ETV Bharat / sports

ತರಬೇತಿ ಆಟಗಾರ್ತಿಯರೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದ ಆರೋಪ: ಕ್ರಿಕೆಟ್​ ಕೋಚ್​ ನರೇಂದ್ರ ಲಾಲ್ ಶಾ ಬಂಧನ - ನೆಹರು ಕಾಲೋನಿ ಪೊಲೀಸ್ ಠಾಣೆ ಪೊಲೀಸರು

ತರಬೇತಿಗೆ ಬರುತ್ತಿದ್ದ ಕ್ರಿಕೆಟ್ ಆಟಗಾರ್ತಿಯರೊಂದಿಗೆ ಕರೆಯಲ್ಲಿ ಅಶ್ಲೀಲವಾಗಿ ಮಾತನಾಡಿದ್ದ ಆರೋಪ ಹೊತ್ತಿದ್ದ ಕೋಚ್​ ನರೇಂದ್ರ ಲಾಲ್ ಶಾ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

narendra lal shah
ನರೇಂದ್ರ ಲಾಲ್ ಶಾ
author img

By

Published : Apr 7, 2023, 1:14 PM IST

ಡೆಹ್ರಾಡೂನ್ (ಉತ್ತರಾಖಂಡ): ಹದಿಹರೆಯದ ಕ್ರಿಕೆಟ್ ಆಟಗಾರ್ತಿಯರೊಂದಿಗೆ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ನರೇಂದ್ರ ಲಾಲ್ ಶಾ ಅವರನ್ನು ನೆಹರು ಕಾಲೋನಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿಯಷ್ಟೇ ಅವರು ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು.

ಆರೋಪಿ ಕ್ರಿಕೆಟ್ ಕೋಚ್ ನರೇಂದ್ರ ಲಾಲ್ ಶಾ ತರಬೇತಿಗೆ ಬರುತ್ತಿದ್ದ ಕ್ರಿಕೆಟ್ ಆಟಗಾರ್ತಿಯರೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದರು ಎಂಬ ಆರೋಪ ಎದುರಿಸುತ್ತಿದ್ದು, ಕೋಚ್​ ವಿರುದ್ಧ ದೂರು ಕೂಡ ದಾಖಲಾಗಿತ್ತು. ಜೊತೆಗೆ ಕೋಚ್​ ಅಶ್ಲೀಲವಾಗಿ ಮಾತನಾಡಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಆಡಿಯೋ ವೈರಲ್ ಆದ ಬೆನ್ನಲ್ಲೇ ಲಾಲ್​ ಶಾ ಆತ್ಮಹತ್ಯೆಗೆ ಯತ್ನಿಸಿದ್ದರು. ಹಾಗಾಗಿ ಅವರನ್ನ ಡೂನ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮತ್ತೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ರಿಷಿಕೇಶ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ನರೇಂದ್ರ ಲಾಲ್ ಶಾ ಡಿಸ್ಚಾರ್ಜ್ ಆಗಿದ್ದು ತಕ್ಷಣವೇ ನೆಹರು ಕಾಲೋನಿ ಪೊಲೀಸರು ಬಂಧಿಸಿದ್ದಾರೆ.

ನರೇಂದ್ರ ಲಾಲ್ ಶಾ ವಿರುದ್ಧ ದಾಖಲಾಗಿದೆ ಪೋಕ್ಸೋ ಪ್ರಕರಣ: ಲಾಲ್​ ಶಾ ವಿರುದ್ಧ ಆರೋಪ ಮಾಡಿದ್ದ ಮೂವರು ಬಾಲಕಿಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಈತನ ವಿರುದ್ಧ POCSO ಜೊತೆಗೆ SC-ST ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಏಮ್ಸ್ ವೈದ್ಯರು ಐದು ದಿನಗಳ ನಂತರ ವಾಪಸ್​​ ನರೇಂದ್ರ ಲಾಲ್ ಶಾ ಅವರನ್ನು ಆರೋಗ್ಯ ನಿಮಿತ್ತ ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ. ನರೇಂದ್ರ ಲಾಲ್​ನ್ನು ಬಂಧಿಸಿರುವ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಆಡಿಯೋ ವೈರಲ್; ಆತ್ಮಹತ್ಯೆಗೆ ಯತ್ನ: ಕ್ರಿಕೆಟ್ ತರಬೇತುದಾರ ನರೇಂದ್ರ ಲಾಲ್ ಶಾ ಫೋನ್‌ನಲ್ಲಿ ಅಶ್ಲೀಲ ಮಾತಿನಿಂದ ಕ್ರಿಕೆಟ್ ಬಾಲಕಿ ಆಟಗಾರರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಆ ಬಗ್ಗೆ ಮಾತನಾಡುವ ಆಡಿಯೋ ಕೂಡ ವೈರಲ್​ ಆಗಿತ್ತು. ಆಡಿಯೋ ವೈರಲ್ ಆದ ನಂತರ ನರೇಂದ್ರ ಲಾಲ್ ಶಾ ಆತ್ಮಹತ್ಯೆಗೆ ಯತ್ನಿಸಿದ್ದು, ಕಳೆದ ಹಲವು ದಿನಗಳಿಂದ ಡೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ, ಏಪ್ರಿಲ್ 4 ರಂದು ನರೇಂದ್ರ ಲಾಲ್ ಷಾ ಹೊಟ್ಟೆ ನೋವಿನ ಕಾರಣ ರಿಷಿಕೇಶ ಏಮ್ಸ್‌ಗೆ ದಾಖಲಾಗಿದ್ದರು. ಏಮ್ಸ್‌ನಿಂದ ಬಿಡುಗಡೆಯಾದ ತಕ್ಷಣ ನರೇಂದ್ರ ಲಾಲ್ ಶಾನನ್ನು ಬಂಧಿಸಲಾಯಿತು.

ಈ ಕುರಿತು ನೆಹರು ಕಾಲೋನಿ ಪೊಲೀಸ್ ಠಾಣೆಯ ಲೋಕೇಂದ್ರ ಬಹುಗುಣ ಹೇಳಿಕೆ ನೀಡಿದ್ದು, ಲಾಲ್​ ಶಾ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಮೊದಲೇ ನೆಹರು ಕಾಲೋನಿ ಪೊಲೀಸ್ ಠಾಣೆಯ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದರು. ಈಗ ಬಂಧನದ ನಂತರ ಡೆಹ್ರಾಡೂನ್‌ಗೆ ಕರೆತರಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಂಧನಕ್ಕೊಳಗಾಗಿರುವ ನರೇಂದ್ರ ಲಾಲ್ ಶಾ ಕ್ರಿಕೆಟ್​ ಆಟಗಾರ್ತಿ ಸ್ನೇಹ ರಾಣಾಗೆ ತರಬೇತಿ ನೀಡಿದ್ದಾರೆ. ನರೇಂದ್ರ ಲಾಲ್ ಶಾ ಡೆಹ್ರಾಡೂನ್‌ನಲ್ಲಿ ಲಿಟಲ್ ಮಾಸ್ಟರ್ ಕ್ರಿಕೆಟ್ ಕ್ಲಬ್ ಎಂಬ ಕೋಚಿಂಗ್ ಅಕಾಡೆಮಿಯನ್ನು ನಡೆಸುತ್ತಿದ್ದು, ಈ ಅಕಾಡೆಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಡುಗರು, ಹುಡುಗಿಯರು ತರಬೇತಿ ಪಡೆಯುತ್ತಿದ್ದರು.

ಇದನ್ನೂ ಓದಿ: ವೃದ್ಧೆ ಕೊಂದು ಅತ್ಯಾಚಾರ ಎಸಗಿದ ವಿಕೃತ ಕಾಮಿಯ ಬಂಧನ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.