ETV Bharat / sports

Ashes Test: ವಿಶ್ವ ಟೆಸ್ಟ್‌ ಚಾಂಪಿಯನ್‌ ಆಸ್ಟ್ರೇಲಿಯಾಗೆ 22 ವರ್ಷಗಳ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಆ್ಯಶಸ್‌ ಗೆಲ್ಲುವ ತವಕ! - ಪ್ಯಾಟ್ ಕಮ್ಮಿನ್ಸ್

ಇಂಗ್ಲೆಂಡ್​ನಲ್ಲಿ ನಾಳೆಯಿಂದ ಆಸ್ಟ್ರೇಲಿಯಾ- ಇಂಗ್ಲೆಂಡ್‌ ತಂಡಗಳ ನಡುವೆ ಪ್ರತಿಷ್ಟಿತ ಆ್ಯಶಸ್ ಕ್ರಿಕೆಟ್‌ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿ ಗೆಲುವಿನ ಗುರಿ ಹೊಂದಿರುವ ಆಸ್ಟ್ರೇಲಿಯಾ ಜಗತ್ತಿನ ಅತ್ಯುತ್ತಮ ಕ್ರಿಕೆಟ್‌ ತಂಡವಾಗಿ ಹೊರಹೊಮ್ಮುವ ಮಹತ್ವದ ಗುರಿ ಹೊಂದಿದೆ. ಆತಿಥೇಯರು ಸವಾಲಿಗೆ ಸಜ್ಜಾಗಿದ್ದಾರೆ.

we-have-a-goal-to-become-one-of-the-greatest-australia-teams-dot-dot-dot-aussies-aim-to-end-22-year-old-ashes-drought-in-england
ಆಂಗ್ಲರ ನೆಲದಲ್ಲಿ 22 ವರ್ಷಗಳ ಬಳಿಕ ಸರಣಿ ಗೆಲುವಿನ ತವಕದಲ್ಲಿ ಆಸೀಸ್... ಶ್ರೇಷ್ಠ ತಂಡವಾಗುವ ಗುರಿ ಇದೆ ಎಂದ ಆಟಗಾರ!
author img

By

Published : Jun 15, 2023, 8:01 PM IST

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಮಹತ್ವದ ಆ್ಯಶಸ್ ಕ್ರಿಕೆಟ್‌ ಟೆಸ್ಟ್ ಸರಣಿಗೆ ಸಜ್ಜಾಗಿವೆ. ಎಡ್ಜ್‌ಬಾಸ್ಟನ್‌ನಲ್ಲಿ ನಾಳೆಯಿಂದ (ಶುಕ್ರವಾರ) 5 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್‌ ಆರಂಭವಾಗಲಿದೆ. 2001ರಲ್ಲಿ ಇಂಗ್ಲಿಷ್ ನೆಲದಲ್ಲಿ ತಮ್ಮ ಕೊನೆಯ ಆ್ಯಶಸ್ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ಆಟಗಾರರು, ಈ ಬಾರಿ ಮತ್ತೆ ಗೆಲ್ಲಲೇಬೇಕೆಂಬ ಛಲ ಹೊಂದಿದ್ದಾರೆ. ಹೀಗಾಗಿ ಆಸೀಸ್​ ಕ್ರಿಕೆಟಿಗರು ತಂಡದ ಪ್ಲಸ್​ - ಮೈನಸ್ ಅಂಶಗಳ ಬಗ್ಗೆ ವಿಶೇಷ ಗಮನ ಹರಿಸುವತ್ತ ಚಿತ್ತ ನೆಟ್ಟಿದ್ದಾರೆ.

ಆತಿಥೇಯ ಇಂಗ್ಲೆಂಡ್​ ಆಟಗಾರರು 2021- 22ರ ಸರಣಿಯಲ್ಲಿ 4-0 ಅಂತರದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಮತ್ತೊಂದೆಡೆ, ಆಸ್ಟ್ರೇಲಿಯಾ 22 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಆ್ಯಶಸ್ ಗೆಲ್ಲುವ ಇರಾದೆ ಹೊಂದಿದೆ. ನಾಯಕ ಬೆನ್ ಸ್ಟೋಕ್ಸ್ ಮತ್ತು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ತಂದ 'ಬಾಜ್‌ಬಾಲ್' ಕ್ರಾಂತಿಯಿಂದ ಆತಿಥೇಯರು ಉತ್ಸುಕರಾಗಿದ್ದಾರೆ. ಅದರಲ್ಲೂ, ಇಂಗ್ಲೆಂಡ್ ಇತ್ತೀಚೆಗೆ ಆಡಿರುವ 13 ಟೆಸ್ಟ್‌ಗಳಲ್ಲಿ 11 ಪಂದ್ಯಗಳನ್ನು ಗೆದ್ದಿದ್ದು, ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿದೆ.

  • "It's amazing how away #Ashes series define an era ... that's the opportunity ahead of this group right now."

    Australia's men's team are seeking their first series win on English soil in 22 years and it all starts tomorrow! pic.twitter.com/HvgYbGxtXU

    — cricket.com.au (@cricketcomau) June 15, 2023 " class="align-text-top noRightClick twitterSection" data=" ">

2001ರ ಸರಣಿ- ಹಿನ್ನೋಟ: 2001ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಇಂಗ್ಲೆಂಡ್‌ ನೆಲದಲ್ಲಿ ಆ್ಯಶಸ್ ಟೆಸ್ಟ್​ ಸರಣಿ ಗೆದ್ದಿತ್ತು. ಮಾರ್ಕ್ ವಾ (ಐದು ಪಂದ್ಯ - 430 ರನ್), ಡೇಮಿಯನ್ ಮಾರ್ಟಿನ್ (ಐದು ಪಂದ್ಯ - 382 ರನ್) ಮತ್ತು ಆ್ಯಡಂ ಗಿಲ್‌ಕ್ರಿಸ್ಟ್ (ಐದು ಪಂದ್ಯ - 340 ರನ್) ಮತ್ತು ಗ್ಲೆನ್ ಮೆಕ್‌ಗ್ರಾತ್ (32 ವಿಕೆಟ್), ಶೇನ್ ವಾರ್ನ್ (31 ವಿಕೆಟ್) ಮತ್ತು ಜೇಸನ್ ಗಿಲ್ಲೆಸ್ಪಿ (19 ವಿಕೆಟ್) ಆಂಗ್ಲರ ವಿರುದ್ಧ ಪಾರಮ್ಯ ಮೆರೆದಿದ್ದರು. ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಆಸೀಸ್ ಇಂಗ್ಲೆಂಡ್​ ತಂಡವನ್ನು ತನ್ನದೇ ನೆಲದಲ್ಲಿ 4-1ರಿಂದ ಬಗ್ಗುಬಡಿದಿತ್ತು.

ಇತಿಹಾಸ ನಿರ್ಮಿಸುವ ಅವಕಾಶ- ಕಮ್ಮಿನ್ಸ್: ಆದರೆ, ನಂತರದಲ್ಲಿ ಇಂಗ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ಯಶಸ್ಸು ಕಂಡಿಲ್ಲ. ಹೀಗಾಗಿ ಸುದೀರ್ಘ ಸಮಯದ ನಂತರ ಈ ಬಾರಿ ಸರಣಿ ಗೆದ್ದು ಅಭಿಮಾನಿಗಳಿಗೆ ಸಿಹಿ ಹಂಚಲು ಸಜ್ಜಾಗಿದೆ. ತಮ್ಮ ತಂಡದ ಸದಸ್ಯರಿಗೆ ಈ ಬಾರಿ ಇತಿಹಾಸ ನಿರ್ಮಿಸುವ ಅವಕಾಶವಿದೆ ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಹುರಿದುಂಬಿಸಿದ್ದಾರೆ.

ವಿದೇಶಿ ನೆಲದಲ್ಲಿನ ಸರಣಿಯ ಗೆಲುವು ಒಂದು ಯುಗವನ್ನು ಹೇಗೆ ವ್ಯಾಖ್ಯಾನಿಸುತ್ತದೆ ಮತ್ತು ತಂಡವನ್ನು ಹೇಗೆ ನೋಡುತ್ತದೆ ಎಂಬುದೇ ಒಂದು ಅದ್ಭುತ. ನೀವು ಈ ಸರಣಿಯ ಗೆಲುವಿನ ಬಗ್ಗೆ 20, 30 ಮತ್ತು 40 ವರ್ಷಗಳ ನಂತರ ಮಾತನಾಡುತ್ತೀರಿ. ಇಂತಹದ್ದೊಂದು ಅವಕಾಶ ಈಗಿನ ತಂಡಕ್ಕೆ ಸಿಕ್ಕಿದೆ ಎಂದು ಕಮ್ಮಿನ್ಸ್ ಹೇಳಿದ್ದಾರೆ. ಇಂಗ್ಲೆಂಡ್ ಅಥವಾ ಭಾರತಕ್ಕೆ ಪ್ರವಾಸ ಕೈಗೊಳ್ಳುವಾಗ ನೀವು ಚಕ್ರವನ್ನು ಮರುಶೋಧಿಸಬೇಕೆಂದು ಭಾವಿಸುತ್ತೀರಿ. ಈಗಾಗಲೇ ನಾವು ವಿಭಿನ್ನ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ಸಮರ್ಥರಾಗಿದ್ದೇವೆ. ನಮ್ಮ ಶೈಲಿಯನ್ನು ಬದಲಾಯಿಸಿದ್ದೇವೆ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಸೀಸ್​ ನಾಯಕ ವ್ಯಕ್ತಪಡಿಸಿದ್ದಾರೆ.

ನಾಥನ್, ಸ್ಮಿತ್, ಲ್ಯಾಬುಸ್‌ಚಾಗ್ನೆ ಹೇಳಿದ್ದೇನು?: ಅನುಭವಿ ಸ್ಪಿನ್ನರ್ ನಾಥನ್ ಲಯಾನ್ ಸಹ ಸರಣಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸರಣಿಯನ್ನು ಗೆಲ್ಲುವುದು ಮುಂಬರುವ ವರ್ಷಗಳಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ​ಅನ್ನು ವ್ಯಾಖ್ಯಾನಿಸುತ್ತದೆ. ಈ ತಂಡ ಅತ್ಯುತ್ತಮ ಆಸೀಸ್​ ಕ್ರಿಕೆಟ್ ತಂಡಗಳಲ್ಲಿ ಒಂದಾಗುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಸರಣಿಯ ಗೆಲುವು ಅಥವಾ ಸೋಲು ಇಂಗ್ಲೆಂಡ್ ಕ್ರಿಕೆಟ್​ ಅನ್ನು ವ್ಯಾಖ್ಯಾನಿಸಲು ಹೋಗುವುದಿಲ್ಲ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಆದರೆ, ಈ ಆ್ಯಶಸ್ ಸರಣಿ ಗೆಲ್ಲುವುದು ಆಸ್ಟ್ರೇಲಿಯಾದ ಕ್ರಿಕೆಟ್​ ಅನ್ನು ವ್ಯಾಖ್ಯಾನಿಸಬಹುದು ಎಂದು ನಾವು ಭಾವಿಸುತ್ತೇವೆ. ನಮ್ಮ ಗುರಿ ಆಸ್ಟ್ರೇಲಿಯನ್ ಶ್ರೇಷ್ಠ ತಂಡಗಳಲ್ಲಿ ಒಂದಾಗುವುದಾಗಿದೆ ಎಂದು ಲಯಾನ್ ತಿಳಿಸಿದ್ದಾರೆ.

ಅಲ್ಲದೇ, ಕ್ಯಾಮರೂನ್ ಗ್ರೀನ್ ಅವರು​ ದೊಡ್ಡ ಸರಣಿಯನ್ನು ಹೊಂದಬೇಕೆಂದು ನಾನು ನಿರೀಕ್ಷಿಸುತ್ತಿದ್ದೇನೆ. ಕಳೆದೆರಡು ವರ್ಷಗಳಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ. ವಿಶೇಷವಾಗಿ ಐಪಿಎಲ್ ಆಡಿದ ನಂತರ ಹಾಗೂ ಅಲ್ಲಿ ಶತಕ ಗಳಿಸಿದ ಬಳಿಕ ತಮ್ಮ ಅತ್ಯುತ್ತಮ ಲಯದಲ್ಲಿದ್ದಾರೆ ಎಂದು ನಾಥನ್ ಲಯಾನ್ ಹೇಳಿದ್ದಾರೆ. ಮತ್ತೊಂದೆಡೆ, ಎರಡೂ ತಂಡಗಳು ಅಮೋಘವಾಗಿ ಆಡುತ್ತಿದ್ದು, ಈ ಸರಣಿ ರೋಮಾಂಚನಕಾರಿಯಾಗಲಿದೆ ಎಂದು ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ನಂಬರ್ 1 ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಸ್‌ಚಾಗ್ನೆ ಮಾತನಾಡಿ, ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ನಲ್ಲಿ ನಡೆದ 2019ರ ಸರಣಿಯನ್ನು ಉತ್ತಮವಾಗಿ ಆಡಿತ್ತು. ನಾವು 2019ಕ್ಕಿಂತ ಉತ್ತಮ ತಂಡ ಹೊಂದಿದ್ದೇವೆ. ಪ್ರತಿಯೊಬ್ಬರೂ ತಮ್ಮ ಪಾತ್ರದ ತಿಳಿದುಕೊಂಡಿದ್ದಾರೆ. ಪರಸ್ಪರರ ಸಾಮರ್ಥ್ಯ ಮತ್ತು ಆಟದ ವಿಧಾನಗಳಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಓಪನರ್ ಉಸ್ಮಾನ್ ಖವಾಜಾ ಅವರು ಇಂಗ್ಲಿಷ್ ಬೌಲರ್‌ಗಳಿಗೆ ಅತ್ಯಂತ ದುಬಾರಿ ಆಗಿದ್ದಾರೆ. ಸ್ವಲ್ಪ ಸಮಯದಿಂದಲೂ ಅವರ ಬ್ಯಾಟಿಂಗ್ ಕ್ಲಿಕ್ ಆಗಿದ್ದು, ಅಪಾಯಕಾರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂಡಗಳ ವಿವರ: ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್​), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಮಿಚ್ ಮಾರ್ಷ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜೊನಾಥನ್ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಮೊಯಿನ್ ಅಲಿ, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಆಲಿ ರಾಬಿನ್ಸನ್, ಜೋ ರೂಟ್, ಜೋಶ್ ಡಬ್ಲ್ಯೂ ಟೋಕ್ಸ್, ಕ್ರಿಸ್ , ಮಾರ್ಕ್ ವುಡ್.

ಇದನ್ನೂ ಓದಿ: ICC Test Ranking: ಅಗ್ರ ಮೂರರಲ್ಲಿ ಆಸೀಸ್​ ಬ್ಯಾಟರ್ಸ್​.. 1984 ರ ಬಳಿಕ ಅಪರೂಪದ ದಾಖಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.