ಮುಂಬೈ: ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದಿದೆ. ಟೀಂ ಇಂಡಿಯಾ 372 ರನ್‌ಗಳ ದೊಡ್ಡ ಅಂತರದಿಂದ ಗೆದ್ದು ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ಗೆ ಪ್ಲೇಯರ್ ಆಫ್ದ ಮ್ಯಾಚ್, ರವಿಚಂದ್ರನ್ ಅಶ್ವಿನ್ಗೆ ಪ್ಲೇಯರ್ ಆಫ್ ದ ಸಿರೀಸ್ ನೀಡಿ ಗೌರವಿಸಲಾಗಿದೆ.
-
In Sync! ☺️
— BCCI (@BCCI) December 6, 2021 " class="align-text-top noRightClick twitterSection" data="
How's that for a quartet! 🇮🇳 🇳🇿#INDvNZ #TeamIndia @Paytm pic.twitter.com/eKqDIIlx7m
">In Sync! ☺️
— BCCI (@BCCI) December 6, 2021
How's that for a quartet! 🇮🇳 🇳🇿#INDvNZ #TeamIndia @Paytm pic.twitter.com/eKqDIIlx7mIn Sync! ☺️
— BCCI (@BCCI) December 6, 2021
How's that for a quartet! 🇮🇳 🇳🇿#INDvNZ #TeamIndia @Paytm pic.twitter.com/eKqDIIlx7m
ಬಿಸಿಸಿಐ ಸೋಮವಾರ ತನ್ನ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ. ಅಕ್ಷರ್ ಪಟೇಲ್, ಅಜಾಜ್ ಪಟೇಲ್, ರಚಿನ್ ರವೀಂದ್ರ ಮತ್ತು ರವೀಂದ್ರ ಜಡೇಜಾ ಅವರು ಸಾಲಾಗಿ ನಿಂತಿರುವ ಫೋಟೋ ಇದಾಗಿದ್ದು, ಆದರೂ ವಿಶೇಷವಾಗಿದೆ.
ಹೌದು, ನಾಲ್ಕೂ ಮಂದಿ ತಮ್ಮ ಜರ್ಸಿಯ ಹಿಂಭಾಗ ತೋರಿಸುವಂತಿರುವ ಫೋಟೋ ಹಂಚಿಕೊಳ್ಳಲಾಗಿದ್ದು, ಅವರ ಜೆರ್ಸಿಯ ಮೇಲಿನ ಹೆಸರುಗಳನ್ನು ಓದಿದರೆ, ಅಕ್ಷರ್ ಪಟೇಲ್ ಮತ್ತ ರವೀಂದ್ರ ಜಡೇಜಾ ಎಂಬ ಹೆಸರುಗಳು ಬರಲಿವೆ. ಇದು ಹೇಗಿದೆ ಎಂದು ಬಿಸಿಸಿಐ ಟ್ವೀಟ್ನಲ್ಲಿ ಪ್ರಶ್ನಿಸಿದೆ.
ಐಸಿಸಿ ಕೂಡಾ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, 'ಪಿಕ್ಚರ್ ಪರ್ಫೆಕ್ಟ್ ಎಂದು ಶೀರ್ಷಿಕೆ ನೀಡಿದೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾದ ಇಂದಿನ ದಾಖಲೆಗಳು ಇವು..