ETV Bharat / sports

ಇಂದು ವಿಂಡೀಸ್​ ವಿರುದ್ಧ ಕೊನೆಯ ಟಿ20 ಪಂದ್ಯ : ಗಾಯಕ್ವಾಡ್​-ಶ್ರೇಯಸ್​ ಅಯ್ಯರ್​ ಕಣಕ್ಕಿಳಿಯುವ ಸಾಧ್ಯತೆ

3ನೇ ಟಿ20 ಪಂದ್ಯಕ್ಕೆ ವಿರಾಟ್​ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್​ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಕಳೆದ ಮೂರು ಸರಣಿಗಳಲ್ಲಿ ಬೆಂಚ್​ ಕಾಯ್ದಿರುವ ರುತುರಾಜ್ ಗಾಯಕ್ವಾಡ್​ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇನ್ನು ಇಶಾನ್​ ಕಿಶನ್​ ವಿಕೆಟ್​ ಕೀಪರ್​ ಆಗಿ ಮುಂದುವರಿಯಲಿದ್ದಾರೆ. ಏಕದಿನ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶ್ರೇಯಸ್​ ಅಯ್ಯರ್​ ಔಪಚಾರಿಕ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ..

Chance for Shreyas and Ruturaj as India look to test bench strength
ಭಾರತ ವೆಸ್ಟ್​ ಇಂಡೀಸ್​ 3ನೇ ಟಿ20 ಪಂದ್ಯ
author img

By

Published : Feb 20, 2022, 3:46 PM IST

ಕೋಲ್ಕತ್ತಾ : ವೆಸ್ಟ್​ ಇಂಡೀಸ್ ವಿರುದ್ಧ ಇಂದು ನಡೆಯಲಿರುವ ಕೊನೆಯ ಟಿ20 ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್​ ಸ್ವೀಪ್​ ಸಾಧಿಸುವ ಉತ್ಸಾಹದಲ್ಲಿರುವ ಭಾರತ ತಂಡ ಇಂದು ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಈಗಾಗಲೇ ವಿರಾಟ್​ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್​ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ, ಕಳೆದ ಮೂರು ಸರಣಿಗಳಲ್ಲಿ ಬೆಂಚ್​ ಕಾಯ್ದಿರುವ ರುತುರಾಜ್ ಗಾಯಕ್ವಾಡ್​ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಇಶಾನ್​ ಕಿಶನ್​ ವಿಕೆಟ್​ ಕೀಪರ್​ ಆಗಿ ಮುಂದುವರಿಯಲಿದ್ದಾರೆ. ಏಕದಿನ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶ್ರೇಯಸ್​ ಅಯ್ಯರ್​ ಔಪಚಾರಿಕ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ದೀಪಕ್​ ಚಾಹರ್​ ಮತ್ತು ಹರ್ಷಲ್​ ಪಟೇಲ್​ ಬದಲಿಗೆ ಮೊಹಮ್ಮದ್ ಸಿರಾಜ್, ಆವೇಶ್​ ಖಾನ್ ಅಥವಾ ಶಾರ್ದೂಲ್​ ಠಾಕೂರ್, ಸ್ಪಿನ್ನರ್​ ವಿಭಾಗದಲ್ಲಿ ಕುಲ್ದೀಪ್​ ಯಾದವ್​ಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.

2ನೇ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಿ ಯಶಸ್ವಿಯಾಗಿರುವ ಭಾರತ ಮತ್ತೊಮ್ಮೆ ಇಂದಿನ ಪಂದ್ಯದಲ್ಲೂ ಟಾಸ್​ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಡಿಫೆಂಡಿಂಗ್​ನಲ್ಲೂ ತಂಡದ ಬಲವನ್ನು ಪರೀಕ್ಷೆ ಮಾಡಿದರೂ ಅಚ್ಚರಿಯಿಲ್ಲ.

ಇತ್ತ ಸತತ 5 ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಸೋಲು ಕಂಡಿರುವ ವೆಸ್ಟ್​ ಇಂಡೀಸ್​ ಕೊನೆಯ ಪಂದ್ಯವನ್ನಾದರೂ ಗೆದ್ದು ಖುಷಿಯಿಂದ ಪ್ರವಾಸವನ್ನು ಮುಗಿಸುವ ಇರಾದೆಯಲ್ಲಿದೆ.

ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್​), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಲ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಅವೇಶ್ ಖಾನ್

ವೆಸ್ಟ್ ಇಂಡೀಸ್ ತಂಡ : ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೆಟ್​ ಕೀಪರ್​), ರೋವ್‌ಮನ್ ಪೊವೆಲ್, ಕೀರನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ರಾಸ್ಟನ್ ಚೇಸ್, ಒಡಿಯನ್ ಸ್ಮಿತ್, ಅಕೀಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಶೆಲ್ಡನ್ ಕಾಟ್ರೆಲ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಅಲೆನ್, ಶಾಯ್​ ಹೋಪ್, ಡ್ವೇನ್​ ಬ್ರಾವೋ, ಡೊಮಿನಿಕ್ ಡ್ರೇಕ್ಸ್, ಹೇಡನ್ ವಾಲ್ಷ್.

ಇದನ್ನೂ ಓದಿ:ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ 2 ಶತಕ ಸಿಡಿಸಿ ದಾಖಲೆ ಬರೆದ ಯಶ್​ ಧುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.