ಮುಲ್ತಾನ್(ಪಾಕಿಸ್ತಾನ): ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಇದರ ಜೊತೆಗೆ ತಂಡದ ಕ್ಯಾಪ್ಟನ್ ಬಾಬರ್ ಆಜಂ ವಿಶ್ವದಾಖಲೆಯ ಶತಕ ಸಿಡಿಸಿ, ಕಿಂಗ್ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ್ದ 306ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತ್ತು. ಪಂದ್ಯದಲ್ಲಿ ಕ್ಯಾಪ್ಟನ್ ಬಾಬರ್ ಆಜಂ 103ರನ್ ಸಿಡಿಸಿದರು. ಈ ಮೂಲಕ ಏಕದಿನದಲ್ಲಿ ಸತತವಾಗಿ ಮೂರನೇ ಶತಕ ಸಿಡಿಸಿರುವ ಸಾಧನೆ ಮಾಡಿರುವ ಬಾಬರ್, ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕ್ರಮವಾಗಿ 114, 105ರನ್ಗಳಿಸಿದ್ದರು.
-
.@KhushdilShah_ THE FINISHER 💥
— Pakistan Cricket (@TheRealPCB) June 8, 2022 " class="align-text-top noRightClick twitterSection" data="
Unbelievable striking from the southpaw! 😍#PAKvWI | #KhelAbhiBaqiHai pic.twitter.com/MDqnCK3abS
">.@KhushdilShah_ THE FINISHER 💥
— Pakistan Cricket (@TheRealPCB) June 8, 2022
Unbelievable striking from the southpaw! 😍#PAKvWI | #KhelAbhiBaqiHai pic.twitter.com/MDqnCK3abS.@KhushdilShah_ THE FINISHER 💥
— Pakistan Cricket (@TheRealPCB) June 8, 2022
Unbelievable striking from the southpaw! 😍#PAKvWI | #KhelAbhiBaqiHai pic.twitter.com/MDqnCK3abS
ಈ ಹಿಂದೆ ಕೂಡ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬಾಬರ್ ಕ್ರಮವಾಗಿ 120,123 ಹಾಗೂ 117ರನ್ಗಳಿಕೆ ಮಾಡಿದ್ದರು. ಇದೀಗ ಮತ್ತೊಮ್ಮೆ ಸತತವಾಗಿ ಮೂರು ಶತಕ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಏಕದಿನದಲ್ಲಿ ಬಾಬರ್ ಬ್ಯಾಟ್ನಿಂದ ಸಿಡಿದ 17ನೇ ಶತಕ ಇದಾಗಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್ ಸರಣಿಯಿಂದ ರಾಹುಲ್, ಕುಲದೀಪ್ ಔಟ್; ಪಂತ್ಗೆ ನಾಯಕತ್ವ
ಕಿಂಗ್ ಕೊಹ್ಲಿ ದಾಖಲೆ ಬ್ರೇಕ್: ನಾಯಕನಾಗಿ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 1000 ರನ್ಗಳಿಸಿರುವ ಸಾಧನೆ ಬಾಬರ್ ಮಾಡಿದ್ದು, ಈ ಮೂಲಕ ವಿರಾಟ್ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಕ್ಯಾಪ್ಟನ್ ಆಗಿ ಕೇವಲ 13ನೇ ಇನ್ನಿಂಗ್ಸ್ನಲ್ಲಿ ಬಾಬರ್ ಈ ಸಾಧನೆ ಮಾಡಿದ್ದು, ವಿರಾಟ್ ಕೊಹ್ಲಿ 17ನೇ ಇನ್ನಿಂಗ್ಸ್ನಲ್ಲಿ, ಎಬಿ ಡಿವಿಲಿಯರ್ಸ್ 18ನೇ ಇನ್ನಿಂಗ್ಸ್ ಹಾಗೂ ಇಂಗ್ಲೆಂಡ್ನ ಅಲಿಸ್ಟರ್ ಕುಕ್ 21ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
ಬಾಬರ್ ಶತಕಕ್ಕೆ ಒಲಿದ ಗೆಲುವು: ವೆಸ್ಟ್ ಇಂಡೀಸ್ ತಂಡದ ಶಾಯಿ ಹೋಪ್ (127) ಶತಕದ ನೆರವಿನಿಂದ ಕೆರಿಬಿಯನ್ ತಂಡ 8 ವಿಕೆಟ್ ನಷ್ಟಕ್ಕೆ 305 ರನ್ಗಳಿಕೆ ಮಾಡಿತ್ತು. ಇದರ ಬೆನ್ನಟ್ಟಿದ ಪಾಕ್ ಬಾಬರ್ ಶತಕ, ಉಮಾಮ್ ಉಲ್ ಹಕ್(65) ಹಾಗೂ ರಿಜ್ವಾನ್ ಆಕರ್ಷಕ ಅರ್ಧಶತಕ(59) ರನ್ಗಳ ನೆರವಿನಿಂದ 49.2 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು.