ETV Bharat / sports

Asia Cup Final: ಸಿರಾಜ್ ಬೌಲಿಂಗ್​ ದಾಳಿಗೆ ಲಂಕಾ ತತ್ತರ.. 15 ಓವರ್​ನಲ್ಲಿ, ಕೇವಲ 50 ರನ್​ ಗಳಿಸಿ ಸಿಂಹಳೀಯರು ಆಲ್​ಔಟ್​​

author img

By ETV Bharat Karnataka Team

Published : Sep 17, 2023, 4:31 PM IST

Updated : Sep 17, 2023, 5:42 PM IST

ಏಷ್ಯಾಕಪ್​ ಫೈನಲ್​ನಲ್ಲಿ ಭಾರತ ಬೌಲಿಂಗ್​ನಲ್ಲಿ ಪ್ರರಾಕ್ರಮ ಮೆರೆದಿದೆ. ಲಂಕಾವನ್ನು ಕೇವಲ 50 ರನ್​ಗೆ ಕಟ್ಟಿಹಾಕಿದೆ.

Asia Cup 2023
Asia Cup 2023

ಕೊಲಂಬೊ (ಶ್ರೀಲಂಕಾ): ಭಾರತ ತಂಡದ ಬಲವೇ ಬ್ಯಾಟಿಂಗ್​. ಬೌಲಿಂಗ್​ ವಿಭಾಗದಲ್ಲಿ ಅದೆಷ್ಟೋ ಪಂದ್ಯಗಳನ್ನು ತಂಡ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದೂ ಇದೆ. ಇದೀಗ ಭಾರತ ಬೌಲಿಂಗ್ ಪಡೆ ಯಾವ ತಂಡಕ್ಕೂ ಕಮ್ಮಿ ಇಲ್ಲ ಎಂಬುದನ್ನು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಸಾಬೀತು ಮಾಡಿದೆ.

ಹೈದರಾಬಾದ್​ ವೇಗಿ ಮೊಹಮದ್​​ ಸಿರಾಜ್​ ಮಾಡಿದ ಮಾರಕ ಬೌಲಿಂಗ್​ನಿಂದಾಗಿ ಲಂಕಾ ತಂಡ ಫೈನಲ್​ ಪಂದ್ಯದಲ್ಲಿ ನೆಲಕಚ್ಚಿದೆ. ಸಿರಾಜ್​ ಪಂದ್ಯದ ಪ್ರಮುಖ 6 ವಿಕೆಟ್​ ಕಬಳಿಸಿದರೆ, ಉಪನಾಯಕ ಹಾರ್ದಿಕ್​ ಮೂರು ವಿಕೆಟ್ ಪಡೆದರು. ಬುಮ್ರಾ 1 ವಿಕೆಟ್​ ಉರುಳಿಸಿದರು. ಇದರಿಂದ ಲಂಕಾ ಕೇವಲ 50 ರನ್​ಗೆ ಸರ್ವ ಪತನ ಕಂಡಿದೆ.

ಲಂಕಾ ಪರ ಕುಸಾಲ್​ ಮೆಂಡಿಸ್​ 17 ಮತ್ತು ತೀಕ್ಷ್ಣ ಬದಲಾಗಿ ತಂಡಕ್ಕೆ ಸೇರಿದ್ದ ದುಶನ್ ಹೇಮಂತ 13 ರನ್​ ಗಳಿಸಿದ್ದು ಬಿಟ್ಟರೆ ಮತ್ತಾರು ಆಡಲಿಲ್ಲ. 5 ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ​ಒಪ್ಪಿಸಿ ತಂಡಕ್ಕೆ ನಿರಾಸೆ ಮೂಡಿಸಿದರು. ​​

ಮೊದಲ ಓವರ್​ನಲ್ಲಿ ಜಸ್ಪ್ರೀತ್​ ಬುಮ್ರಾ ಕುಸಲ್​ ಪೆರೆರಾ ವಿಕೆಟ್​ ಪಡೆದರು. ನಂತರ ನಾಲ್ಕನೇ ಓವರ್​ನಲ್ಲಿ 1, 3, 4 ಮತ್ತು 6ನೇ ಬಾಲ್​ನಲ್ಲಿ ಸಿರಾಜ್​ ​ಪಾತುಮ್ ನಿಸ್ಸಾಂಕ (2), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0) ಮತ್ತು ಧನಂಜಯ ಡಿ ಸಿಲ್ವಾ (4) ಅವರ ವಿಕೆಟ್​ ಕಬಳಿಸಿದರು. ಮತ್ತೆ ಆರನೇ ಓವರ್​ ಮಾಡಲು ಬಂದ ಸಿರಾಜ್ ​ಶ್ರೀಲಂಕಾ ನಾಯಕ ದಸುನ್ ಶನಕ (0) ಅವರನ್ನು ಪೆವಿಲಿಯನ್​ಗೆ ಕಳಿಸಿದರು. ಇದಾದ ನಂತರ 11ನೇ ಓವರ್​ ಮಾಡಿದ ಸಿರಾಜ್​ ಅನುಭವಿ ಕುಸಲ್ ಮೆಂಡಿಸ್ ವಿಕೆಟ್ ಪಡೆದರು.

Brutal display of bowling by India 💥

Sri Lanka are all out for 50 in the #AsiaCup2023 Final.

📝: https://t.co/iP9YDGLp8W pic.twitter.com/PnrW3Id8Dx

— ICC (@ICC) September 17, 2023 " class="align-text-top noRightClick twitterSection" data=" ">

ನಂತರ ಹಾರ್ದಿಕ್​ ಪಾಂಡ್ಯ 13 ಮತ್ತು 16ನೇ ಓವರ್​ನಲ್ಲಿ ಮೂರು ವಿಕೆಟ್​ ಪಡೆದರು. 12.3 ಓವರ್​ನಲ್ಲಿ ದುನಿತ್ ವೆಲ್ಲಲಾಗೆ 8 ರನ್​ಗೆ ಓಟ್​ ಆದರು. 15.1 ಮತ್ತು 15.2 ಬಾಲ್​ನಲ್ಲಿ ಬಾಲಂಗೋಚಿಗಳಾದ ಪ್ರಮೋದ್ ಮದುಶನ್, ಮತೀಶ ಪತಿರಾನ ವಿಕೆಟ್​ ಕೊಟ್ಟರು. ಇದರಿಂದ 50 ರನ್​ ಗಳಿಸಿದ ಲಂಕಾ ತನ್ನೆಲ್ಲಾ ವಿಕೆಟ್​ನ್ನು ಕಳೆದುಕೊಂಡಿತು.

ದಾಖಲೆಯ ಆಟ: 5ನೇ ಓವರ್​ಗೆ ಲಂಕಾ 12 ರನ್ ಗಳಿಸಿ​ 6 ವಿಕೆಟ್​ ಕಳೆದುಕೊಂಡಿತ್ತು. ಇದು ಏಕದಿನ ಫೈನಲ್​ ಪಂದ್ಯದಲ್ಲಿ ಕಡಿಮೆ ರನ್​ಗೆ 6ನೇ ವಿಕೆಟ್​ ಪತನವಾದ ಎರಡನೇ ದಾಖಲೆ ಆಗಿದೆ. ಈ ಹಿಂದೆ 2009ರಲ್ಲಿ ಶ್ರೀಲಂಕಾವೇ 6 ರನ್​ಗೆ 5 ವಿಕೆಟ್​ ಕಳೆದುಕೊಂಡ ರೆಕಾರ್ಡ್​ ಇದೆ.

ಅಲ್ಲದೇ ಎಲ್ಲಾ ರೀತಿಯ ಏಕದಿನ ಇನ್ನಿಂಗ್ಸ್​ನಲ್ಲಿ ಅತಿ ಕಡಿಮೆ ರನ್​ಗೆ ವಿಕೆಟ್​ ಉರುಳಿದ ದಾಖಲೆಯಲ್ಲಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದೆ. ಕೌಂಟಿ ತಂಡಗಳಾದ ಕೆನಡಾ ಮತ್ತು ನೆಟ್​ ಕಿಂಗ್​ ಸಿಟಿ ನಡುವಿನ 2013ರ ಪಂದ್ಯದಲ್ಲಿ 10 ರನ್​ಗೆ 6 ವಿಕೆಟ್​ ಪತನವಾಗಿತ್ತು. 2003ರಲ್ಲಿ ಕೆನಡಾ ಮತ್ತು ಎಸ್ಎಲ್ ಪಾರ್ಲ್ ಪಂದ್ಯದಲ್ಲಿ 12ಕ್ಕೆ 6 ವಿಕೆಟ್​ ಬಿದ್ದಿತ್ತು. ಇಂದಿನ ಪಂದ್ಯವೂ ಇದೇ ಪರಿಸ್ಥಿತಿಯನ್ನು ಕಂಡಿತು. ಹೀಗಾಗಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಏಷ್ಯಾಕಪ್​ ಫೈನಲ್​ ಕದನ: ಟಾಸ್​ ಗೆದ್ದ ಲಂಕಾ ಬ್ಯಾಟಿಂಗ್​ ಆಯ್ಕೆ..

ಕೊಲಂಬೊ (ಶ್ರೀಲಂಕಾ): ಭಾರತ ತಂಡದ ಬಲವೇ ಬ್ಯಾಟಿಂಗ್​. ಬೌಲಿಂಗ್​ ವಿಭಾಗದಲ್ಲಿ ಅದೆಷ್ಟೋ ಪಂದ್ಯಗಳನ್ನು ತಂಡ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದೂ ಇದೆ. ಇದೀಗ ಭಾರತ ಬೌಲಿಂಗ್ ಪಡೆ ಯಾವ ತಂಡಕ್ಕೂ ಕಮ್ಮಿ ಇಲ್ಲ ಎಂಬುದನ್ನು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಸಾಬೀತು ಮಾಡಿದೆ.

ಹೈದರಾಬಾದ್​ ವೇಗಿ ಮೊಹಮದ್​​ ಸಿರಾಜ್​ ಮಾಡಿದ ಮಾರಕ ಬೌಲಿಂಗ್​ನಿಂದಾಗಿ ಲಂಕಾ ತಂಡ ಫೈನಲ್​ ಪಂದ್ಯದಲ್ಲಿ ನೆಲಕಚ್ಚಿದೆ. ಸಿರಾಜ್​ ಪಂದ್ಯದ ಪ್ರಮುಖ 6 ವಿಕೆಟ್​ ಕಬಳಿಸಿದರೆ, ಉಪನಾಯಕ ಹಾರ್ದಿಕ್​ ಮೂರು ವಿಕೆಟ್ ಪಡೆದರು. ಬುಮ್ರಾ 1 ವಿಕೆಟ್​ ಉರುಳಿಸಿದರು. ಇದರಿಂದ ಲಂಕಾ ಕೇವಲ 50 ರನ್​ಗೆ ಸರ್ವ ಪತನ ಕಂಡಿದೆ.

ಲಂಕಾ ಪರ ಕುಸಾಲ್​ ಮೆಂಡಿಸ್​ 17 ಮತ್ತು ತೀಕ್ಷ್ಣ ಬದಲಾಗಿ ತಂಡಕ್ಕೆ ಸೇರಿದ್ದ ದುಶನ್ ಹೇಮಂತ 13 ರನ್​ ಗಳಿಸಿದ್ದು ಬಿಟ್ಟರೆ ಮತ್ತಾರು ಆಡಲಿಲ್ಲ. 5 ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ​ಒಪ್ಪಿಸಿ ತಂಡಕ್ಕೆ ನಿರಾಸೆ ಮೂಡಿಸಿದರು. ​​

ಮೊದಲ ಓವರ್​ನಲ್ಲಿ ಜಸ್ಪ್ರೀತ್​ ಬುಮ್ರಾ ಕುಸಲ್​ ಪೆರೆರಾ ವಿಕೆಟ್​ ಪಡೆದರು. ನಂತರ ನಾಲ್ಕನೇ ಓವರ್​ನಲ್ಲಿ 1, 3, 4 ಮತ್ತು 6ನೇ ಬಾಲ್​ನಲ್ಲಿ ಸಿರಾಜ್​ ​ಪಾತುಮ್ ನಿಸ್ಸಾಂಕ (2), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0) ಮತ್ತು ಧನಂಜಯ ಡಿ ಸಿಲ್ವಾ (4) ಅವರ ವಿಕೆಟ್​ ಕಬಳಿಸಿದರು. ಮತ್ತೆ ಆರನೇ ಓವರ್​ ಮಾಡಲು ಬಂದ ಸಿರಾಜ್ ​ಶ್ರೀಲಂಕಾ ನಾಯಕ ದಸುನ್ ಶನಕ (0) ಅವರನ್ನು ಪೆವಿಲಿಯನ್​ಗೆ ಕಳಿಸಿದರು. ಇದಾದ ನಂತರ 11ನೇ ಓವರ್​ ಮಾಡಿದ ಸಿರಾಜ್​ ಅನುಭವಿ ಕುಸಲ್ ಮೆಂಡಿಸ್ ವಿಕೆಟ್ ಪಡೆದರು.

ನಂತರ ಹಾರ್ದಿಕ್​ ಪಾಂಡ್ಯ 13 ಮತ್ತು 16ನೇ ಓವರ್​ನಲ್ಲಿ ಮೂರು ವಿಕೆಟ್​ ಪಡೆದರು. 12.3 ಓವರ್​ನಲ್ಲಿ ದುನಿತ್ ವೆಲ್ಲಲಾಗೆ 8 ರನ್​ಗೆ ಓಟ್​ ಆದರು. 15.1 ಮತ್ತು 15.2 ಬಾಲ್​ನಲ್ಲಿ ಬಾಲಂಗೋಚಿಗಳಾದ ಪ್ರಮೋದ್ ಮದುಶನ್, ಮತೀಶ ಪತಿರಾನ ವಿಕೆಟ್​ ಕೊಟ್ಟರು. ಇದರಿಂದ 50 ರನ್​ ಗಳಿಸಿದ ಲಂಕಾ ತನ್ನೆಲ್ಲಾ ವಿಕೆಟ್​ನ್ನು ಕಳೆದುಕೊಂಡಿತು.

ದಾಖಲೆಯ ಆಟ: 5ನೇ ಓವರ್​ಗೆ ಲಂಕಾ 12 ರನ್ ಗಳಿಸಿ​ 6 ವಿಕೆಟ್​ ಕಳೆದುಕೊಂಡಿತ್ತು. ಇದು ಏಕದಿನ ಫೈನಲ್​ ಪಂದ್ಯದಲ್ಲಿ ಕಡಿಮೆ ರನ್​ಗೆ 6ನೇ ವಿಕೆಟ್​ ಪತನವಾದ ಎರಡನೇ ದಾಖಲೆ ಆಗಿದೆ. ಈ ಹಿಂದೆ 2009ರಲ್ಲಿ ಶ್ರೀಲಂಕಾವೇ 6 ರನ್​ಗೆ 5 ವಿಕೆಟ್​ ಕಳೆದುಕೊಂಡ ರೆಕಾರ್ಡ್​ ಇದೆ.

ಅಲ್ಲದೇ ಎಲ್ಲಾ ರೀತಿಯ ಏಕದಿನ ಇನ್ನಿಂಗ್ಸ್​ನಲ್ಲಿ ಅತಿ ಕಡಿಮೆ ರನ್​ಗೆ ವಿಕೆಟ್​ ಉರುಳಿದ ದಾಖಲೆಯಲ್ಲಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದೆ. ಕೌಂಟಿ ತಂಡಗಳಾದ ಕೆನಡಾ ಮತ್ತು ನೆಟ್​ ಕಿಂಗ್​ ಸಿಟಿ ನಡುವಿನ 2013ರ ಪಂದ್ಯದಲ್ಲಿ 10 ರನ್​ಗೆ 6 ವಿಕೆಟ್​ ಪತನವಾಗಿತ್ತು. 2003ರಲ್ಲಿ ಕೆನಡಾ ಮತ್ತು ಎಸ್ಎಲ್ ಪಾರ್ಲ್ ಪಂದ್ಯದಲ್ಲಿ 12ಕ್ಕೆ 6 ವಿಕೆಟ್​ ಬಿದ್ದಿತ್ತು. ಇಂದಿನ ಪಂದ್ಯವೂ ಇದೇ ಪರಿಸ್ಥಿತಿಯನ್ನು ಕಂಡಿತು. ಹೀಗಾಗಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಏಷ್ಯಾಕಪ್​ ಫೈನಲ್​ ಕದನ: ಟಾಸ್​ ಗೆದ್ದ ಲಂಕಾ ಬ್ಯಾಟಿಂಗ್​ ಆಯ್ಕೆ..

Last Updated : Sep 17, 2023, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.