ಪಲ್ಲೆಕೆಲೆ (ಶ್ರೀಲಂಕಾ): ವಿಶ್ವಕಪ್ನ ಸಿದ್ಧತೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಏಕದಿನ ಮಾದರಿಯ ಏಷ್ಯಾಕಪ್ನಲ್ಲಿ ಭಾರತ ಮೊದಲ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್ ಮಾತ್ರ ಆಡಿತು. ಭಾರತದ ಬೌಲಿಂಗ್ ಸಾಮರ್ಥ್ಯದ ಪರೀಕ್ಷೆ ಆಗಲೇ ಇಲ್ಲ. ಸೋಮವಾರ ನೇಪಾಳದ ವಿರುದ್ಧ ಭಾರತ ಸೆಣಸುತ್ತಿದೆ. ಅದು ಶನಿವಾರ ನಡೆದ ಮೈದಾನದಲ್ಲೇ ಪಂದ್ಯ ಆಯೋಜನೆಗೊಂಡಿದೆ. ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುತ್ತಿರುವ ನೇಪಾಳಕ್ಕೆ ಭಾರತ ಬಲಿಷ್ಠ ಎದುರಾಳಿ.
ಮೊದಲ ಬಾರಿಗೆ ಏಷ್ಯಾಕಪ್ನಲ್ಲಿ ನೇಪಾಳ ಸ್ಪರ್ಧಿಸುತ್ತಿದೆ. ಈ ಬಾರಿಯ ಏಷ್ಯಾಕಪ್ನ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಹೋರಾಟವನ್ನು ತೋರಿಸಿದರು. ಬೌಲಿಂಗ್ನಲ್ಲಿ ಆರಂಭಿಕರ ವಿಕೆಟ್ ಪಡೆಯುವಲ್ಲಿ ನೇಪಾಳಿ ಬೌಲರ್ಗಳು ಯಶಸ್ವಿ ಆದರು. ಆದರೆ ನಾಯಕ ಬಾಬರ್ ಮತ್ತು ಇಫ್ತಕರ್ನ್ನು ನಿಯಂತ್ರಿಸುವಲ್ಲಿ ಎಡವಿದ್ದರಿಂದ ಬೃಹತ್ ಮೊತ್ತವನ್ನು ಗುರಿಯಾಗಿ ಪಡೆದುಕೊಂಡಿತು. ಇದನ್ನು ಬೆನ್ನತ್ತಿದ ನೇಪಾಳ 104ಕ್ಕೆ ಆಲ್ಔಟ್ ಆಗಿತ್ತು.
-
Nepal's captain Rohit Paudel said, "we've followed Virat Kohli and Rohit Sharma's career and they are superstars, but we also have some plans on how to tackle them". pic.twitter.com/KKActXfnVZ
— Mufaddal Vohra (@mufaddal_vohra) September 3, 2023 " class="align-text-top noRightClick twitterSection" data="
">Nepal's captain Rohit Paudel said, "we've followed Virat Kohli and Rohit Sharma's career and they are superstars, but we also have some plans on how to tackle them". pic.twitter.com/KKActXfnVZ
— Mufaddal Vohra (@mufaddal_vohra) September 3, 2023Nepal's captain Rohit Paudel said, "we've followed Virat Kohli and Rohit Sharma's career and they are superstars, but we also have some plans on how to tackle them". pic.twitter.com/KKActXfnVZ
— Mufaddal Vohra (@mufaddal_vohra) September 3, 2023
ಪಾಕಿಸ್ತಾನದ ವಿರುದ್ಧ ಭಾರತದ ಟಾಪ್ ಆರ್ಡರ್ ಬ್ಯಾಟರ್ಗಳು ವೈಫಲ್ಯತೆ ಕಂಡಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಚೇತರಿಕೆಯ ಆಟ ಆಡಿದರು. ಇದರಿಂದ ಭಾರತ ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಆದರೆ ಮಳೆ ಎರಡನೇ ಇನ್ನಿಂಗ್ಸ್ಗೆ ಅವಕಾಶ ಕೊಡದ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದು ಮಾಡಲಾಯಿತು.
-
Nepal's captain Rohit Paudel said, "Virat Kohli is an inspiration for all of us. His work ethics inspired everyone". pic.twitter.com/RTsoKQhL5C
— Mufaddal Vohra (@mufaddal_vohra) September 3, 2023 " class="align-text-top noRightClick twitterSection" data="
">Nepal's captain Rohit Paudel said, "Virat Kohli is an inspiration for all of us. His work ethics inspired everyone". pic.twitter.com/RTsoKQhL5C
— Mufaddal Vohra (@mufaddal_vohra) September 3, 2023Nepal's captain Rohit Paudel said, "Virat Kohli is an inspiration for all of us. His work ethics inspired everyone". pic.twitter.com/RTsoKQhL5C
— Mufaddal Vohra (@mufaddal_vohra) September 3, 2023
ಕ್ರಿಕೆಟ್ ಶಿಶುಗಳ ವಿರುದ್ಧವಾದರೂ ಆರಂಭಿಕ ಶುಭಮನ್ ಗಿಲ್ ದೈರ್ಯದಿಂದ ಬ್ಯಾಟಿಂಗ್ ಮಾಡಬೇಕಿದೆ. ಪಾಕಿಸ್ತಾನದ ಬೌಲರ್ಗಳಿಗೆ ಅಂಜಿಕೆಯಿಂದಲೇ ಗಿಲ್ ಬ್ಯಾಟ್ ಬೀಸುತ್ತಿದ್ದರು. ಅವರ ಜೊತೆ ನಾಯಕ ರೋಹಿತ್ ಶರ್ಮಾ ಸಹ ತಮ್ಮ ಅನುಭವವನ್ನು ರನ್ ಗಳಿಸುವ ಮೂಲಕ ತೋರಬೇಕಿದೆ. ದಾಖಲೆಗಳ ವೀರ ವಿರಾಟ್ ಪಾಕಿಸ್ತಾನದ ವಿರುದ್ಧ ಫ್ಲಾಫ್ ಆಗಿದ್ದು, ನೇಪಾಳ ಬೌಲರ್ಗಳನ್ನಾದರೂ ಯಶಸ್ವಿಯಾಗಿ ಎದುರಿಸುತ್ತಾರಾ ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
-
Many congratulations to Jasprit Bumrah and Sanjana Ganesan who are expecting the birth of their first child. pic.twitter.com/72F4Q723RI
— Mufaddal Vohra (@mufaddal_vohra) September 3, 2023 " class="align-text-top noRightClick twitterSection" data="
">Many congratulations to Jasprit Bumrah and Sanjana Ganesan who are expecting the birth of their first child. pic.twitter.com/72F4Q723RI
— Mufaddal Vohra (@mufaddal_vohra) September 3, 2023Many congratulations to Jasprit Bumrah and Sanjana Ganesan who are expecting the birth of their first child. pic.twitter.com/72F4Q723RI
— Mufaddal Vohra (@mufaddal_vohra) September 3, 2023
ಬುಮ್ರಾ ಅಲಭ್ಯ: ವೈಯುಕ್ತಿಕ ಕಾರಣದ ಹಿನ್ನೆಲೆಯಲ್ಲಿ ಜಸ್ಪ್ರೀತ್ ಬುಮ್ರಾ ತವರಿಗೆ ಮರಳಿದ್ದಾರೆ ಎಂದು ಬಿಸಿಸಿಐನ ಮೂಲಗಳು ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದೆ. ಈ ಪ್ರಕಾರ ಭಾರತದ ಸ್ಟಾರ್ ವೇಗಿ ಬುಮ್ರಾ ಈ ಪಂದ್ಯಕ್ಕೆ ಅಲಭ್ಯರಾಗಿರಲಿದ್ದಾರೆ. ಅವರ ಬದಲಿಯಾಗಿ ಅನುಭವಿ ಮೊಹಮ್ಮದ್ ಶಮಿ ಅಥವಾ ಗಾಯದಿಂದ ಚೇತರಿಸಿಕೊಂಡು ಪುನರಾಗಮನ ಮಾಡಿರುವ ಪ್ರಸಿದ್ಧ್ ಕೃಷ್ಣಾ ಅವಕಾಶ ಪಡೆಯಲಿದ್ದಾರೆ.
ಮಳೆ ಭೀತಿ: ಪಾಕಿಸ್ತಾನ ಪಂದ್ಯಕ್ಕೆ ಇದ್ದ ಮಳೆಯ ಮುನ್ಸೂಚನೆಯಂತೆ ಈ ಮ್ಯಾಚ್ಗೂ ಸಹ ಗುಡುಗು ಸಹಿತ ವರುಣನ ಕಾಟ ಇರಲಿದೆ ಎನ್ನಲಾಗುತ್ತಿದೆ. ಶೇಕಡಾ 80 ರಷ್ಟು ಮಳೆಯ ಮುನ್ಸೂಚನೆ ಅಂತರ್ಜಾಲದಲ್ಲಿ ಸೂಚಿಸುತ್ತಿದೆ. ಹೀಗಾಗಿ ವರುಣನ ಅಡ್ಡಿಯ ಆತಂಕ ಇದೆ.
ಸೂಪರ್ ಫೋರ್: ಏಷ್ಯಾಕಪ್ನ ಎ ಗುಂಪಿನ ಪಾಕಿಸ್ತಾನ ತಂಡ 3 ಅಂಕದಿಂದ ಸೂಪರ್ ಫೋರ್ಗೆ ಪ್ರವೇಶ ಪಡೆದಿದೆ. ಭಾರತ 1 ಅಂಕದಿಂದ ಎರಡನೇ ಸ್ಥಾನದಲ್ಲಿದೆ. ನಾಳೆ ನೇಪಾಳದ ಮೇಲೆ ಪಂದ್ಯ ಗೆದ್ದಲ್ಲಿ ಅಥವಾ ಮಳೆಯಿಂದ ರದ್ದಾದಲ್ಲಿ ಭಾರತ ಸೂಪರ್ ಫೋರ್ ಪ್ರವೇಶಿಸಲಿದೆ.
ಪಿಚ್ ಹೇಗಿದೆ: ಪಲ್ಲೆಕೆಲೆ ಮೈದಾನ ಪಿಚ್ ಹಳೆಯದಾಗುತ್ತಿದ್ದಂತೆ ಸ್ಪಿನ್ನರ್ಗೆ ಸಹಕಾರಿ ಆಗಲಿದೆ ಎಂದು ಹಿಂದಿನ ಪಂದ್ಯಗಳ ಲೆಕ್ಕಾಚಾರ. ಅಲ್ಲಿನ ಸರಾಸರಿ ಮೊತ್ತ 250 ಆಗಿದೆ. ಭಾರತ ಪಾಕಿಸ್ತಾನದ ಮೇಲೆ ಅದೇ ಮೊತ್ತವನ್ನು ಕೆಲೆಹಾಕಿದೆ. ಹೀಗಾಗಿ ನೇಪಾಳದ ಬೌಲರ್ಗಳು ಭಾರತೀಯ ಬ್ಯಾಟರ್ಗಳಿಗೆ ಸುಲಭ ತುತ್ತಾದರೆ ರನ್ ಹೊಳೆಯೇ ಹರಿಯಲಿದೆ.
ಸಂಭಾವ್ಯ ತಂಡಗಳು..ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಛೆಟ್ರಿ, ಲಲಿತ್ ರಾಜ್ಬನ್ಶಿ
ಇದನ್ನೂ ಓದಿ: ತವರಿಗೆ ಮರಳಿದ ಜಸ್ಪ್ರೀತ್ ಬುಮ್ರಾ.. ನೇಪಾಳ ವಿರುದ್ಧದ ಪಂದ್ಯಕ್ಕೆ ಸ್ಟಾರ್ ವೇಗಿ ಅಲಭ್ಯ