ETV Bharat / sports

ಕಿವೀಸ್​ ನೆಲದಲ್ಲಿ ತೀವ್ರ ಮುಖಭಂಗ... 2ನೇ ಟೆಸ್ಟ್​​ನಲ್ಲೂ ಕೊಹ್ಲಿ ಪಡೆಗೆ ಹೀನಾಯ ಸೋಲು!

author img

By

Published : Mar 2, 2020, 8:24 AM IST

ನ್ಯೂಜಿಲ್ಯಾಂಡ್​ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಈ ಮೂಲಕ ಟೆಸ್ಟ್​ ಸರಣಿಯಲ್ಲಿ ವೈಟ್​ವಾಶ್​ ಮುಖಭಂಗ ಅನುಭವಿಸಿದೆ.

New Zealand beat India in 2nd test match

ಕ್ರೈಸ್ಟ್​ಚರ್ಚ್​​: ಮೊದಲ ಟೆಸ್ಟ್​​ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಎರಡನೇ ಪಂದ್ಯದಲ್ಲಿ ಕಿವೀಸ್​ ಪಡೆಗೆ ತಿರುಗೇಟು ನೀಡುವ ಇರಾದೆಯಲ್ಲಿದ್ದ ಕೊಹ್ಲಿ ಪಡೆ ಮತ್ತೊಮ್ಮೆ ಹೀನಾಯ ಸೋಲು ಕಂಡಿದೆ. ಈ ಮೂಲಕ ಎರಡು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ವೈಟ್​ವಾಶ್​ ಮುಖಭಂಗಕ್ಕೊಳಗಾಗಿದೆ.

ನ್ಯೂಜಿಲ್ಯಾಂಡ್​ ಸಂಭ್ರಮ

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಪೃಥ್ವಿ ಶಾ 54ರನ್​, ಚೇತೇಶ್ವರ್​ ಪೂಜಾರಾ 54 ಹಾಗೂ ಹನುಮ್​ ವಿಹಾರಿ 55ರನ್​ಗಳ ನೆರವಿನಿಂದ 242ರನ್​ಗಳಿಕೆ ಮಾಡ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್​ ನಡೆಸಿದ್ದ ಕಿವೀಸ್​ ಪಡೆ 235ರನ್​ಗಳಿಗೆ ಆಲೌಟ್​ ಆಗುವ ಮೂಲಕ 7ರನ್​ಗಳ ಹಿನ್ನಡೆ ಅನುಭವಿಸಿತು.

ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಮತ್ತೊಮ್ಮೆ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ ಟೀಂ ಇಂಡಿಯಾ ಕೇವಲ 124ರನ್​ಗಳಿಗೆ ಆಲೌಟ್​ ಆಗುವ ಮೂಲಕ ಎದುರಾಳಿ ತಂಡಕ್ಕೆ 132ರನ್​ಗಳ ಗೆಲುವಿನ ಟಾರ್ಗೆಟ್​ ನೀಡಿತು. ಇದರ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್​​ ​ ಪಡೆ 36 ಓವರ್​ಗಳಲ್ಲಿ ಮೂರು ವಿಕೆಟ್​ ಕಳೆದುಕೊಂಡು ಈ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದೆ.

ಟಿ-20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲ್ಯಾಂಡ್​ ತಂಡಕ್ಕೆ ಶಾಕ್​ ನೀಡಿದ್ದ ಟೀಂ ಇಂಡಿಯಾ ಏಕದಿನ ಹಾಗೂ ಟೆಸ್ಟ್​ ಸರಣಿಯಲ್ಲಿ ಹೀನಾಯ ಸೋಲು ಕಾಣುವ ಮೂಲಕ ಕಿವೀಸ್​​ ಪ್ರವಾಸ ಮುಗಿಸಿದೆ. ನ್ಯೂಜಿಲ್ಯಾಂಡ್​ ತಂಡದ ಪರ ಥಿಮ್​ ಸೌಥಿ, ಬೌಲ್ಟ್​ ಹಾಗೂ ಜೇಮಿಸನ್​ ಬೌಲಿಂಗ್​​ನಲ್ಲಿ ಮಿಂಚಿ ಎದುರಾಳಿ ತಂಡಕ್ಕೆ ಮಾರಕವಾಗಿ ಕಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.