ಸೇಂಟ್ ಕಿಟ್ಸ್: ವೆಸ್ಟ್ ಇಂಡೀಸ್ ಎಡಗೈ ಸ್ಪಿನ್ನರ್ ಅಕೀಲ್ ಹುಸೇನ್ ಬುಧವಾರ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಡೆದ ಅದ್ಭುತ ಕ್ಯಾಚ್ ಕ್ರಿಕೆಟ್ ಅಭಿಮಾನಿಗಳನ್ನು ದಂಗಾಗಿಸಿದೆ.
ಬುಧವಾರ ಟ್ರಿಂಬಾಂಗೊ ನೈಟ್ ರೈಡರ್ಸ್ ಮತ್ತು ಗಯಾನ ಅಮೆಜಾನ್ ವಾರಿಯರ್ಸ್ ನಡುವೆ ಪಂದ್ಯ ನಡೆದಿತ್ತು. ರೈಡರ್ಸ್ ನೀಡಿದ್ದ 139 ರನ್ಗಳ ಬೆನ್ನಟ್ಟಿದ ಗಯಾನಗೆ ಈ ಪಂದ್ಯ ಗೆಲ್ಲಲು 18 ಎಸೆತಗಳಲ್ಲಿ 34 ರನ್ಗಳ ಅವಶ್ಯಕತೆಯಿತ್ತು. ಗಯಾನ ತಂಡದ ನಾಯಕ ನಿಕೋಲಸ್ ಪೂರನ್ ಮತ್ತು ಬ್ರೆಂಡನ್ ಕಿಂಗ್ ಕ್ರೀಸ್ನಲ್ಲಿದ್ದು, ಚೇಸಿಂಗ್ ಉತ್ತಮವಾಗಿ ಸಾಗುತ್ತಿತ್ತು.
ಆದರೆ, 18ನೇ ಓವರ್ನಲ್ಲಿ ಬೌಲಿಂಗ್ ಇಳಿದ ಅನುಭವಿ ರವಿ ರಾಂಪಾಲ್ ಮೊದಲ ಎಸೆತದಲ್ಲೇ ಕಿಂಗ್ ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದರು. ನಂತರದ ಎಸೆತದಲ್ಲಿ ಸಿಕ್ಸರ್ ಸಿಡಿಸಲು ದೊಡ್ಡ ಹೊಡೆತ ಪ್ರಯೋಗಿಸಿದ ಪೂರನ್ ಕೂಡ ಅಕೀಲ್ ಹುಸೇನ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಆಫ್ ಸ್ಟಂಪ್ನಿಂದ ಹೊರ ಹೋಗುತ್ತಿದ್ದ ಚೆಂಡನ್ನು ಪೂರನ್ ಜೋರಾಗಿ ಬಾರಿಸಿದರು. ಕವರ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ 28 ವರ್ಷದ ಅಕೀಲ್ ಹುಸೇನ್ ಗಾಳಿಯಲ್ಲಿ ನೆಗೆದು ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು. ಈ ಕ್ಯಾಚ್ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದು, ಅಕೀಲ್ ಕ್ಷೇತ್ರರಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಶಹಬ್ಬಾಸ್ ಹೇಳುತ್ತಿದ್ದಾರೆ.
ಇನ್ನು ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಟಿಕೆಆರ್ ಪರ ಸೂಪರ್ ಓವರ್ ಮಾಡಿದ ನರೈನ್ 5 ಎಸೆತಗಳಲ್ಲಿ 2 ವಿಕೆಟ್ ಪಡೆದು ಕೇವಲ 6 ಬಿಟ್ಟುಕೊಟ್ಟರು. ಆದರೆ, ಪೊಲಾರ್ಡ್, ಮನ್ರೋ ಮತ್ತು ಸೀಫರ್ಟ್ರನ್ನೊಳಗೊಂಡ ಟಿಕೆಆರ್ ಗಯಾನ್ ತಂಡದ ರೊಮಾರಿಯೋ ಶೆಫರ್ಡ್ ಬೌಲಿಂಗ್ನಲ್ಲಿ ಕೇವಲ 4 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.
ವಿಡಿಯೋ ನೋಡಿ:
-
AMAZING!!! What a catch by Akeal Hosein our @fun88eng magic moment from match11. #CPL21 #TKRvGAW #CricketPlayedLouder #FUN88 pic.twitter.com/f2khmxAssy
— CPL T20 (@CPL) September 1, 2021 " class="align-text-top noRightClick twitterSection" data="
">AMAZING!!! What a catch by Akeal Hosein our @fun88eng magic moment from match11. #CPL21 #TKRvGAW #CricketPlayedLouder #FUN88 pic.twitter.com/f2khmxAssy
— CPL T20 (@CPL) September 1, 2021AMAZING!!! What a catch by Akeal Hosein our @fun88eng magic moment from match11. #CPL21 #TKRvGAW #CricketPlayedLouder #FUN88 pic.twitter.com/f2khmxAssy
— CPL T20 (@CPL) September 1, 2021