ಹೋಬರ್ಟ್: ಆಸ್ಟ್ರೇಲಿಯಾ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನು 2 ದಿನಗಳು ಬಾಕಿ ಉಳಿದಿರುವಂತೆ 146 ರನ್ಗಳ ಜಯ ಸಾಧಿಸಿದ್ದು, 4-0ಯಲ್ಲಿ ಆ್ಯಶಸ್ ಸರಣಿ ಗೆದ್ದು ಬೀಗಿದೆ.
3ನೇ ದಿನವಾದ ಇಂದು ಆಸ್ಟ್ರೇಲಿಯಾ ತಂಡ ತನ್ನ 2ನೇ ಇನ್ನಿಂಗ್ಸ್ನಲ್ಲಿ 155ಕ್ಕೆ ಆಲೌಟ್ ಆದರೂ, ಆಂಗ್ಲರಿಗೆ 271 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದರೆ ಈ ಮೊತ್ತವನ್ನು ಬೆನ್ನಟ್ಟಲಾಗದೆ ಆಂಗ್ಲ ಪಡೆ ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟದ ಹೊರೆತಾಗಿಯೂ ದಿಢೀರ್ ಕುಸಿತ ಕಂಡು ಕೇವಲ 124 ರನ್ಗಳಿ ಸರ್ವಪತನ ಕಂಡು ಸೋಲುಂಡಿತು.
-
Australia win! 🔥
— ICC (@ICC) January 16, 2022 " class="align-text-top noRightClick twitterSection" data="
England are bowled out for 124 and Australia seal a 4-0 series victory!#AUSvENG | #WTC23 pic.twitter.com/4XA8vfoZWh
">Australia win! 🔥
— ICC (@ICC) January 16, 2022
England are bowled out for 124 and Australia seal a 4-0 series victory!#AUSvENG | #WTC23 pic.twitter.com/4XA8vfoZWhAustralia win! 🔥
— ICC (@ICC) January 16, 2022
England are bowled out for 124 and Australia seal a 4-0 series victory!#AUSvENG | #WTC23 pic.twitter.com/4XA8vfoZWh
ವೇಗಿಗಳಾದ ಸ್ಕಾಟ್ ಬೋಲೆಂಡ್ 18ಕ್ಕೆ 3, ಕ್ಯಾಮರಾನ್ ಗ್ರೀನ್ 21ಕ್ಕೆ3, ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟರ್ಗಳನ್ನ ಪೆವಿಲಿಯನ್ಗಟ್ಟಿದರು. ಬಾಲಂಗೋಚಿಗಳನ್ನು ನಾಯಕ ಪ್ಯಾಟ್ ಕಮ್ಮಿನ್ಸ್ ಕ್ರೀಸ್ಗೆ ಬಂದ ವೇಗದಲ್ಲೇ ವಾಪಸ್ ಕಳುಹಿಸಿದರು. ಅವರು 42 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಟಾರ್ಕ್ 30 ರನ್ ನೀಡಿ 1 ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಜಾಕ್ ಕ್ರಾಲೆ 36 ರನ್ ಸಿಡಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 303 ರನ್ಗಳಿಸಿದರೆ, ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 188ಕ್ಕೆ ಆಲೌಟ್ ಆಗಿ 115 ರನ್ಗಳ ಹಿನ್ನಡೆ ಅನುಭವಿಸಿತ್ತು. ಇನ್ನು ಆಸ್ಟ್ರೇಲಿಯಾ ಮಾರ್ಕ್ವುಡ್(37ಕ್ಕೆ6) ದಾಳಿಗೆ ಸಿಲುಕಿ ಕೇವಲ 155ಕ್ಕೆ ಆಲೌಟ್ ಆಗಿತ್ತು.
ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯ ಮೊದಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 4ನೇ ಪಂದ್ಯವನ್ನು ಕೊನೆಯ ಓವರ್ತನಕ ಆಡಿ ಇಂಗ್ಲೆಂಡ್ ಸೋಲಿನಿಂದ ತಪ್ಪಿಸಿಕೊಂಡಿತ್ತು. ಕೊನೆಯ ವಿಕೆಟ್ಗೆ ಇಂಗ್ಲೆಂಡ್ ಜೋಡಿಯ ಆ ಆಟವೇ ತಮ್ಮ ತಂಡ 5-0ಯಲ್ಲಿ ವೈಟ್ ವಾಷ್ ಆಗುವುದನ್ನ ತಪ್ಪಿಸಿತು.
ಸರಣಿಯನ್ನು ಸೋಲುವ ಮೂಲಕ ಇಂಗ್ಲೆಂಡ್ ಸತತ 3ನೇ ಬಾರಿ ಆ್ಯಶಸ್ ಸರಣಿಯನ್ನು ಕಳೆದುಕೊಂಡಂತಾಗಿದೆ. ಇಂಗ್ಲೆಂಡ್ ಕೊನೆಯ ಬಾರಿ 2015ರಲ್ಲಿ ತವರಿನಲ್ಲಿ ನಡೆದಿದ್ದ ಸರಣಿಯಲ್ಲಿ 3-2ರಲ್ಲಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ:ರೋಹಿತ್, ರಾಹುಲ್, ಬುಮ್ರಾ ಅಲ್ಲ, ಕೊಹ್ಲಿ ಸ್ಥಾನಕ್ಕೆ ಯುವ ಆಟಗಾರನ ಹೆಸರು ಸೂಚಿಸಿದ ಗವಾಸ್ಕರ್