ಮೆಲ್ಬೋರ್ನ್: ಆ್ಯಶಸ್ ಸರಣಿಯಲ್ಲಿ ಈಗಾಗಲೇ 2-0 ಅಂತರದ ಹಿನ್ನಡೆಯಲ್ಲಿರುವ ಇಂಗ್ಲೆಂಡ್ಗೆ ಕೋವಿಡ್ ಭೀತಿ ಎದುರಾಗಿದೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಆಂಗ್ಲರ ಕ್ಯಾಂಪ್ನಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ದಿನದ ಆರಂಭಕ್ಕೂ ಕೆಲಗಂಟೆಗಳ ಮುನ್ನ ತಂಡದ ಕ್ಯಾಂಪನ್ ಇಬ್ಬರು ಸಹಾಯಕ ಸಿಬ್ಬಂದಿ ಮತ್ತು ಇಬ್ಬರು ಕುಟುಂಬ ಸದಸ್ಯರಿಗೆ ಕೋವಿಡ್ ತಗುಲಿರುವುದು ಗೊತ್ತಾಗಿದೆ. ಕ್ರೀಡಾಂಗಣಕ್ಕೆ ಹೊರಡುವ ಮುನ್ನ ತಂಡ ಹಾಗೂ ಇತರ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
-
OFFICIAL STATEMENT #Ashes
— Cricket Australia (@CricketAus) December 26, 2021 " class="align-text-top noRightClick twitterSection" data="
Cricket Australia has been informed that two members of the England Cricket Team’s support staff and two of their family members have returned a positive COVID-19 Rapid Antigen Test. The affected individuals are currently isolating.
(1/3)
">OFFICIAL STATEMENT #Ashes
— Cricket Australia (@CricketAus) December 26, 2021
Cricket Australia has been informed that two members of the England Cricket Team’s support staff and two of their family members have returned a positive COVID-19 Rapid Antigen Test. The affected individuals are currently isolating.
(1/3)OFFICIAL STATEMENT #Ashes
— Cricket Australia (@CricketAus) December 26, 2021
Cricket Australia has been informed that two members of the England Cricket Team’s support staff and two of their family members have returned a positive COVID-19 Rapid Antigen Test. The affected individuals are currently isolating.
(1/3)
ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮೂರನೆ ದಿನದಾಟವು ಸುಮಾರು ಅರ್ಧಗಂಟೆ ತಡವಾಗಿ ಆರಂಭವಾಗಿದೆ. 'ಇಂಗ್ಲೆಂಡ್ ಕ್ರಿಕೆಟ್ ತಂಡದ ಇಬ್ಬರು ಸಹಾಯಕ ಸಿಬ್ಬಂದಿ ಮತ್ತು ಅವರ ಕುಟುಂಬದ ಇಬ್ಬರಿಗೆ ಕೋವಿಡ್ -19 ತಗುಲಿದೆ. ಸೋಂಕಿತರು ಸದ್ಯ ತಂಡದಿಂದ ಪ್ರತ್ಯೇಕವಾಗಿ ಇದ್ದಾರೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಅಲ್ಲದೆ, ತಂಡದ ಎಲ್ಲ ಸದಸ್ಯರು ಹಾಗೂ ಇತರ ಸಿಬ್ಬಂದಿಯ ಕೋವಿಡ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡವು ಇಂದು ಮತ್ತೊಮ್ಮೆ ಪಿಸಿಆರ್ ಪರೀಕ್ಷೆಗೆ ಒಳಪಡಲಿದೆ. ಎರಡೂ ತಂಡಗಳು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ವಹಿಸಲಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್‌ನ 185 ರನ್‌ಗಳಿಗೆ ಸರ್ವಪತನ ಕಂಡಿದ್ದು, ಪ್ರತ್ಯುತ್ತರವಾಗಿ ನಿನ್ನೆ ಆಸ್ಟ್ರೇಲಿಯಾ ಒಂದು ವಿಕೆಟ್‌ಗೆ 61 ರನ್ ಬಾರಿಸಿತ್ತು. ಇಂದು ಎರಡನೇ ದಿನದಾಟ ಮುಂದುವರೆದಿದೆ. ಬ್ರಿಸ್ಬೇನ್ ಮತ್ತು ಅಡಿಲೇಡ್‌ನಲ್ಲಿನ ಸೋಲುಗಳ ನಂತರ, ಐದು ಟೆಸ್ಟ್‌ಗಳ ಸರಣಿಯನ್ನು ಜೀವಂತವಾಗಿಡಲು ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಇದನ್ನೂ ಓದಿ: ಪವನ್ ಶೇರಾವತ್ ಆರ್ಭಟ: ಬೆಂಗಾಲ್ ವಾರಿಯರ್ಸ್ ವಿರುದ್ಧ ಬುಲ್ಸ್ಗೆ ರೋಚಕ ಜಯ