ETV Bharat / sports

ಆ್ಯಶಸ್​​ 3ನೇ ಟೆಸ್ಟ್​​ನ ಮೊದಲ ದಿನ ಆಸೀಸ್​ ಪ್ರಾಬಲ್ಯ: 185ಕ್ಕೆ ಪತನ ಕಂಡ ಆಂಗ್ಲರು - ಆ್ಯಶಸ್​ ಟೆಸ್ಟ್​ ಸರಣಿ

ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ನಾಯಕ ರೂಟ್ 82 ಎಸೆತಗಳಲ್ಲಿ 4 ಬೌಂಡರಿ ಸಹಿತ 50 ರನ್​ಗಳಿಸಿದರು. ಆದರೆ, ತಮ್ಮ ಎರಡನೇ ಸ್ಪೆಲ್​ನಲ್ಲಿ ಮಿಚೆಲ್​ ಸ್ಟಾರ್ಕ್​ ಬೌಲಿಂಗ್​ನಲ್ಲಿ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್​ ನೀಡಿ ಔಟಾದರು. ರೂಟ್ ವಿಕೆಟ್ ಪತನದ ನಂತರ ಇಂಗ್ಲೆಂಗ್​ ಪೆವಿಲಿಯನ್ ಪರೇಡ್ ನಡೆಸಿತು..

Australia vs Engalnd 3rd test
3ನೇ ಆ್ಯಶಸ್​ ಟೆಸ್ಟ್​ ಸರಣಿ
author img

By

Published : Dec 26, 2021, 3:11 PM IST

ಮೆಲ್ಬೋರ್ನ್ ​: ಆಸ್ಟ್ರೇಲಿಯಾ ಬೌಲಿಂಗ್ ದಾಳಿಯನ್ನು ಅಂದಾಜಿಸುವಲ್ಲಿ ಮತ್ತೊಮ್ಮೆ ವಿಫಲರಾಗಿರುವ ಇಂಗ್ಲೆಂಡ್​ ತಂಡ ಆ್ಯಶಸ್​ನ ಮೂರನೇ ಟೆಸ್ಟ್​ ಪಂದ್ಯದ ಮೊದಲ ದಿನ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 185ರನ್​ಗಳಿಗೆ ಆಲೌಟ್ ಆಗಿದೆ.

ಮೊದಲ ಟೆಸ್ಟ್​​ನಲ್ಲಿ 9 ವಿಕೆಟ್​ ಮತ್ತು 2ನೇ ಟೆಸ್ಟ್​​ ಪಂದ್ಯದಲ್ಲಿ 275 ರನ್​ಗಳಿಂದ ಸೋಲು ಕಂಡಿದ್ದ ಇಂಗ್ಲೆಂಡ್​ ಮೆಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್​​ನಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಯಿತು.

ಎಂದಿನಂತೆ ಇಂಗ್ಲೆಂಡ್​ ಆರಂಭಿಕರ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ಹಸೀಬ್ ಹಮೀಮ್​ 10 ಎಸೆತಗಳನ್ನೆದುರಿಸಿ ಶೂನ್ಯ ಸಂಪಾದಿಸಿದರೆ, ಜಾಕ್ ಕ್ರಾಲೆ 12ಕ್ಕೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಮಲನ್​ ಆಟವೂ ಕೇವಲ 14 ರನ್​ಗಳಿಗೆ ಮುಗಿಯಿತು. ಈ ಮೂವರನ್ನು ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್ ಪಡೆದರು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ನಾಯಕ ರೂಟ್ 82 ಎಸೆತಗಳಲ್ಲಿ 4 ಬೌಂಡರಿ ಸಹಿತ 50 ರನ್​ಗಳಿಸಿದರು. ಆದರೆ, ತಮ್ಮ ಎರಡನೇ ಸ್ಪೆಲ್​ನಲ್ಲಿ ಮಿಚೆಲ್​ ಸ್ಟಾರ್ಕ್​ ಬೌಲಿಂಗ್​ನಲ್ಲಿ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್​ ನೀಡಿ ಔಟಾದರು. ರೂಟ್ ವಿಕೆಟ್ ಪತನದ ನಂತರ ಇಂಗ್ಲೆಂಗ್​ ಪೆವಿಲಿಯನ್ ಪರೇಡ್ ನಡೆಸಿತು.

ಬೆನ್​ ಸ್ಟೋಕ್ಸ್(25), ಜೋಶ್ ಬಟ್ಲರ್​(3), ಮಾರ್ಕ್​ ವುಡ್​(5), ಬೈರ್​ಸ್ಟೋವ್​(35) ಜಾಕ್​ ಲೀಚ್​ 13) ಮತ್ತು ಒಲ್ಲಿ ರಾಬಿನ್​ಸನ್​(22) ರನ್​ಗಳಿಸಿ ಔಟಾದರು. ಆಸೀಸ್​ ಪರ ಪ್ಯಾಟ್ ಕಮಿನ್ಸ್​ 36ಕ್ಕೆ3, ನೇಥನ್​ ಲಿಯಾನ್ 36ಕ್ಕೆ 3, ಮಿಚೆಲ್ ಸ್ಟಾರ್ಕ್ 54ಕ್ಕೆ2, ಸ್ಕಾಟ್​ ಬೋಲ್ಯಾಂಡ್ ಮತ್ತು ಕ್ಯಾಮೆರಾನ್ ಗ್ರೀನ್​ ತಲಾ ಒಂದು ವಿಕೆಟ್ ಪಡೆದರು.

ಇನ್ನು 186 ರನ್​ಗಳನ್ನು ಹಿಂಬಾಲಿಸಿರುವ ಆಸ್ಟ್ರೇಲಿಯಾ ಮೊದಲ ದಿನದಂತ್ಯದ ವೇಳೆ ಆರಂಭಿಕ ಡೇವಿಡ್​ ವಾರ್ನರ್(38) ವಿಕೆಟ್ ಕಳೆದುಕೊಂಡು 61 ರನ್​ಗಳಿಸಿದೆ. ಮಾರ್ಕಸ್ ಹ್ಯಾರೀಸ್​(20) ಮತ್ತು ಲಿಯಾನ್(0) ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

​ಇದನ್ನೂ ಓದಿ:ಅಡಿಲೇಡ್​ ಟೆಸ್ಟ್​​ ತಪ್ಪಿಸಿಕೊಂಡಿದ್ದಕ್ಕಾಗಿ ನಿಜಕ್ಕೂ ಕೋಪ ಬಂದಿತ್ತು: ಪ್ಯಾಟ್​​ ಕಮ್ಮಿನ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.