ETV Bharat / sports

ಏಷ್ಯನ್​ ಗೇಮ್ಸ್​ನಲ್ಲಿ ನಾಳೆ: ಬಾಂಗ್ಲಾ ಮತ್ತು ಭಾರತೀಯ ವನಿತೆಯರ ಸೆಮಿಸ್​ ಕಾದಾಟ.. ಗೆದ್ದವರಿಗೆ ಫೈನಲ್​ ಟಿಕೆಟ್​​

author img

By ETV Bharat Karnataka Team

Published : Sep 23, 2023, 8:40 PM IST

Asian Games 2023 IND-W vs BAN-W: ಏಷ್ಯನ್​ ಗೇಮ್ಸ್​ನಲ್ಲಿ ನಾಳೆ ಭಾರತ ಮತ್ತು ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದ್ದು, ಗೆದ್ದ ತಂಡ ಫೈನಲ್​ಗೆ ಪ್ರವೇಶಿಸಲಿದೆ.

asian games 2023 semi finals
asian games 2023 semi finals

ಹ್ಯಾಂಗ್‌ಝೌ (ಚೀನಾ): 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಸಪ್ಟೆಂಬರ್​ 24ರಂದು (ಭಾನುವಾರ) ಈ ಎರಡು ತಂಡಗಳ ನಡುವೆ ಫೈನಲ್‌ ಪ್ರವೇಶಕ್ಕಾಗಿ ಹೋರಾಟ ನಡೆಯಲಿದೆ. ಈ ಎರಡು ತಂಡಗಳ ನಡುವಿನ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 6:30ಕ್ಕೆ ಆರಂಭವಾಗಲಿದೆ. ಈ ಪಂದ್ಯವು ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕೊನೆಯ ಸರಣಿಯು ಟೈ ಆಗಿದ್ದರಿಂದ ಬಾಂಗ್ಲಾದೇಶ ತಂಡವು ಭಾರತಕ್ಕೆ ಕಠಿಣ ಪೈಪೋಟಿ ನೀಡಬಹುದು.

ಏಷ್ಯನ್ ಗೇಮ್ಸ್​ನ ಮೊದಲ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾವನ್ನು ಎದುರಿಸಿತ್ತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯ ರದ್ದಾಗಿದೆ. ಇದಾದ ಬಳಿಕ ಭಾರತ ತಂಡಕ್ಕೆ ಶ್ರೇಯಾಂಕದ ಆಧಾರದಲ್ಲಿ ಸೆಮಿಫೈನಲ್‌ಗೆ ನೇರ ಪ್ರವೇಶ ನೀಡಲಾಯಿತು. ಈ ಪಂದ್ಯದಲ್ಲಿ ಮೊದಲು ಆಡಿದ ಭಾರತ ತಂಡ 15 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತ್ತು. ಈಗ ಭಾರತ ತಂಡವು ಬಾಂಗ್ಲಾದೇಶವನ್ನು ಸೋಲಿಸಿ 2023ರ ಏಷ್ಯನ್ ಗೇಮ್ಸ್‌ನ ಫೈನಲ್‌ಗೆ ಪ್ರವೇಶಿಸಲು ಬಯಸುತ್ತದೆ.

ಬಾಂಗ್ಲಾದೇಶ ವಿರುದ್ಧದ ಈ ದೊಡ್ಡ ಪಂದ್ಯದಲ್ಲಿ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ನೀಡುವ ನಿರೀಕ್ಷೆಯಿದೆ. ಮೊದಲ ಪಂದ್ಯದಲ್ಲಿ ಮಂಧಾನ 27 ರನ್ ಗಳಿಸಿದ್ದರೆ, ಶೆಫಾಲಿ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಭಾರತದ ರನ್ ರೇಟ್ ಹೆಚ್ಚಿಸುವ ಜವಾಬ್ದಾರಿ ಜೆಮಿಮಾ ರೋಡ್ರಿಗಸ್ ಅವರ ಹೆಗಲ ಮೇಲಿರುತ್ತದೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಜೆಮಿಮಾ 29 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 47 ರನ್ ಗಳಿಸಿದ್ದರು. ರಿಚಾ ಘೋಷ್ ಅವರಿಂದ ತಂಡವು ಅತ್ಯುತ್ತಮ ಫಿನಿಶಿಂಗ್ ಅನ್ನು ನಿರೀಕ್ಷಿಸುತ್ತದೆ. ಅವರು ಮಲೇಷ್ಯಾ ವಿರುದ್ಧ 7 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 21 ರನ್ ಗಳಿಸಿದರು. ರಿಚಾ ತಮ್ಮ ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿದ್ದಾರೆ.

ಬೌಲಿಂಗ್‌ನಲ್ಲಿ ಭಾರತವು ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ಮತ್ತು ಪೂಜಾ ವಸ್ತ್ರಕರ್ ಅವರು ಹೆಚ್ಚು ಭರವಸೆಯಲ್ಲಿ ಕಂಡು ಬರುತ್ತಿದ್ದಾರೆ. ದೀಪ್ತಿ ಭಾರತದ ಅತ್ಯುತ್ತಮ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ಇದುವರೆಗೆ ಏಕದಿನ ಹಾಗೂ ಟಿ20 ಸೇರಿದಂತೆ 198 ವಿಕೆಟ್‌ಗಳನ್ನು ಅವರ ಹೆಸರಿನಲ್ಲಿದೆ. ದೀಪ್ತಿ ಹೊರತಾಗಿ ಪೂಜಾ ವಸ್ತ್ರಾಕರ್ ಇದುವರೆಗೆ ಏಕದಿನ ಹಾಗೂ ಟಿ20ಯಲ್ಲಿ ಒಟ್ಟು 51 ವಿಕೆಟ್ ಪಡೆದಿದ್ದಾರೆ. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್ ವೈಟ್ ಬಾಲ್ ಮಾದರಿಯಲ್ಲಿ 157 ವಿಕೆಟ್ ಪಡೆದಿದ್ದಾರೆ.

ಎರಡನೇ ಸೆಮಿಸ್​ನಲ್ಲಿ ಲಂಕಾ vs ಪಾಕ್​: ನಾಳೆ ಬೆಳಗ್ಗೆ 11:30ಕ್ಕೆ ಶ್ರೀಲಂಕಾ ಮತ್ತು ಪಾಕಿಸ್ತಾನದ ವನಿತೆಯರ ತಂಡ ಎರಡನೇ ಸೆಮಿಫೈನಲ್​ ಆಡಲಿದೆ. ಇದರಲ್ಲಿ ಯಾವ ತಂಡ ಜಯ ದಾಖಲಿಸುತ್ತದೆಯೋ ಅದು ಫೈನಲ್​ಗೆ ಬರಲಿದೆ. ಹೀಗಾಗಿ ಫೈನಲ್​ನಲ್ಲಿ ಭಾರತ - ಪಾಕಿಸ್ತಾನ ಮುಖಾಮುಖಿಯ ನಿರೀಕ್ಷೆ ಇದೆ. ಸೋತ ತಂಡಗಳು ಕಂಚಿಗಾಗಿ 25 ರಂದು ಆದಲಿವೆ. ಫೈನಲ್​ ಪಂದ್ಯ ಸಪ್ಟೆಂಬರ್​ 25 ರಂದು ಭಾರತೀಯ ಕಾಲಮಾನ 11:30ಕ್ಕೆ ನಡೆಯಲಿದೆ.

ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಕನಿಕಾ ಅಹುಜಾ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮಾನ್ಜೋತ್ ಕೌರ್, ಪೂಜಾ ವಸ್ತ್ರಾಕರ್, ಮಿನ್ನು ಮಣಿ, ರಾಜೇಶ್ವರಿ ಗಾಯಕ್ವಾಡ್, ಹರ್ಮಪ್ರೀತ್ ಕೌರ್, ಬರೇಡಿ ಅನುಷಾ, ಅಂಜಲಿ ಸರ್ವಾಣಿ, ಟಿಟಾಸ್ ಸಾಧು.

ಇದನ್ನೂ ಓದಿ: 2011ರ ವಿಶ್ವಕಪ್​ ಗೆಲುವಿನ ಕ್ಷಣವನ್ನು ಮರುಸೃಷ್ಟಿಸುವ ಅವಕಾಶ ನಮ್ಮ ಮುಂದಿದೆ, ಅದಕ್ಕಾಗಿ ಪ್ರಯತ್ನಿಸುತ್ತೇವೆ: ಕೆ ಎಲ್​ ರಾಹುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.