ETV Bharat / sports

ಮಿನಿ ಎಬಿಡಿಗೆ ಬಂಪರ್​ ಲಾಟರಿ.. ಮುಂಬೈ ಇಂಡಿಯನ್ಸ್​ ಪಾಲಾದ ಡೇವಾಲ್ಡ್​​ ಬ್ರೇವಿಸ್​.. - new teams in ipl 2022

ಎಬಿ ಡಿ ವಿಲಿಯರ್ಸ್​ರಂತೆ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ ಯುವ ಬ್ಯಾಟರ್​​ ಖರೀದಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಸ್ಪರ್ಧೆನಡೆಸಿದವಾದರೂ ಯುವ ಬ್ಯಾಟರ್​ರನ್ನು ಮುಂಬೈ ಖರೀದಿಸುವಲ್ಲಿ ಯಶಸ್ವಿಯಾಯಿತು..

Baby AB de Villiers Dewald Brevis goes to Mumbai Indians for Rs 3 crore
ಮಿನಿ ಎಬಿಡಿಗೆ ಬಂಪರ್​ ಲಾಟರಿ
author img

By

Published : Feb 12, 2022, 8:06 PM IST

ಬೆಂಗಳೂರು : ಅಂಡರ್-19 ವಿಶ್ವಕಪ್​ನಲ್ಲಿ ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್​ ಡೆವಾಲ್ಡ್​ ಬ್ರೇವಿಸ್​ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 3 ಕೋಟಿ ರೂ.ಗಳಿಗೆ ಖರೀದಿಸಿದೆ.

ಬ್ರೇವಿಸ್​ ಅಂಡರ್​-19 ವಿಶ್ವಕಪ್​​ನಲ್ಲಿ 6 ಪಂದ್ಯಗಳಿಂದ 84.33ರ ಸರಾಸರಿ ಮತ್ತು 90.20 ಸ್ಟ್ರೈಕ್​ರೇಟ್​ನಲ್ಲಿ 506 ರನ್​ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ ಆಗಿದ್ದರು. ಬೌಲಿಂಗ್​ನಲ್ಲಿ ತಂಡಕ್ಕೆ ನೆರವಾಗಿದ್ದ ಅವರು 7 ವಿಕೆಟ್​ ಕೂಡ ಪಡೆದಿದ್ದರು.

ಎಬಿಡಿ ವಿಲಿಯರ್ಸ್​ರಂತೆ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ ಯುವ ಬ್ಯಾಟರ್​​ ಖರೀದಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಸ್ಪರ್ಧೆ ನಡೆಸಿದವಾದರೂ ಯುವ ಬ್ಯಾಟರ್​ರನ್ನು ಮುಂಬೈ ಖರೀದಿಸುವಲ್ಲಿ ಯಶಸ್ವಿಯಾಯಿತು.

ಸ್ವತಃ ಎಬಿಡಿ ವಿಲಿಯರ್ಸ್ ಮತ್ತು ಆರ್​ಸಿಬಿಯ ಅಭಿಮಾನಿ ಎಂದು ಹೇಳಿಕೊಂಡಿದ್ದ ಬ್ರೇವಿಸ್​ ಕೊನೆಗೂ ತಮ್ಮ ಐಪಿಎಲ್​ನಲ್ಲಿ ಆಡುವ ಕನಸನ್ನು ಬಹಳ ಚಿಕ್ಕ ವಯಸ್ಸಿಗೆ ನನಸಾಗಿಸಿಕೊಳ್ಳಲಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳ ಕಾಲ ತಂಡವನ್ನು ಕಟ್ಟುವ ಉದ್ದೇಶದಿಂದ ಮುಂಬೈ ಇಂಡಿಯನ್ಸ್ ಬ್ರೇವಿಸ್​ರನ್ನು ಖರೀದಿ ಮಾಡಿದೆ.

ಮುಂಬೈ ಇಂಡಿಯನ್ಸ್ ತಂಡ ರೋಹಿತ್ (16 ಕೋಟಿ), ಜಸ್ಪ್ರೀತ್ ಬುಮ್ರಾ (12 ಕೋಟಿ), ಸೂರ್ಯ ಕುಮಾರ್ ​(8 ಕೋಟಿ) ಮತ್ತು ಕಿರನ್ ಪೊಲಾರ್ಡ್ ​(6 ಕೋಟಿ)ರನ್ನು ರಿಟೈನ್​ ಮಾಡಿಕೊಂಡಿದ್ದರೆ, ಬರೋಬ್ಬರಿ 15.25 ಕೋಟಿ ರೂ. ನೀಡಿ ಖರೀದಿಸಿದೆ.

ಇದನ್ನೂ ಓದಿ: 8 ವರ್ಷಗಳ ಆರ್​ಸಿಬಿ ಬಾಂಧವ್ಯ ಅಂತ್ಯ: ರಾಜಸ್ಥಾನ್​ ರಾಯಲ್ಸ್​ ತೆಕ್ಕೆಗೆ ಯಜ್ವೇಂದ್ರ ಚಹಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.