ಸಿಡ್ನಿ(ಆಸ್ಟ್ರೇಲಿಯಾ): ಯಶಸ್ವಿ ನಾಯಕಿ ಮೆಗ್ ಲ್ಯಾನಿಂಗ್ ನಿವೃತ್ತಿಯ ನಂತರ ಅಲಿಸ್ಸಾ ಹೀಲಿ ನೇತೃತ್ವದಲ್ಲಿ ಆಸೀಸ್ ತಂಡ ಭಾರತಕ್ಕೆ ಮೊದಲ ಪ್ರವಾಸ ಕೈಗೊಳ್ಳಲಿದೆ. ಇದಕ್ಕಾಗಿ ತಂಡವನ್ನು ಈಗಾಗಲೇ ಪ್ರಕಟಿಸಿದ್ದು, ನಾಯಕತ್ವವನ್ನು ಯಾರು ವಹಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸ್ಟಾರ್ ಆಟಗಾರ್ತಿ ಅಲಿಸ್ಸಾ ಹೀಲಿ ಚೇತರಿಸಿಕೊಂಡಿದ್ದು, ನಾಯಕತ್ವದ ಸ್ಥಾನಕ್ಕೆ ಅವರೇ ಭರವಸೆ ಆದಂತಿದೆ.
ಸದ್ಯ ಭಾರತ ತಂಡ ಆಂಗ್ಲರ ಜೊತೆಗೆ ಟಿ20 ಮತ್ತು ಟೆಸ್ಟ್ ಸರಣಿ ಆಡುತ್ತಿದೆ. ಡಿಸೆಂಬರ್ 17ಕ್ಕೆ ಪಂದ್ಯಾವಳಿ ಮುಕ್ತಾಯವಾದರೆ, ಡಿಸೆಂಬರ್ 21ರಿಂದ ಆಸ್ಟ್ರೇಲಿಯಾದ ವಿರುದ್ಧ ಪಂದ್ಯಗಳು ಆರಂಭವಾಗುತ್ತವೆ. ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯ ಏಕಮಾತ್ರ ಟೆಸ್ಟ್, 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಯಲ್ಲಿ ಗಾಯದಿಂದ ಚೇತರಿಸಿಕೊಂಡ ಅಲಿಸ್ಸಾ ಹೀಲಿ ತಂಡಕ್ಕೆ ಮರಳಲಿದ್ದಾರೆ.
-
Australia's star batter is well on track to feature in the India Test later this month 👊#INDvAUShttps://t.co/w9mdmkRpHn
— ICC (@ICC) December 8, 2023 " class="align-text-top noRightClick twitterSection" data="
">Australia's star batter is well on track to feature in the India Test later this month 👊#INDvAUShttps://t.co/w9mdmkRpHn
— ICC (@ICC) December 8, 2023Australia's star batter is well on track to feature in the India Test later this month 👊#INDvAUShttps://t.co/w9mdmkRpHn
— ICC (@ICC) December 8, 2023
ಅಲಿಸ್ಸಾ ಕೊನೆಯ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದು ಈ ವರ್ಷದ ಅಕ್ಟೋಬರ್‌ನಲ್ಲಿ. ಮಹಿಳಾ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯುಬಿಬಿಎಲ್) ವೇಳೆ ಶ್ವಾನ ಕಡಿತದಿಂದಾಗಿ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭಾರತ ಪ್ರವಾಸದ ವೇಳೆಗೆ ಚೇತರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ಮಾಧ್ಯಮ ಜೊತೆ ಮಾತನಾಡಿದ ಅಲಿಸ್ಸಾ ಭಾರತದ ವಿರುದ್ಧದ ಏಕೈಕ ಟೆಸ್ಟ್ಆಡುವುದಾಗಿ ಹೇಳಿದ್ದಾರೆ.
ಆಡಲು ಸಿದ್ಧ: "ನಾನು ಭಾರತ್ಕಕೆ ಹೋಗುತ್ತೇನೆ. ಉತ್ತಮವಾಗಿ ಚೇತರಿಸಿಕೊಂಡಿರುವುದರಿಂದ ಕಳೆದ ಒಂದು ವಾರದಿಂದ ನೆಟ್ಸ್‌ನಲ್ಲಿ ಅಭ್ಯಾಸಕ್ಕೆ ಮರಳಿದ್ದೇನೆ. ಭಾರತದ ವಿರುದ್ಧದ ದೊಡ್ಡ ಸರಣಿಗಾಗಿ ಬುಧವಾರ ತಂಡದ ಜೊತೆ ತೆರಳಲಿದ್ದೇನೆ" ಎಂದು ಅಲಿಸ್ಸಾ ಹೇಳಿದ್ದಾರೆ.
ಹೀಲಿಗೆ ನಾಯಕತ್ವ: ಮೆಗ್ ಲ್ಯಾನಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿದ ನಂತರ ಅಲಿಸ್ಸಾ ಆಸ್ಟ್ರೇಲಿಯಾದ ಹೊಸ ನಾಯಕಿ ಎಂಬುದು ಅಘೋಷಿತವಾದರೂ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಏಕೆಂದರೆ ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಆಶಸ್ ಸೇರಿದಂತೆ ಕಳೆದ ಒಂದೂವರೆ ವರ್ಷಗಳಿಂದ ಮೆಗ್ ಅನುಪಸ್ಥಿತಿಯಲ್ಲಿ ಅಲಿಸ್ಸಾ ಆಸೀಸ್ ತಂಡ ಮುನ್ನಡೆಸಿದ್ದರು.
ನಾಯಕತ್ವದ ಬಗ್ಗೆ ಸ್ವತಃ ಅಲಿಸ್ಸಾ ಮಾತನಾಡಿದ್ದಾರೆ. "ಬಹುಕಾಲದ ಮೆಗ್ ನಾಯಕತ್ವದ ಸ್ಥಾನವನ್ನು ತುಂಬುದು ದೊಡ್ಡ ಜವಾಬ್ದಾರಿ. ಅವರ ನಿವೃತ್ತಿ ನನಗೆ ನಿಜಕ್ಕೂ ಅಚ್ಚರಿ ತಂದಿದೆ. ಭಾರತ ಪ್ರವಾಸ ರೋಮಾಂಚಕವಾಗಿರಲಿದೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ನಾಯಕತ್ವ ವಹಿಸುತ್ತಿರುವುದು ಹೆಚ್ಚು ಕುತೂಹಲಕಾರಿಯಾಗಿದೆ" ಎಂದಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 1984ರ ನಂತರ ಭಾರತದಲ್ಲಿ ಆಸ್ಟ್ರೇಲಿಯಾ ನಾಲ್ಕು ದಿನಗಳ ಟೆಸ್ಟ್ ಪಂದ್ಯ ಆಡುತ್ತಿದೆ. ಒಂದು ಟೆಸ್ಟ್ ಮತ್ತು ಮೂರು ಏಕದಿನ ವಾಂಖೆಡೆಯಲ್ಲಿ ನಡೆದರೆ, ನವ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮೂರು ಟಿ20 ಪಂದ್ಯ ನಡೆಯಲಿದೆ.
ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಮಹಿಳಾ ತಂಡ: ಡಾರ್ಸಿ ಬ್ರೌನ್, ಲಾರೆನ್ ಚೀಟಲ್ (ಟೆಸ್ಟ್ ಮಾತ್ರ), ಹೀದರ್ ಗ್ರಹಾಂ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್ (ಟಿ20 ಮಾತ್ರ), ಅಲಿಸ್ಸಾ ಹೀಲಿ, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲಿಸೆ ಪೆರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್.
ಇದನ್ನೂ ಓದಿ: ನಾಳೆ ಮಹಿಳಾ ಐಪಿಎಲ್ ಹರಾಜು: 30 ಸ್ಥಾನಕ್ಕೆ 165 ಆಟಗಾರ್ತಿಯರ ಸ್ಪರ್ಧೆ