ಸಮಾನತೆ ಸಂದೇಶ ಸಾರುವ ಹಾಡು ಹಾಡಿದ ಎಬಿಡಿ, ಸಾಥ್​ ನೀಡಿದ ಕೊಹ್ಲಿ, ಚಹಲ್​!

author img

By

Published : Oct 31, 2020, 4:44 AM IST

Updated : Oct 31, 2020, 6:55 AM IST

ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದಿನಿಂದಲೂ ವರ್ಣಭೇದ ನೀತಿ ತಾರತಮ್ಯ ಹೆಚ್ಚಾಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಎಬಿಡಿ ಹಾಡವೊಂದನ್ನ ಹಾಡಿದ್ದಾರೆ.

AB de Villiers releases song
AB de Villiers releases song

ನವದೆಹಲಿ: ಮಾನವೀಯತೆ, ಸಮಾನತೆ ಸಂದೇಶ ಸಾರುವ ಹಾಡುವೊಂದನ್ನ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್​ ಎಬಿ ಡಿವಿಲಿಯರ್ಸ್​ ಹಾಡಿದ್ದು, ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವರ್ಣಭೇದ ನೀತಿಯ ವಿರುದ್ಧದ ಹೋರಾಟದ ಹಾಡು ಇದಾಗಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್​ ಎಬಿ ಡಿವಿಲಿಯರ್ಸ್​​ ಭಿನ್ನವಾದ ನಿಲುವು ತೆಗೆದುಕೊಂಡು ಈ ಹಾಡು ಹಾಡಿದ್ದಾರೆ. ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಎಬಿಡಿ ಆಟವಾಡ್ತಿದ್ದಾರೆ.

AB de Villiers
ಎಬಿ ಡಿವಿಲಿಯರ್ಸ್​​​

ನಿನ್ನೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾಡಿನ ಪ್ರೋಮೋ ರಿಲೀಸ್ ಮಾಡಿದ್ದು, ಏಜ್​ ವಿ ರನ್​ ಥ್ರೂ ದಿ ಫೈರ್​ ವಿ ಫೈಂಡ್​ ದಿ ಫ್ಲೇಮ್​ ಎಂಬ ಶೀರ್ಷಿಕೆಯಲ್ಲಿದೆ. ದಕ್ಷಿಣ ಆಫ್ರಿಕಾದ ಗಾಯಕ ಕರೆನ್​ ಜೊಯಿಡ್​ ಮತ್ತು ಎನ್ಡಿಲೋವ್​ ಯೂತ್​ ಇದರಲ್ಲಿ ಹಾಡಿದ್ದಾರೆ. ಹಾಡಿನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಡೇಲ್​ ಸ್ಟೇನ್​, ಕ್ರಿಸ್ ಮೋರಿಸ್​, ಕಗಿಸೋ ರಬಾಡಾ, ಯಜುವೇಂದ್ರ ಚಹಲ್​, ಎಬಿಡಿ ಮಕ್ಕಳು ಸೇರಿದಂತೆ ಅನೇಕರು ಇದ್ದಾರೆ.

Last Updated : Oct 31, 2020, 6:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.