ಬೆಂಗಳೂರು: ಕರ್ನಾಟಕ ತಂಡ ತನ್ನ ಕೊನೆಯ ಪಂದ್ಯ ಬರೋಡ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದ ಕರ್ನಾಟಕ ತಂಡ ಲೀಗ್ ಹಂತದಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕ್ವಾರ್ಟರ್ ಫೈನಲ್ನಲ್ಲಿ ಜಮ್ಮುಕಾಶ್ಮೀರ ತಂಡದ ಸವಾಲನ್ನು ಎದರಿಸಲಿದೆ.
ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಿಂದ 4 ಗೆಲುವು ಹಾಗೂ 4 ಡ್ರಾ ಸಾಧಿಸಿರುವ ಕರ್ನಾಟಕ ತಂಡ ಎ ಮತ್ತ ಬಿ ಗುಂಪಿನ ಅಂಕಪಟ್ಟಿಯಲ್ಲಿ ಗುಜರಾತ್(35) ಹಾಗೂ ಬೆಂಗಾಲ್(32) ನಂತರದ ಸ್ಥಾನಪಡೆದಿದೆ. ಈ ಮೂರು ತಂಡಗಳ ಜೊತೆ ಸೌರಾಷ್ಟ್ರ(31), ಆಂಧ್ರ ಪ್ರದೇಶ(27) ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿವೆ.
ಸಿ ಗುಂಪಿನಿಂದ ಜಮ್ಮು ಮತ್ತ ಕಾಶ್ಮೀರ(39) ಅಗ್ರಸ್ಥಾನಿಯಾಗಿ ಹಾಗೂ ಒಡಿಶಾ(38) ಎರಡನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಪ್ಲೇಟ್ ಗುಂಪಿನಲ್ಲಿ ಗೋವಾ ತಂಡ 9 ಪಂದ್ಯಗಳಲ್ಲಿ 7 ಜಯದೊಂದಿಗೆ 50 ಅಂಕ ಪಡೆದು ಕ್ವಾರ್ಟರ್ ಅವಕಾಶ ಗಿಟ್ಟಿಸಿಕೊಂಡಿದೆ.
ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ :
ಸೌರಾಷ್ಟ್ರ vs ಆಂದ್ರ ಪ್ರದೇಶ-- ಫೆಬ್ರವರಿ 20-24ವರೆಗೆ--- ಒಂಗೊಲೆ(ಆಂದ್ರ
ಕರ್ನಾಟಕ vs ಜಮ್ಮು ಮತ್ತುಕಾಶ್ಮೀರ-- ಫೆಬ್ರವರಿ 20-24 ವರೆಗೆ--- ಜಮ್ಮು
ಪಶ್ಚಿಮ ಬಂಗಾಳ vs ಒಡಿಶಾ-- ಫೆಬ್ರವರಿ 20-24 ವರೆಗೆ --- ಕಟಕ್(ಒಡಿಶಾ)
ಗುಜರಾತ್ vs ಗೋವಾ--ಫೆಬ್ರವರಿ 20-24 ವರೆಗೆ--- ವಲ್ಸಾದ್( ಗುಜರಾತ್)