ETV Bharat / sports

ಐಪಿಎಲ್​ನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದು ನಂಬೋಕೆ ಆಗ್ತಿಲ್ಲ: ಕ್ಯಾಮರೂನ್​ ಗ್ರೀನ್​

ಐಪಿಎಲ್​ನಲ್ಲಿ 17.5 ಕೋಟಿಗೆ ಕ್ಯಾಮರೂನ್​ ಗ್ರೀನ್​ ಬಿಕರಿ - ಮುಂಬೈ ಪಾಲಾಗಿದ್ದಕ್ಕೆ ಆಸ್ಟ್ರೇಲಿಯಾ ಆಟಗಾರ ಖುಷ್​- ಜೀವಮಾನದ ಮೌಲ್ಯ ಪಡೆದ ಆಸೀಸ್​ ಆಲ್​ರೌಂಡರ್​

cameron-green-on-ipl-payday
ಕ್ಯಾಮರೂನ್​ ಗ್ರೀನ್​
author img

By

Published : Dec 27, 2022, 9:21 AM IST

ಮೆಲ್ಬೋರ್ನ್: ಶ್ರೀಮಂತ ಕ್ರೀಡಾಕೂಟಗಳಲ್ಲಿ ಒಂದಾದ ಇಂಡಿಯನ್​​ ಪ್ರೀಮಿಯರ್​ ಲೀಗ್​ನಲ್ಲಿ ಆಸ್ಟ್ರೇಲಿಯಾ ಆಲ್​ರೌಂಡರ್​ ಕ್ಯಾಮರೂನ್​ ಗ್ರೀನ್​ ಈ ಬಾರಿ ಬಂಪರ್​ ಬೆಳೆ ಬೆಳೆದಿದ್ದಾರೆ. ಮಿನಿ ಹರಾಜಿನಲ್ಲಿ 17.5 ಕೋಟಿ ರೂಪಾಯಿಗೆ ಮುಂಬೈ ಪಾಲಾದ ಗ್ರೀನ್​ಗಿದು ನಂಬಲಸಾಧ್ಯವಾದ ವಿಷಯವಾಗಿದೆ.

ಈ ಬಗ್ಗೆ ಕ್ರಿಕೆಟ್​ ಚಾನಲ್​ವೊಂದಕ್ಕೆ ಹೇಳಿಕೆ ನೀಡಿರುವ ಕ್ಯಾಮರೂನ್​, ನಾನು ಇಷ್ಟು ಮೊತ್ತದ ಬಿಡ್​ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಇದು ನಿಜಕ್ಕೂ ನಂಬಲು ಆಗುತ್ತಿಲ್ಲ. ಟಿ20 ಕ್ರಿಕೆಟ್​ನಲ್ಲಿ ನಾನು ಸಾಧಿಸುವುದು ಹೆಚ್ಚಿದೆ. ಮುಂಬೈ ತಂಡ ನನ್ನನ್ನು ದುಬಾರಿ ಬೆಲೆಗೆ ಖರೀದಿ ಮಾಡಿದ್ದು, ಕ್ರಿಕೆಟ್​ ಜೀವನ ಅತ್ಯುತ್ತಮ ಹಂತವಾಗಿದೆ ಎಂದು ಹೇಳಿದ್ದಾರೆ.

ಹರಾಜಿನಲ್ಲಿ ನಾನು ಬಿಡ್​ ಆದಾಗ ಉತ್ತಮ ಮೊತ್ತಕ್ಕೆ ಖರೀದಿ ಕಾಣುತ್ತೇನೆ ಎಂದು ಭಾವಿಸಿದ್ದೆ. ಟಿ-20 ಕ್ರಿಕೆಟ್​ನಲ್ಲಿ ಈಗಿನ ನನ್ನ ಸಾಧನೆ ಸಾಲದು. 'ಜೀವಮಾನದ ಮೌಲ್ಯ' ಪಡೆಯುವಷ್ಟು ಸಾಧನೆ ನನ್ನಿಂದ ಇನ್ನೂ ಬಂದಿಲ್ಲ. ಮುಂದೆ ಸಾಧಿಸಬೇಕಾದುದು ಹೆಚ್ಚಿದೆ. ಮುಂಬೈ ತಂಡ ನನ್ನ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದೆ. ಅದನ್ನು ಸಾಕಾರ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಹರಾಜಿನ ವೇಳೆ ನನಗೆ ತುಸು ಭಯ ಕಾಡಿತ್ತು. ಎಷ್ಟು ಮೊತ್ತಕ್ಕೆ ಖರೀದಿ ಕಾಣುತ್ತೇನೆ ಎಂಬ ದುಗುಡ ಇತ್ತು. ದೊಡ್ಡ ಮೊತ್ತಕ್ಕೆ ಬಿಕರಿಯಾದ ಬಳಿಕ ನಾನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ ನಿರಾಳವಾಗಿ ಆಟವಾಡಲು ಸಾಧ್ಯವಾಯಿತು. ಬಲಿಷ್ಠ ತಂಡಕ್ಕೆ ನಾನು ಸೇರಿದ್ದೇನೆ. ಉತ್ತಮ ಪ್ರದರ್ಶನ ನೀಡಿ ನನ್ನ ಸಾಮರ್ಥ್ಯ ಸಾಬೀತು ಮಾಡುತ್ತೇನೆ ಎಂದು ಗ್ರೀನ್​ ಅಭಯ ನೀಡಿದರು.

ಹರಾಜಿನಲ್ಲಿ ದೆಹಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಆಸ್ಟ್ರೇಲಿಯಾದ ಆಲ್​ರೌಂಡರ್​ ಖರೀದಿಗೆ ಜಿದ್ದಿಗೆ ಬಿದ್ದಂತೆ ಹಣ ಬಿಡ್​ ಮಾಡುತ್ತಿದ್ದವು. ಕೊನೆಯಲ್ಲಿ 5 ಬಾರಿಯ ಚಾಂಪಿಯನ್​ ಮುಂಬೈ ಕ್ಯಾಮರೂನ್​ಗೆ ಗ್ರೀನ್​ಗೆ 17.5 ಕೋಟಿ ರೂಪಾಯಿ ನೀಡಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಇನ್ನು ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನದಲ್ಲಿ ಕ್ಯಾಮರೂನ್​ ಗ್ರೀನ್ ಮೊದಲ ಬಾರಿಗೆ ಟೆಸ್ಟ್​ನಲ್ಲಿ 5 ವಿಕೆಟ್ ಗೊಂಚಲು ಪಡೆದರು.

ಓದಿ: ಕೆ ಎಲ್​ ರಾಹುಲ್​ ಕಳಪೆ ಪ್ರದರ್ಶನ: ಶ್ರೀಲಂಕಾ ವಿರುದ್ಧದ ಸರಣಿಯಿಂದ ಕೈ ಬಿಡುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.