ETV Bharat / sports

ಇಂಗ್ಲೆಂಡ್​ ವಿರುದ್ಧದ ಫೈನಲ್ ಟೆಸ್ಟ್​ ರದ್ದು: ಹೆಚ್ಚುವರಿ ಎರಡು T20 ಪಂದ್ಯ ಆಡಲು ಬಿಸಿಸಿಐ ಆಫರ್​​

author img

By

Published : Sep 13, 2021, 9:48 PM IST

ಕೊರೊನಾ ವೈರಸ್ ಕಾರಣದಿಂದಾಗಿ ಭಾರತ-ಇಂಗ್ಲೆಂಡ್ ನಡುವೆ 5ನೇ ಟೆಸ್ಟ್​ ಪಂದ್ಯ ರದ್ಧಾಗಿದೆ. ಇದರಿಂದ ಇಂಗ್ಲೆಂಡ್​ ಬೋರ್ಡ್​ಗೆ ಆಗಿರುವ ನಷ್ಟ ತುಂಬಿಕೊಡಲು ನಿರ್ಧರಿಸಿರುವ ಬಿಸಿಸಿಐ ಹೊಸದೊಂದು ಆಫರ್ ನೀಡಿದೆ.

india vs England
india vs England

ಮುಂಬೈ: ಇಂಗ್ಲೆಂಡ್​ ವಿರುದ್ಧ ಮ್ಯಾಂಚೆಸ್ಟರ್​ ಮೈದಾನದಲ್ಲಿ ಆಯೋಜನೆಗೊಂಡಿದ್ದ ಫೈನಲ್​​ ಟೆಸ್ಟ್​​ ಪಂದ್ಯ ಕೋವಿಡ್​ನಿಂದ ರದ್ಧಾಗಿದ್ದು, ಇದರಿಂದ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ಗೆ 300 ಕೋಟಿ ರೂ. ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಕ್ರಿಕೆಟ್ ಮಂಡಳಿ ಹೊಸ ಪ್ರಸ್ತಾಪ ಮುಂದಿಟ್ಟಿದೆ.

ಉಭಯ ತಂಡಗಳ ನಡುವಿನ ಫೈನಲ್​ ಟೆಸ್ಟ್​ ಪಂದ್ಯ ರದ್ಧುಗೊಂಡಿರುವ ಕಾರಣ ಇಂಗ್ಲೆಂಡ್​ ಬೋರ್ಡ್​ಗೆ ಆಗಿರುವ ನಷ್ಟ ಸರಿದೂಗಿಸಿಕೊಳ್ಳಲು ಎರಡು ಹೆಚ್ಚುವರಿ ಟಿ-20 ಪಂದ್ಯಗಳನ್ನಾಡಲು ಬಿಸಿಸಿಐ​ ಮುಂದಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

Jay Shah
ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬ್ರೆಂಡನ್ ಟೇಲರ್​​ ವಿದಾಯ ಘೋಷಣೆ

ಮುಂದಿನ ವರ್ಷ ಜುಲೈ ತಿಂಗಳಲ್ಲಿ ಟೀಂ ಇಂಡಿಯಾ ನಿಗದಿತ ಓವರ್​ಗಳ ಕ್ರಿಕೆಟ್ ಸರಣಿ ಆಡಲು ಮತ್ತೊಮ್ಮೆ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಆಯೋಜನೆಗೊಂಡಿವೆ. ಈ ವೇಳೆ ಮೂರು ಟಿ-20 ಬದಲು ಐದು ಟಿ-20 ಪಂದ್ಯಗಳನ್ನಾಡಲು ಬಿಸಿಸಿಐ ಪ್ರಸ್ತಾಪ ಮುಂದಿಟ್ಟಿದೆ.

ಮ್ಯಾಂಚೆಸ್ಟರ್​ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ 5ನೇ ಟೆಸ್ಟ್​ ಪಂದ್ಯ ಆಯೋಜನೆಗೊಂಡಿತ್ತು. ಪಂದ್ಯ ಆರಂಭಗೊಳ್ಳಲು ಕೇವಲ 2 ಗಂಟೆ ಬಾಕಿ ಇರುವಾಗ ಟೀಂ ಇಂಡಿಯಾ ಪಂದ್ಯ ಆಡಲು ಹಿಂದೇಟು ಹಾಕಿತ್ತು. ಇದಕ್ಕೆ ಕಾರಣವಾಗಿದ್ದು ತಂಡದ ಕ್ಯಾಂಪ್​ನಲ್ಲಿ ಕಂಡು ಬಂದಿದ್ದ ಮಹಾಮಾರಿ ಕೊರೊನಾ ವೈರಸ್​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.