ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಮುಗಿಯುವ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತವಾಗಿದ್ದು, ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯಗೊಂಡು ಮೈದಾನ ತೊರೆದಿದ್ದಾರೆ.
272 ರನ್ಗಳ ಮೊದಲ ದಿನದಾಟದ ಬಳಿಕ ಮೂರನೇ ದಿನ ಕಣಕ್ಕಿಳಿದಿದ್ದ ಭಾರತ ಲುಂಗಿ ಎಂಗಿಡಿ ದಾಳಿಗೆ ಸಿಲುಕಿ ದಿಢೀರ್ ಕುಸಿತ ಕಂಡು 327 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆದರೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಬೌಲರ್ಗಳ ದಕ್ಷಿಣ ಆಫ್ರಿಕಾ ಆರಂಭಿಕ ನಾಲ್ವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು.
-
Bumrah twisted his ankle in followthrough. pic.twitter.com/FeTgrMicuo
— Sai Krishna (@intentmerchants) December 28, 2021 " class="align-text-top noRightClick twitterSection" data="
">Bumrah twisted his ankle in followthrough. pic.twitter.com/FeTgrMicuo
— Sai Krishna (@intentmerchants) December 28, 2021Bumrah twisted his ankle in followthrough. pic.twitter.com/FeTgrMicuo
— Sai Krishna (@intentmerchants) December 28, 2021
ವೇಗಿ ಜಸ್‌ಪ್ರೀತ್ ಬುಮ್ರಾ ತಾವೆಸದ ಮೊದಲ ಓವರ್ನಲ್ಲೇ ಎದುರಾಳಿ ತಂಡದ ನಾಯಕ ಡೀನ್ ಎಲ್ಗರ್ (1) ವಿಕೆಟ್ ಪಡೆದಿದ್ದರು. ಆದರೆ ತಮ್ಮ ಮೊದಲ ಸ್ಪೆಲ್ನ 6ನೇ ಓವರ್ ಫಾಲೋ ಥ್ರೋ ಎಸೆಯುವಾಗ ಕಾಲು ಉಳುಕಿಸಿಕೊಂಡರು.
"ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದಾಗ ಬುಮ್ರಾ ಬಲ ಪಾದ ಉಳುಕಿಸಿಕೊಂಡಿದ್ದಾರೆ. ವೈದ್ಯಕೀಯ ತಂಡ ಈ ಸಮಯದಲ್ಲಿ ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಶ್ರೇಯಸ್ ಅಯ್ಯರ್ ಅವರ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾರೆ" ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.
ಬುಮ್ರಾ ಮೈದಾನ ತೊರೆಯುವ ಮುನ್ನ 5.5 ಓವರ್‌ಗಳಲ್ಲಿ ಒಂದು ಮೆಡನ್ ಸಹಿತ ಕೇವಲ 12 ರನ್‌ಗಳನ್ನು ಮಾತ್ರ ನೀಡಿ ಒಂದು ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ:'ಐಸಿಸಿ ವರ್ಷದ ಟೆಸ್ಟ್ ಆಟಗಾರ' ಪ್ರಶಸ್ತಿಗೆ ಅಶ್ವಿನ್, ರೂಟ್ ಜೇಮಿಸನ್, ಕರುಣರತ್ನೆ ಮಧ್ಯೆ ಪೈಪೋಟಿ