ಮೆಲ್ಬೋರ್ನ್(ಆಸ್ಟ್ರೇಲಿಯಾ): ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು. ಹರಿಣ ಪಡೆ 182 ರನ್ಗಳಿಂದ ಸೋಲನ್ನಪ್ಪಿದ್ದು ಸರಣಿ ಸೋಲು ಅನುಭವಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ 2-0 ಅಂತರದಿಂದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದ ಗೆಲುವಿನೊಂದಿಗೆ ಕಾಂಗರೂ ಪಡೆ ಟೆಸ್ಟ್ ವಿಶ್ವಕಪ್ ಫೈನಲ್ ಸ್ಥಾನವನ್ನು ಎದುರು ನೋಡುತ್ತಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ದ.ಆಫ್ರಿಕಾ 189 ರನ್ಗಳನ್ನು ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಬಳಿಕ, ಆಸ್ಟ್ರೇಲಿಯಾ ಪರ ಕ್ರೀಸ್ಗಿಳಿದ ವಾರ್ನರ್ ಅಮೋಘ ದ್ವಿಶತಕ ಮತ್ತು ಅಲೆಕ್ಸ್ ಕ್ಯಾರಿ ಅವರ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ ತಂಡ 575 ರನ್ಗಳನ್ನು ಕಲೆ ಹಾಕುವ ಮೂಲಕ ಇನ್ನಿಂಗ್ಸ್ ಮುನ್ನಡೆ ಸಾಧಿಸಿ ಡಿಕ್ಲೇರ್ ಘೋಷಿಸಿತು.
ನಾಲ್ಕನೇ ದಿನದಾಟ ಆರಂಭಿಸಿದ ದ.ಆಫ್ರಿಕಾ ತಂಡ ನಥನ್ ಲಿಯಾನ್ (58ಕ್ಕೆ 3) ಮತ್ತು ಸ್ಕಾಟ್ ಬೋಲ್ಯಾಂಡ್ (49ಕ್ಕೆ 2) ಅವರ ಬಾಲಿಂಗ್ ದಾಳಿಗೆ ಸಿಲುಕಿ 204 ರನ್ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಇನ್ನಿಂಗ್ಸ್ ಬಾಕಿ ಇರುವಾಗಲೇ ಆಫ್ರಿಕಾ ಸೋಲೊಪ್ಪಿಕೊಂಡಿತು. ಆಫ್ರಿಕಾ ಪರ ತೆಂಬಾ ಬವುಮಾ ಏಕಾಂಗಿ ಹೋರಾಟ ನಡೆಸಿ 65 ರನ್ಗಳನ್ನು ಕಲೆ ಹಾಕಿ ತಂಡದ ಹೈಸ್ಕೋರರ್ ಆಗಿದ್ದಾರೆ.
ಇದನ್ನೂ ಓದಿ: ಉಪ ನಾಯಕತ್ವ ಪಟ್ಟ: 'ಇದು ಕನಸೇ ಎಂದು ಅರೆಕ್ಷಣ ನನ್ನನ್ನೇ ಕೇಳಿಕೊಂಡಿದ್ದೆ': ಸೂರ್ಯಕುಮಾರ್