ETV Bharat / sports

ಇಂಗ್ಲೆಂಡ್​ನಲ್ಲಿ ಕೌಂಟಿ ಆಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗನಿಗೆ ಕೊರೊನಾ

author img

By

Published : Jul 12, 2021, 5:39 PM IST

ಈಗಾಗಲೇ ಇಂಗ್ಲೆಂಡ್ ತಂಡದ ಮೂವರು ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಕೊರೊನಾ ವೈರಸ್ ತಗುಲಿರುವುದರಿಂದ ಇಡೀ ತಂಡವನ್ನೇ ಐಸೊಲೇಟ್ ಮಾಡಲಾಗಿದೆ. ಪ್ರಸ್ತುತ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಸೀಮಿತ ಓವರ್​ಗಳ ಸರಣಿಗೆ ಹೊಸ ತಂಡವನ್ನು ಘೋಷಿಸಿದೆ..

ಪೀಟರ್ ಹ್ಯಾಂಡ್​​ಸ್ಕಂಬ್​
ಪೀಟರ್ ಹ್ಯಾಂಡ್​​ಸ್ಕಂಬ್​

ಲಂಡನ್ : ಕೌಂಟಿ ಕ್ರಿಕೆಟ್​ನಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿರುವ ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್ ಪೀಟರ್ ಹ್ಯಾಂಡ್​ಸ್ಕಂಬ್​ಗೆ ಕೋವಿಡ್-19 ಸೋಂಕು ತಗುಲಿದೆ. ಲೀಸೆಸ್ಟರ್ ​ಶೈರ್​ ತಂಡದ ವಿರುದ್ಧ ನಿನ್ನೆಯಿಂದ ಆರಂಭವಾಗಿರುವ ಪಂದ್ಯದಿಂದ ಹೊರಗುಳಿದಿದ್ದಾರೆ.

30 ವರ್ಷದ ಮಿಡಲ್​​ಸೆಕ್ಸ್​ ತಂಡದ ನಾಯಕ ಪ್ರಸ್ತುತ ಐಸೊಲೇಷನ್​ನಲ್ಲಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಐರ್ಲೆಂಡ್​ನ ಟಿಮ್ ಮುರ್ಟಗ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಭಾನುವಾರದಿಂದ ಆರಂಭವಾಗಿರುವ ಕೌಂಟಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಲೀಸೆಸ್ಟರ್​ರ್ಶೈರ್ ಮೊದಲ ಇನ್ನಿಂಗ್ಸ್​ನಲ್ಲಿ 9 ವಿಕೆಟ್ ಕಳೆದುಕೊಂಡು 324 ರನ್​ ಗಳಿಸಿದೆ.

ಈಗಾಗಲೇ ಇಂಗ್ಲೆಂಡ್ ತಂಡದ ಮೂವರು ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಕೊರೊನಾ ವೈರಸ್ ತಗುಲಿರುವುದರಿಂದ ಇಡೀ ತಂಡವನ್ನೇ ಐಸೊಲೇಟ್ ಮಾಡಲಾಗಿದೆ. ಪ್ರಸ್ತುತ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಸೀಮಿತ ಓವರ್​ಗಳ ಸರಣಿಗೆ ಹೊಸ ತಂಡವನ್ನು ಘೋಷಿಸಿದೆ.

ಇದನ್ನು ಓದಿ:ಡಿವೋನ್ ಕಾನ್ವೆ, ಸೋಫಿ ಎಕ್ಲೆಸ್ಟೋನ್​ಗೆ 'ಜೂನ್ ತಿಂಗಳ ಐಸಿಸಿ ಪ್ಲೇಯರ್​ ಆಫ್​ ಮಂತ್​' ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.