ದುಬೈ: ಸ್ಫೋಟಕ ಬ್ಯಾಟ್ಸ್ಮನ್ಗಳ ದಂಡನ್ನೇ ಹೊಂದಿರುವ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಐಪಿಎಲ್ನ 32ನೇ ಪಂದ್ಯದಲ್ಲಿ ಇಂದು ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೆ ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದಾಗಿದ್ದು, ಗೆಲುವಿಗಾಗಿ ಹಾತೊರೆಯುತ್ತಿವೆ.
ಪಂಜಾಬ್ ಕಿಂಗ್ಸ್ 2021ರ ಐಪಿಎಲ್ನಲ್ಲಿ 8 ಪಂದ್ಯಗಳನ್ನಾಡಿ 5 ಸೋಲು, 3 ಗೆಲುವಿನೊಂದಿಗೆ 7ನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲಿ 4 ಸೋಲು 3 ಗೆಲುವಿನೊಂದಿಗೆ 6ನೇ ಸ್ಥಾನದಲ್ಲಿದೆ. ಎರಡು ತಂಡಗಳು ಭಾರತದಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಪಂಜಾಬ್ ರೋಚಕ ಜಯ ಸಾಧಿಸಿತ್ತು. ಪಂಜಾಬ್ 221 ರನ್ಗಳಿಸಿದರೆ ರಾಯಲ್ಸ್ 217 ರನ್ಗಳಿಸಿ ಕೇವಲ 4 ರನ್ಗಳಿಂದ ಸೋಲು ಕಂಡಿತ್ತು. ನಾಯಕತ್ವಕ್ಕೆ ಪದಾರ್ಪಣೆ ಮಾಡಿದ್ದ ಸಂಜು ಸಾಮ್ಸನ್ 119 ರನ್ಗಳಿಸಿದರೂ ಗೆಲುವು ತಂದುಕೊಡುವಲ್ಲಿ ವಿಫಲರಾಗಿದ್ದರು.
ಇದೀಗ ಮುಂದೆ ನಡೆಯುವ ಪ್ರತಿಯೊಂದು ಪಂದ್ಯಗಳು ಎರಡೂ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯಗಳಾಗಲಿವೆ. ಈಗಾಗಲೇ ಸಿಎಸ್ಕೆ , ಡೆಲ್ಲಿ ಪ್ಲೇ ಆಫ್ಗೆ ಬಹುತೇಕ ಹತ್ತಿರವಾಗಿವೆ. ಬೆಂಗಳೂರು ತಂಡ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಮುಂಬೈ 8 ಅಂಕದೊಂದಿಗೆ 4ನೇ ಸ್ಥಾನಸದಲ್ಲಿವೆ. ಹಾಗಾಗಿ ಎರಡೂ ತಂಡಗಳೂ ಪ್ಲೇ ಆಫ್ಗಾಗಿ ಕಠಿಣ ಪೈಪೋಟಿ ನಡೆಸಬೇಕಾಗಿದೆ.
ಮುಖಾಮುಖಿ
ಐಪಿಎಲ್ನಲ್ಲಿ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ರಾಜಸ್ಥಾನ್ 12 ಮತ್ತು ಪಂಜಾಬ್ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.
ಸಂಭಾವ್ಯ ಪಂಜಾಬ್ ತಂಡ: ಕೆ.ಎಲ್.ರಾಹುಲ್ (ನಾಯಕ ಮತ್ತು ವಿಕೀ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್ / ಐಡೆನ್ ಮ್ಯಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಆದಿಲ್ ರಶೀದ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ನೇಥನ್ ಎಲ್ಲಿಸ್, ಮೊಹಮ್ಮದ್ ಶಮಿ
ಸಂಭಾವ್ಯ ರಾಜಸ್ಥಾನ್ ತಂಡ: ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೀ), ರಿಯಾನ್ ಪರಾಗ್, ಶಿವಂ ದುಬೆ, ಲಿಯಾಮ್ ಲಿವಿಂಗ್ಸ್ಟೋನ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ, ಮುಸ್ತಫಿಜುರ್ ರಹಮಾನ್/ತಬ್ರೈಜ್ ಶಮ್ಸಿ.
ಇದನ್ನೂ ಓದಿ:14 ಟಿ20, 4 ಟೆಸ್ಟ್ ಸೇರಿ 3 ಏಕದಿನ ಪಂದ್ಯ: 2021-22ನೇ ಸಾಲಿನ ಟೀಂ ಇಂಡಿಯಾ ವೇಳಾಪಟ್ಟಿ ರಿಲೀಸ್