ETV Bharat / sports

ಗೋಜಲಾದ ಭಾರತ ಕ್ರಿಕೆಟ್​ ತಂಡದ ಆಯ್ಕೆ.. ಅಸಮಾಧಾನಕ್ಕೆ ಕಾರಣವಾಗುತ್ತಿವೆಯಾ  ಬಿಸಿಸಿಐ ನಿರ್ಧಾರಗಳು?

ಭಾರತ ಕ್ರಿಕೆಟ್​ ತಂಡದ ಪ್ರದರ್ಶನದ ಮೇಲೆ ಟೀಕೆಗಳು ಕೇಳಿ ಬರುತ್ತಿರುವ ನಡುವೆ, ಬಿಸಿಸಿಐ ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇದು ತಂಡದ ಸಂಯೋಜನೆಗೆ ಧಕ್ಕೆ ತರಲಿದೆಯಾ ಎಂಬ ಅನುಮಾನ ಮೂಡಿದೆ.

bcci-confused-on-future-plan
ಗೋಜಲಾದ ಭಾರತ ಕ್ರಿಕೆಟ್​ ತಂಡದ ಆಯ್ಕೆ
author img

By

Published : Dec 13, 2022, 1:08 PM IST

Updated : Dec 13, 2022, 1:21 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಆಯ್ಕೆಯೇ ಈಗ ಚರ್ಚಾ ವಿಷಯವಾಗಿದೆ. ಆಟಗಾರರ ಜೊತೆಗೆ ನಾಯಕ, ಉಪನಾಯಕನ ನೇಮಕವೂ ಅಚ್ಚರಿ ಮೂಡಿಸಿದೆ. ಬಾಂಗ್ಲಾದೇಶದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ ಸರಣಿಗೆ ಗಾಯಾಳು ರೋಹಿತ್​ ಶರ್ಮಾ ಬದಲಿಗೆ, ಕೆಎಲ್​ ರಾಹುಲ್​ ನಾಯಕತ್ವ ವಹಿಸಿಕೊಂಡಿದ್ದಾರೆ. ಉಪನಾಯಕನಾಗಬೇಕಿದ್ದ ರಿಷಬ್​ ಪಂತ್​ ಬದಲಿಗೆ, ಚೇತೇಶ್ವರ್​ ಪೂಜಾರ ಅವರನ್ನು ತಂದು ಕೂರಿಸುವ ಮೂಲಕ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಶಾಕ್ ನೀಡಿದೆ.

ಪೂಜಾರ ಟೀಂ ಇಂಡಿಯಾ ಟೆಸ್ಟ್​ ಉಪನಾಯಕನಾಗಿದ್ದು, ಅಚ್ಚರಿಯ ಜೊತೆಗೆ ಗೊಂದಲ ಉಂಟು ಮಾಡಿದೆ. ರಿಷಬ್​ ಪಂತ್​ ಮತ್ತು ಕೆಎಲ್​ ರಾಹುಲ್​ ಭವಿಷ್ಯದ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ಆಟದ ಮೊನಚು ಕಳೆದುಕೊಂಡಿದ್ದ ಪಂತ್​ ವೈದ್ಯಕೀಯ ಕಾರಣಕ್ಕಾಗಿ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದರು.

ರಿಷಬ್​ ಪಂತ್​ ಬದಲಿಗೆ ಪೂಜಾರಾಗೆ ಉಪನಾಯಕನ ಪಟ್ಟ

ಟೆಸ್ಟ್​ಗೆ ಮರಳಿರುವ ಪಂತ್​ ಉಪನಾಯಕನಾಗಿ ಅನುಭವ ಪಡೆದುಕೊಳ್ಳಲಿದ್ದಾರೆ ಎನ್ನುವ ವೇಳೆಗೆ ಬಿಸಿಸಿಐ ಮಹತ್ತರ ನಿರ್ಧಾರ ಪ್ರಕಟಿಸಿ ಚೇತೇಶ್ವರ ಪೂಜಾರರನ್ನು ಆ ಸ್ಥಾನಕ್ಕೆ ಕೂರಿಸಿದೆ. ಇದು ಕ್ರಿಕೆಟ್​ ಅಭಿಮಾನಿಗಳಲ್ಲಿ ಅಚ್ಚರಿಯ ಜೊತೆಗೆ ನಿರ್ಧಾರದ ಬಗ್ಗೆ ಅಸಮಾಧಾನವನ್ನುಂಟು ಮಾಡಿದೆ.

ಬಿಸಿಸಿಐ ಯಾವ ಆಧಾರದ ಮೇಲೆ ಚೇತೇಶ್ವರ್ ಪೂಜಾರರನ್ನು ಉಪನಾಯಕನನ್ನಾಗಿ ಮಾಡಿತು ಎಂಬುದೇ ಪ್ರಶ್ನೆಯಾಗಿದೆ. ಟಿ-20 ಯಲ್ಲಿ ವೈಫಲ್ಯ ಕಂಡಿರುವ ರೋಹಿತ್​ ಬದಲಿಗೆ ಬೇರೊಬ್ಬ ನಾಯಕನ ಆಯ್ಕೆಗೆ ಕೂಗು ಕೇಳಿಬಂದಿದೆ. ಏಕದಿನದಲ್ಲೂ ತಂಡದ ಪ್ರದರ್ಶನ ಕುಗ್ಗಿದೆ. ಈಗ ಟೆಸ್ಟ್​ನಲ್ಲೂ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಆಯ್ಕೆ, ಮರು ಆಯ್ಕೆಯ ಗೋಜಲು: ತಂಡದ ಆಯ್ಕೆಯೇ ತುಂಬಾ ಗೋಜಲಾಗಿದೆ. ಗಾಯಗೊಂಡು ಫಿಟ್​ನೆಸ್​​ ಪರೀಕ್ಷೆಗೆ ಒಳಗಾಗದ ರವೀಂದ್ರ ಜಡೇಜಾ, ಮೊಹಮದ್​ ಶಮಿಯನ್ನು ಟೆಸ್ಟ್​ ತಂಡಕ್ಕೆ ಮೊದಲು ಆಯ್ಕೆ ಮಾಡಿತ್ತು. ಬಳಿಕ ಕೈಬಿಟ್ಟು ಬೇರೊಬ್ಬರನ್ನು ಮರು ಆಯ್ಕೆ ಮಾಡಲಾಯಿತು. ಇದು ತಂಡದ ಸಂಯೋಜನೆಯನ್ನೇ ಬುಡಮೇಲು ಮಾಡಿದೆ. ಆಟಗಾರರು ಫಿಟ್​ ಆಗಿರದಿದ್ದರೂ ತಂಡಕ್ಕೆ ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಚೇತೇಶ್ವರ್​ ಪೂಜಾರ ಶಾಕಿಂಗ್​ ನಿರ್ಧಾರ: ಇನ್ನು ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಗೆ ಚೇತೇಶ್ವರ್​ ಪೂಜಾರ ಉಪನಾಯಕನಾಗಿ ಆಯ್ಕೆಯಾಗಿದ್ದು ಅಚ್ಚರಿಯ ವಿದ್ಯಮಾನವಾಗಿದೆ. ನಾಯಕನಾಗಿ ಬೆಳೆಯುತ್ತಿರುವ ಪಂತ್​ರನ್ನು ಕೈಬಿಟ್ಟಿರುವ ಬಿಸಿಸಿಐ ಯಾವ ಆಧಾರದ ಮೇಲೆ ಪೂಜಾರಗೆ ಮಣೆ ಹಾಕಲಾಗಿದೆ ಎಂಬುದೇ ನಿಗೂಢವಾಗಿದೆ.

ಮೂರು ಮಾದರಿಗೆ ಪ್ರತ್ಯೇಕ ನಾಯಕರ ಆಯ್ಕೆಗೆ ಕೂಗು ಕೇಳಿ ಬಂದಿರುವ ಮಧ್ಯೆಯೇ ಕ್ರಿಕೆಟ್​ ಜೀವನದ ಅಂಚಿನಲ್ಲಿರುವ ಪೂಜಾರಗೆ ಹೊಣೆ ನೀಡಿರುವುದೇ ಆಕ್ಷೇಪಾರ್ಹವಾಗಿದೆ. ಇದು ತಂಡವಲ್ಲದೇ, ಅಭಿಮಾನಿಗಳಲ್ಲೂ ಗೊಂದಲ ಉಂಟು ಮಾಡಿದೆ. ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ, ಟೆಸ್ಟ್​ಗೆ ಪೂರ್ಣವಾಗಿ ಸಜ್ಜಾಗಬೇಕಿದೆ. ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​​ನಲ್ಲಿ ಭಾರತ ಆಡಬೇಕಾದರೆ ಸರಣಿ ಗೆಲುವು ಮುಖ್ಯವಾಗಿದೆ.

ಓದಿ: ಬಿಸಿಸಿಐ ವಾರ್ಷಿಕ ಒಪ್ಪಂದ: ಸೂರ್ಯಕುಮಾರ್​​, ಹಾರ್ದಿಕ್​ಗೆ ಬಂಪರ್​ : ರಹಾನೆ, ಇಶಾಂತ್ ಔಟ್​?

Last Updated : Dec 13, 2022, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.