ಮೆಲ್ಬೋರ್ನ್: ಆಸ್ಟ್ರೇಲಿಯಾ ಸೀಮಿತ ಓವರ್ಗಳ ನಾಯಕ ಆ್ಯರೋನ್ ಫಿಂಚ್ ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ.
ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ 2019ರ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ, ಫೈನಲ್ನಲ್ಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೋಲುನುಭವಿಸಿದ ನಿರಾಶೆಯನುಭವಿಸಿತ್ತು.
ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ ಫೈನಲ್ ನನ್ನ ಅಂತಿಮ ದಿನ ಎಂದು ಈ ಹಂತದಲ್ಲಿ ಹೇಳುವೆ, ಅದೇ ನನ್ನ ಗುರಿ, ಅದಕ್ಕೆ ನಾನು ಅಂಟಿಕೊಂಡಿದ್ದೇನೆ ಎಂದು ಫಿಂಚ್ ಹೇಳಿದ್ದಾರೆ.
ನ್ಯಾಯಯುತ ಮಾರ್ಗದಲ್ಲಿ ನಾನು ನನ್ನ ಮನಸ್ಥಿತಿಯನ್ನು ಹೊಂದಿದ್ದೇನೆ. ವಿಶ್ವಕಪ್ ವೇಳೆಗೆ ನನ್ನ ವಯಸ್ಸು 36 ಆಗಲಿದೆ. ಅದು ನಿವೃತ್ತಿಗೆ ಸೂಕ್ತ ನಿಯಮ. ಆ ಸಂದರ್ಭದಲ್ಲಿ ಗಾಯ ಮತ್ತು ಬ್ಯಾಟಿಂಗ್ ಸ್ಥಿರತೆ ಕೂಡ ನಿರ್ಣಾಯಕವಾಗಲಿದೆ. ಅದಕ್ಕೆ ನಾನು 2023 ವಿಶ್ವಕಪ್ ನಂತರ ನಿವೃತ್ತಿ ಹೊಂದುವ ಯೋಜನೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಫಿಂಚ್ ಈ ಅವಧಿಯಲ್ಲಿ 3 ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಆಲೋಚನೆಯಿದೆ. 2021ರಲ್ಲಿ ಭಾರತದಲ್ಲಿ ನಡೆಯುವ ಟಿ-20 ವಿಶ್ವಕಪ್, 2022ಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್ನಲ್ಲಿ ಅವರು ಆಡಲಿದ್ದಾರೆ.
ಆ್ಯರೋನ್ ಫಿಂಚ್ 126 ಏಕದಿನ ಪಂದ್ಯಗಳನ್ನಾಡಿದ್ದು, 41.2ರ ಸರಾಸರಿಯಲ್ಲಿ 4882 ರನ್ಗಳಿಸಿದ್ದಾರೆ. ಅವರು 16 ಶತಕ ಹಾಗೂ 26 ಅರ್ಧಶತಕ ಸಿಡಿಸಿದ್ದಾರೆ. 61 ಟಿ-20 ಪಂದ್ಯಗಳಲ್ಲಿ 2 ಶತಕ ಹಾಗೂ 12 ಅರ್ಧಶತಕ ಸಹಿತ 1989 ರನ್ಗಳಿಸಿದ್ದಾರೆ.