ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ಸತತ ಎರಡರಲ್ಲಿ ಗೆಲುವು ಸಾಧಿಸಿ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಈ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಏಕದಿನ ಸರಣಿಯ ಸೋಲಿನ ಹಗೆಯನ್ನು ತೀರಿಸಿಕೊಂಡಿದೆ. ಕೊನೆಯ ಪಂದ್ಯ ಮಾರ್ಚ್ 14 ರಂದು ನಡೆಯಲಿದ್ದು, ಅದರಲ್ಲಿ ಆಂಗ್ಲರು ಗೆದ್ದು ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಳ್ಳಬೇಕಿದೆ.
ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ 4 ವಿಕೆಟ್‌ಗಳ ಜಯ ಸಾಧಿಸಿದೆ. ಮೀರ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ ಕೇವಲ 117 ರನ್ ಗಳಿಸಿತು. ಯಾವುದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ 28 ರನ್‌ಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಬೆನ್ ಡಕೆಟ್ 28 ಎಸೆತಗಳಲ್ಲಿ ಗರಿಷ್ಠ 28 ರನ್ ಗಳಿಸಿದರು. ಇದಲ್ಲದೇ ಫಿಲ್ ಸಾಲ್ಟ್ 19 ಎಸೆತಗಳಲ್ಲಿ 25 ರನ್ ಗಳಿಸಿದರು. ಅದೇ ಸಮಯದಲ್ಲಿ ಮೊಯಿನ್ ಅಲಿ 17 ಎಸೆತಗಳಲ್ಲಿ 15 ರನ್, ಸ್ಯಾಮ್ ಕುರ್ರಾನ್ 16 ಎಸೆತಗಳಲ್ಲಿ 12 ಮತ್ತು ರೆಹಾನ್ ಅಹ್ಮದ್ 11 ಎಸೆತಗಳಲ್ಲಿ 11 ರನ್ ಗಳಿಸಿದರು.
ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಜ್ 4 ಓವರ್ ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಮೀರಜ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶಕೀಬ್ ಅಲ್ ಹಸನ್ ಮತ್ತು ಹಸನ್ ಮಹಮೂದ್ ತಲಾ ಒಂದು ವಿಕೆಟ್ ಪಡೆದರು.
-
A vital knock from Najmul Hossain Shanto helps Bangladesh to a win against England 👊
— ICC (@ICC) March 12, 2023 " class="align-text-top noRightClick twitterSection" data="
They take an unassailable 2-0 lead in the T20I series 👏#BANvENG | 📝: https://t.co/U5vJBPZYYx pic.twitter.com/G7ocll5Rs0
">A vital knock from Najmul Hossain Shanto helps Bangladesh to a win against England 👊
— ICC (@ICC) March 12, 2023
They take an unassailable 2-0 lead in the T20I series 👏#BANvENG | 📝: https://t.co/U5vJBPZYYx pic.twitter.com/G7ocll5Rs0A vital knock from Najmul Hossain Shanto helps Bangladesh to a win against England 👊
— ICC (@ICC) March 12, 2023
They take an unassailable 2-0 lead in the T20I series 👏#BANvENG | 📝: https://t.co/U5vJBPZYYx pic.twitter.com/G7ocll5Rs0
118 ರನ್‌ಗಳ ಗುರಿಯೊಂದಿಗೆ ಮೈದಾನಕ್ಕಿಳಿದ ಬಾಂಗ್ಲಾದೇಶ ತಂಡ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಜಯ ಸಾಧಿಸಿತು. ಪಂದ್ಯದಲ್ಲಿ ನಜ್ಮುಲ್ ಹುಸೇನ್ ಶಾಂಟೊ 47 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿ ಪಂದ್ಯ ಗೆಲ್ಲಿಸಿದರು. ಮೆಹದಿ ಹಸನ್ ಮಿರಾಜ್ 16 ಎಸೆತಗಳಲ್ಲಿ 20 ರನ್ ಮತ್ತು ತೌಹೀದ್ ಹೃದಯ್ 18 ಎಸೆತಗಳಲ್ಲಿ 17 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರು.
ಮೊದಲ ಪಂದ್ಯ: ಇದಕ್ಕೂ ಮೊದಲು ಮಾರ್ಚ್ 9 ರಂದು ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಆಂಗ್ಲರಿಗೆ ಶಕೀಬ್ ಆಹ್ವಾನ ನೀಡಿದ್ದರು. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 42 ಎಸೆತಗಳಲ್ಲಿ 67 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಇವರ ಈ ರನ್ ಬಲದಿಂದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 156 ರನ್ ಗುರಿ ನೀಡಿತ್ತು.
ಈ ಗುರಿಯನ್ನು ಬಾಂಗ್ಲಾದೇಶ 18 ಓವರ್‌ಗಳಲ್ಲಿ ಸಾಧಿಸಿತ್ತು. ಬಾಂಗ್ಲಾದೇಶ ಪರ ನಜ್ಮುಲ್ ಹಸನ್ 30 ಎಸೆತಗಳಲ್ಲಿ ಗರಿಷ್ಠ 51 ರನ್ ಗಳಿಸಿದರು. ಈ ಮೂಲಕ ಮೊದಲ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಇಂದು ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದೆ.
ಇದನ್ನೂ ಓದಿ: ಪಿಎಸ್ನಲ್ಲಿ ದಾಖಲೆಯ ಪಂದ್ಯ, ಟಿ20 ಎರಡು ಇನ್ನಿಂಗ್ 500ಕ್ಕೂ ಹೆಚ್ಚು ರನ್ ದಾಖಲೆ