ETV Bharat / sports

'ಐಸಿಸಿ ವರ್ಷದ ಟಿ20 ತಂಡ'ಕ್ಕೆ ಬಾಬರ್ ನಾಯಕ ; 11ರ ಬಳಗದಲ್ಲಿ ಭಾರತೀಯರಿಗಿಲ್ಲ ಅವಕಾಶ! - ಬಾಬರ್​ ಅಜಮ್​ ಐಸಿಸಿ ವರ್ಷದ ತಂಡ

ಬೌಲರ್​ಗಳ ವಿಭಾಗದಲ್ಲಿ ಶಾಹೀನ್ ಆಫ್ರಿದಿ ಜೊತೆಗೆ ಶ್ರೀಲಂಕಾದ ವನಿಡು ಹಸರಂಗ(36 ವಿಕೆಟ್+ 196 ರನ್​​), ದ. ಆಫ್ರಿಕಾದ ತಬ್ರೈಜ್ ಶಮ್ಸಿ(36 ವಿಕೆಟ್​), ಆಸೀಸ್​ನ ಜೋಶ್ ಹೆಜಲ್​ವುಡ್​(23 ವಿಕೆಟ್), ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್(28) 2021ರ ಐಸಿಸಿ ಟಿ20 ತಂಡದಲ್ಲಿ ಅವಕಾಶ ಪಡೆದಿದ್ದಾರೆ..

Babar Azam captain to ICC Men's T20 Team of the Year
ಐಸಿಸಿ ವರ್ಷದ ಟಿ20 ತಂಡ ಪ್ರಕಟ
author img

By

Published : Jan 19, 2022, 6:24 PM IST

ದುಬೈ : ಐಸಿಸಿ ಬುಧವಾರ 2021ರ ವರ್ಷದ ಟಿ20 ತಂಡವನ್ನು ಪ್ರಕಟಿಸಿದೆ. ಆ ತಂಡಕ್ಕೆ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​ರನ್ನು ನಾಯಕನನ್ನಾಗಿ ನೇಮಿಸಿದೆ. ಆದರೆ, ಭಾರತ ತಂಡದಿಂದ ಯಾವೊಬ್ಬ ಆಟಗಾರ ಈ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

2021ರಲ್ಲಿ ನೀಡಿರುವ ಪ್ರದರ್ಶನದ ಮೇರೆಗೆ ಈ 11ರ ಬಳಗವನ್ನು ಆಯ್ಕೆ ಮಾಡಿದೆ. ಪಾಕಿಸ್ತಾನದ ಬಾಬರ್​​ ಅಜಮ್, ಕಳೆದ ವರ್ಷ ವಿಶ್ವ ದಾಖಲೆಯ 1300+ ಟಿ20 ರನ್​ಗಳಿಸಿದ ವಿಕೆಟ್ ಕೀಪರ್​ ಮೊಹಮ್ಮದ್ ರಿಜ್ವಾನ್​ ಮತ್ತು ಯುವ ವೇಗಿ ಶಾಹೀನ್ ಆಫ್ರಿದಿ ಅವಕಾಶ ಪಡೆದಿದ್ದಾರೆ. ಅಜಮ್ 2021ರಲ್ಲಿ 939 ರನ್​ಗಳಿಸಿದರೆ, ರಿಜ್ವಾನ್​ 1326 ರನ್​ ಮತ್ತು ಆಫ್ರಿದಿ 23 ವಿಕೆಟ್ ಪಡೆದಿದ್ದರು.​

ಇಂಗ್ಲೆಂಡ್​ ತಂಡದ ಜೋಶ್​ ಬಟ್ಲರ್(269 ರನ್​) ರಿಜ್ವಾನ್ ಜೊತೆಗೆ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. 4ನೇ ಕ್ರಮಾಂಕಕ್ಕೆ ದಕ್ಷಿಣ ಆಫ್ರಿಕಾದ ​ಐಡೆನ್ ಮಾರ್ಕ್ರಮ್​(570 ರನ್​+5 ವಿಕೆಟ್), 6ನೇ ಕ್ರಮಾಂಕದಲ್ಲಿ ವಿಶ್ವಕಪ್ ಹೀರೋ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್​(627 ರನ್​+8 ವಿಕೆಟ್), 7ನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್(377 ರನ್​) ಆಯ್ಕೆಯಾಗಿದ್ದಾರೆ.

ಬೌಲರ್​ಗಳ ವಿಭಾಗದಲ್ಲಿ ಶಾಹೀನ್ ಆಫ್ರಿದಿ ಜೊತೆಗೆ ಶ್ರೀಲಂಕಾದ ವನಿಡು ಹಸರಂಗ(36 ವಿಕೆಟ್+ 196 ರನ್​​), ದ. ಆಫ್ರಿಕಾದ ತಬ್ರೈಜ್ ಶಮ್ಸಿ(36 ವಿಕೆಟ್​), ಆಸೀಸ್​ನ ಜೋಶ್ ಹೆಜಲ್​ವುಡ್​(23 ವಿಕೆಟ್), ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್(28) 2021ರ ಐಸಿಸಿ ಟಿ20 ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಐಸಿಸಿ ವರ್ಷದ ಟಿ20 ತಂಡ : ಬಾಬರ್ ಅಜಾನ್ (ನಾಯಕ), ಜೋಸ್ ಬಟ್ಲರ್, ಮೊಹಮ್ಮದ್ ರಿಜ್ವಾನ್, ಐಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ಡೇವಿಡ್ ಮಿಲ್ಲರ್, ತಬ್ರೈಜ್ ಶಮ್ಸಿ, ಜೋಶ್ ಹ್ಯಾಜಲ್‌ವುಡ್, ವನಿಡು ಹಸರಂಗಾ, ಮುಸ್ತಫಿಜುರ್ ರೆಹಮಾನ್, ಶಾಹೀನ್ ಆಫ್ರಿದಿ.

ಇದನ್ನೂ ಓದಿ:22 ಬೌಂಡರಿ, 4 ಸಿಕ್ಸರ್ ಸಹಿತ​ 154 ರನ್​ ... ಬಿಬಿಎಲ್​ನಲ್ಲಿ ಮ್ಯಾಕ್ಸ್​ವೆಲ್ ದಾಖಲೆಗಳ ಸುರಿಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.