ETV Bharat / sports

ಟಿ-20 ವಿಶ್ವಕಪ್ ಮುಂದೂಡಿಕೆ ಬಹುತೇಕ ಖಚಿತ... ಅಧಿಕೃತ ಘೋಷಣೆ ಬಾಕಿ- ವರದಿ

2020ರ ಟಿ-20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾಗುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.

author img

By

Published : May 22, 2020, 5:13 PM IST

T20 World Cup set to be postponed
ಟಿ-20 ವಿಶ್ವಕಪ್ ಮುಂದೂಡಿಕೆ

ಮುಂಬೈ: ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಂಡಿರುವ 2020ರ ಟಿ-20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾಗಲಿದೆ. ನಿಗದಿತ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯುವುದಿಲ್ಲ. ಮುಂದಿನ ವಾರ ಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಐಸಿಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವ್ಯವಹಾರಗಳನ್ನು ನೋಡಿಕೊಳ್ಳುವ ಕ್ರಿಕೆಟ್ ಆಡಳಿತಗಾರರು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಟಿ-20 ವಿಶ್ವಕಪ್ ಆಯೋಜನೆಗೆ ಪರ್ಯಾಯ ಸಮಯ ಹುಡುಕಲಾಗುತ್ತಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಟೂರ್ನಿ ಆಯೋಜನೆಗೆ ಚಿಂತನೆ ನಡೆಸಿರಬಹುದು ಎಂದು ಹೇಳಲಾಗಿದೆ. ಆದರೆ, ಐಪಿಎಲ್​​ಗೂ ಮೊದಲೇ ಟೂರ್ನಿ ನಡೆಸಿದರೆ ಕ್ರಿಕೆಟ್ ಮೇಲಿನ ಉತ್ಸಾಹ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಭಾರತ ಮತ್ತು ಇಂಗ್ಲೆಂಡ್ ಟೂರ್ನಿಗೆ ಸಮಸ್ಯೆ ಆಗಲಿದೆ. ಇದೇ ವೇಳೆ ಹಲವು ಟೂರ್ನಿಗಳ ಪ್ರಸರ ಹಕ್ಕು ಪಡೆದಿರುವ ಸ್ಟಾರ್​ ಸ್ಪೋರ್ಟ್ಸ್​ ಕೂಡ ಈ ನಿರ್ಧಾರವನ್ನು ತಿರಸ್ಕರಿಸುವ ಸಾಧ್ಯತೆ ಇದೆ.

ಮುಂದಿನ ದಾರಿ ಎಂದರೆ, ಕ್ರಿಕೆಟ್ ಆಸ್ಟ್ರೇಲಿಯಾಗೆ 2021ರ ಟಿ-20 ಆಯೋಜನೆ ಬಿಟ್ಟುಕೊಟ್ಟು, ಬಿಸಿಸಿಐ 2022 ಟೂರ್ನಿ ಆಯೋಜನೆಗೆ ತೀರ್ಮಾನ ಮಾಡುವುದು. ಆದರೆ, ಈ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಟಿ-20 ವಿಶ್ವಕಪ್​ ಅಂತಹ ಲಾಭದಾಯಕ ಟೂರ್ನಿಯನ್ನು ಬಿಸಿಸಿಐ ಬಿಟ್ಟುಕೊಡುವ ಸಾಧ್ಯತೆ ಇಲ್ಲ.

ಕೊನೆಯ ಆಯ್ಕೆ ಆಸ್ಟ್ರೇಲಿಯಾ 2022 ಟಿ-20 ವಿಶ್ವಕಪ್ ಆಯೋಜನೆ ಮಾಡುವುದು. ಆ ವರ್ಷದಲ್ಲಿ ಯಾವುದೇ ಐಸಿಸಿ ಟೂರ್ನಿ ನಿಗದಿಯಾಗಿದ ಕಾರಣ ಈ ಸಾದ್ಯತೆ ಹೆಚ್ಚಿದೆ.

ಮೇ 26ರಿಂದ 28ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಭೆ ನಡೆಯಲಿದೆ. ಈ ವೇಳೆಯಲ್ಲಿ ಟೂರ್ನಿ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.