ETV Bharat / sports

'ಬಯಸಿದ್ದೆಲ್ಲವನ್ನೂ ಸಾಧಿಸಿದೆ, ಅತಿಥಿಯಾಗಿ ಹೆಚ್ಚು ದಿನ ಇರಬಾರದು': ಕೋಚ್​ ಹುದ್ದೆ ತೊರೆಯುವ ಸುಳಿವು ನೀಡಿದ ಶಾಸ್ತ್ರಿ - ಭಾರತೀಯ ಕ್ರಿಕೆಟ್ ಮಂಡಳಿ

2017ರಲ್ಲಿ ಟೀಂ ಇಂಡಿಯಾ ಕೋಚ್​ ಆಗಿ ನೇಮಕವಾಗಿದ್ದ ರವಿಶಾಸ್ತ್ರಿ ಆ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

Shastri
Shastri
author img

By

Published : Sep 18, 2021, 4:10 PM IST

Updated : Sep 18, 2021, 4:20 PM IST

ಹೈದರಾಬಾದ್​​: ಟೀಂ ಇಂಡಿಯಾ ಕ್ರಿಕೆಟ್​ನ ಮುಖ್ಯ ಕೋಚ್​​ ಹುದ್ದೆಯಲ್ಲಿರುವ ರವಿಶಾಸ್ತ್ರಿ ಟಿ - 20 ವಿಶ್ವಕಪ್​ ಬಳಿಕ ಆ ಸ್ಥಾನದಿಂದ ಕೆಳಗಿಳಿಯುವ ಮುನ್ಸೂಚನೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾತನಾಡಿರುವ ಅವರು ಬಯಸಿದ್ದೆಲ್ಲವನ್ನೂ ಸಾದಿಸಿದೆ. ಅತಿಥಿ ಹೆಚ್ಚು ದಿನ ಇರಬಾರದು ಎಂದು ಹೇಳಿಕೊಳ್ಳುವ ಮೂಲಕ ಕೋಚ್​​ ಸ್ಥಾನ ತೊರೆಯುವ ಸುಳಿವು ನೀಡಿದ್ದಾರೆ.

2016ರಲ್ಲಿ ಟೀಂ ಇಂಡಿಯಾ ಕೋಚ್​ ಆಗಿದ್ದ ಅನಿಲ್ ಕುಂಬ್ಳೆ ಆ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ 2017ರಲ್ಲಿ ಕೋಚ್​ ಸ್ಥಾನಕ್ಕೆ ಆಯ್ಕೆಯಾಗಿದ್ದ ರವಿಶಾಸ್ತ್ರಿ, 2019ರಲ್ಲಿ ಮತ್ತೊಮ್ಮೆ ಮರು ಆಯ್ಕೆಯಾಗಿದ್ದರು. ಟಿ - 20 ವಿಶ್ವಕಪ್​ ಮುಕ್ತಾಯದೊಂದಿಗೆ ಅವರ ಅವಧಿ ಪೂರ್ಣಗೊಳ್ಳಲಿದ್ದು, ಹೀಗಾಗಿ ಆ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.

ಲಂಡನ್​ ಪ್ರವಾಸದ ವೇಳೆ ಕೋವಿಡ್ ಸೋಂಕಿಗೊಳಗಾಗಿರುವ ರವಿಶಾಸ್ತ್ರಿ 10 ದಿನಗಳ ಕಾಲ ಕ್ವಾರಂಟೈನ್​ಗೊಳಗಾಗಿದ್ದು, ಈ ವೇಳೆ 'ದಿ ಗಾರ್ಡಿಯನ್' ಜೊತೆ ಮಾತನಾಡಿದ್ದಾರೆ. ಟಿ-20 ವಿಶ್ವಕಪ್​ ತಂಡಕ್ಕೆ ವಿಶೇಷವಾಗಿದೆ. ಆದರೆ, ನಾನು ಕೋಚ್​ ಆಗಿದ್ದ ಸಂದರ್ಭದಲ್ಲಿ ತಂಡ ಅನೇಕ ವಿಶೇಷ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಕೊನೆಯ ಟೆಸ್ಟ್​ ರದ್ದತಿಗೆ ಕಾರಣ ನಾನಲ್ಲ; ವದಂತಿಗೆ ಅಸಲಿ ಕಾರಣ ಕೊಟ್ಟ ಕೋಚ್ ರವಿಶಾಸ್ತ್ರಿ

ನಾನು ಬಯಸಿದ್ದೆಲ್ಲವನ್ನೂ ಸಾಧಿಸಿದ್ದೇನೆ ಎಂದು ಕೊಂಡಿದ್ದೇನೆ. ಐದು ವರ್ಷಗಳ ಕಾಲ ಟೆಸ್ಟ್​ನಲ್ಲಿ ನಂಬರ್​ 1 ಸ್ಥಾನ, ಆಸ್ಟ್ರೇಲಿಯಾ ವಿರುದ್ಧ ಎರಡು ಸಲ ಹಾಗೂ ಇಂಗ್ಲೆಂಡ್​ ವಿರುದ್ಧ ಮಹತ್ವದ ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಶಾಸ್ತ್ರಿ ಟೀಂ ಇಂಡಿಯಾ ಕೋಚ್​ ಆಗಿದ್ದ ಸಂದರ್ಭದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಟಿ -20 ಸರಣಿ ಗೆದ್ದಿದ್ದು, ಅನೇಕ ದೇಶಗಳ ವಿರುದ್ಧ ಟೆಸ್ಟ್​​ ಸರಣಿಯಲ್ಲೂ ಜಯ ಸಾಧಿಸಿದೆ.

ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ್​ ಮೈಕೇಲ್​ ಅಥರ್ಟನ್ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದ್ದೆ. ಕಾಂಗರೂ ನಾಡಲ್ಲಿ ಆಸ್ಟ್ರೇಲಿಯಾ ಸೋಲಿಸುವುದು ಹಾಗೂ ಇಂಗ್ಲೆಂಡ್​ ನೆಲದಲ್ಲಿ ಗೆಲುವು ಸಾಧಿಸುವುದು ನನ್ನ ಪ್ರಕಾರ ಅತಿದೊಡ್ಡ ಸಾಧನೆ. ಈಗಾಗಲೇ ನಾನು ಆ ಕೆಲಸ ಮಾಡಿದ್ದೇನೆ. ಸದ್ಯ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದ್ದೇವೆ ಎಂದಿದ್ದಾರೆ.​

Last Updated : Sep 18, 2021, 4:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.