ಚಿತ್ತಗಾಂಗ್ (ಬಾಂಗ್ಲಾದೇಶ): ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲು ಇಡುತ್ತಿದೆ. ತನ್ನ ಎರಡನೇ ಇನ್ಸಿಂಗ್ನಲ್ಲಿ 513 ರನ್ಗಳ ಬೃಹತ್ ರನ್ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಬಾಂಗ್ಲಾ ಇಂದು ನಾಲ್ಕನೇ ದಿನದಾಟಕ್ಕೆ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 272 ರನ್‌ಗಳನ್ನು ಗಳಿಸಿದೆ. ನಾಳೆ ಅಂತಿಮ ದಿನದಾಟದಲ್ಲಿ ಬಾಂಗ್ಲಾ ನಾಲ್ಕು ವಿಕೆಟ್ನಲ್ಲಿ ಇನ್ನೂ 241 ಬಾರಿಸಬೇಕಿದ್ದು, 4 ವಿಕೆಟ್ ಕಬಳಿಸಿದರೆ ಟೀಂ ಇಂಡಿಯಾ ಗೆಲುವು ಸಾಧಿಸಲಿದೆ.
-
Stumps on Day 4⃣ of the first #BANvIND Test!#TeamIndia need four more wickets on the final day👌👌
— BCCI (@BCCI) December 17, 2022 " class="align-text-top noRightClick twitterSection" data="
Bangladesh 272-6 at the end of day's play.
Scorecard ▶️ https://t.co/GUHODOYOh9 pic.twitter.com/wePAqvR70y
">Stumps on Day 4⃣ of the first #BANvIND Test!#TeamIndia need four more wickets on the final day👌👌
— BCCI (@BCCI) December 17, 2022
Bangladesh 272-6 at the end of day's play.
Scorecard ▶️ https://t.co/GUHODOYOh9 pic.twitter.com/wePAqvR70yStumps on Day 4⃣ of the first #BANvIND Test!#TeamIndia need four more wickets on the final day👌👌
— BCCI (@BCCI) December 17, 2022
Bangladesh 272-6 at the end of day's play.
Scorecard ▶️ https://t.co/GUHODOYOh9 pic.twitter.com/wePAqvR70y
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 404 ರನ್‌ಗಳನ್ನು ಪೇರಿಸಿತ್ತು. ಬಾಂಗ್ಲಾದೇಶ ಕೇವಲ 150 ರನ್ಗಳಿಗೆ ಸರ್ವಪತನ ಕಂಡು ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 2 ವಿಕೆಟ್ ನಷ್ಟಕ್ಕೆ 258 ರನ್ಗಳಿಗೆ ಶುಕ್ರವಾರ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 254 ರನ್ಗಳ ಹಿನ್ನಡೆಯಿಂದಾಗಿ ಬಾಂಗ್ಲಾ ಗೆಲುವಿಗೆ ಒಟ್ಟಾರೆ 513 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ: ಕಮ್ಬ್ಯಾಕ್ ಸೂಚನೆ ಕೊಟ್ಟ ಬುಮ್ರಾ: ಐಪಿಎಲ್ಗೆ ಮಾತ್ರ ಫಿಟ್ ಎಂದ ನೆಟ್ಟಿಗರು
ಶುಕ್ರವಾರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾ ಆಟಗಾರರು ದಿನದಾಟ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 42 ರನ್ ಗಳಿಸಿತ್ತು. ಇಂದು ತಮ್ಮ ಆಟ ಆರಂಭಿಸಿದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಜಾಕೀರ್ ಹಸನ್ ಮೊದಲ ವಿಕೆಟ್ಗೆ 124 ಉತ್ತಮ ಜೊತೆಯಾಟ ನೀಡಿದರು. ಶುಕ್ರವಾರ 25 ರನ್ ಗಳಿಸಿದ್ದ ಹೊಸೈನ್ ಶಾಂತೋ 67 ರನ್ ಬಾರಿಸಿ ಉಮೇಶ್ ಯಾದವ್ ಬೌಲಿಂಗ್ನಲ್ಲಿ ಔಟಾದರು.
ಇತ್ತ, 17 ರನ್ಗಳೊಂದಿಗೆ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಜಾಕೀರ್ ಹಸನ್ ಶತಕ ಬಾರಿಸಿ ಮಿಂಚಿದರು. 13 ಬೌಂಡರಿಗಳು ಮತ್ತು 1 ಸಿಕ್ಸರ್ನೊಂದಿಗೆ ಬರೋಬ್ಬರಿ 100 ಬಾರಿಸಿದ್ದ ಹಸನ್ ಅವರನ್ನು ಆರ್.ಅಶ್ವಿನ್ ಪೆವಿಲಿಯನ್ಗೆ ಕಳುಹಿಸಿದರು. ನಂತರದಲ್ಲಿ ಬಾಂಗ್ಲಾ ಆಟಗಾರರಿಂದ ಅಷ್ಟೊಂದು ಉತ್ತಮ ಜೊತೆಯಾಟ ಮೂಡಿ ಬರಲಿಲ್ಲ.
ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಯಾಸಿರ್ ಅಲಿ (5) ಅವರನ್ನು ಅಕ್ಷರ್ ಪಟೇಲ್ ಬೌಲ್ಡ್ ಮಾಡಿದರು. ಲಿಟ್ಟನ್ ದಾಸ್ (19) ಅವರನ್ನು ಕುಲ್ದೀಪ್ ಯಾದವ್, ಮುಶ್ಫಿಕರ್ ರಹೀಂ (23) ಹಾಗೂ ನುರುಲ್ ಹಸನ್ (3) ಅವರನ್ನು ಅಕ್ಷರ್ ಪಟೇಲ್ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
40 ರನ್ ಗಳಿಸಿರುವ ಬಾಂಗ್ಲಾ ನಾಯಕ ಶಕಿಲ್ ಅಲ್ ಹಸನ್ ಮತ್ತು 9 ರನ್ ಗಳಿಸಿರುವ ಮೆಹದಿ ಹಸನ್ ಮಿರಾಜ್ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿದರೆ, ಉಮೇಶ್ ಯಾದವ್, ಕುಲ್ದೀಪ್ ಯಾದವ್ ಮತ್ತು ಆರ್.ಅಶ್ವಿನ್ ತಲಾ ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: IND vs BAN 1st Test: ಗಿಲ್, ಪೂಜಾರ ಶತಕ; ಬಾಂಗ್ಲಾ ಗೆಲುವಿಗೆ 513 ರನ್ ಬೃಹತ್ ಟಾರ್ಗೆಟ್