ಲಾರ್ಡ್ಸ್ (ಲಂಡನ್): ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಏಕಾಂಗಿಯಾಗಿ ತಂಡಕ್ಕೆ ಬೆನ್ನೆಲುಬಾಗಿದ್ದಾರೆ. ಎರಡನೇ ಟೆಸ್ಟ್ನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಆಂಗ್ಲ ಪಾಳಯಕ್ಕೆ ನಾಯಕ ಗೆಲುವಿ ಸಾಧ್ಯತೆಗಳನ್ನು ನೀಡುತ್ತಿದ್ದಾರೆ. ಆದರೆ ಅವರಿಗೆ ಕ್ರೀಸ್ನಲ್ಲಿ ಇತರೆ ಬ್ಯಾಟರ್ಗಳ ಸಾಥ್ ಸಹ ಬೇಕಾಗಿದೆ. ಆದರೆ ಇಂಗ್ಲೆಂಡ್ ನಾಯಕ ಶತಕವನ್ನು ತಮ್ಮ ಬೇಸ್ಬಾಲ್ ನೀತಿಯಲ್ಲಿ ಗಳಿಸಿದ್ದು ವಿಶೇಷವಾಗಿತ್ತು. ವಿಕೆಟ್ ಕಳೆದುಕೊಂಡಿದ್ದರೂ, ಒಂದು ಓವರ್ನಲ್ಲಿ 24 ರನ್ ಹೊಡೆಯುವ ಮೂಲಕ ಶತಕವನ್ನು ದಾಖಲಿಸಿದರು.
56ನೇ ಓವರ್ ಮಾಡಲು ಬಂದ ಗ್ರೀನ್ ಓವರ್ನಲ್ಲಿ 24 ರನ್ ಗಳಿಸಿದರು. ಒಂದು ಬೌಂಡರಿ ಮತ್ತು ಮೂರು ಸಿಕ್ಸ್ ಗಳಿಸಿದ್ದಲ್ಲದೇ ಒಂದು ರನ್ ಓಡಿ ಗಳಿಸಿದರು ಇದರಿಂದ ಅವರು 101 ರನ್ ಪೂರ್ಣಗೊಳಿಸಿದರು. ಬೆನ್ ಸ್ಟೋಕ್ಸ್ 126 ಬಾಲ್ಗಳನ್ನು ಎದುರಿಸಿದ್ದ 62 ರನ್ ಗಳಿಸಿದ್ದಾಗ ಜಾನಿ ಬೈರ್‌ಸ್ಟೋವ್ ಔಟ್ ಆದರು. ನಂತರ ಬೆನ್ ಸ್ಟೋಕ್ಸ್ ಬಿರುಸಿನ ಬ್ಯಾಟಿಂಗ್ಗೆ ಮುಂದಾಗಿ ಕೇವಲ 21 ಬಾಲ್ನಲ್ಲಿ 46 ರನ್ ಗಳಿಸಿ ಶತಕ ಮಾಡಿಕೊಂಡರು. 4ನೇ ಇನ್ನಿಂಗ್ಸ್‌ನಲ್ಲಿ 3 ಶತಕಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ.
-
6️⃣, 6️⃣, 6️⃣
— ICC (@ICC) July 2, 2023 " class="align-text-top noRightClick twitterSection" data="
What a way to reach your Test ton! 😱
Ben Stokes 👏👏👏#WTC25 | #ENGvAUS 📝: https://t.co/liWqlPCKqn pic.twitter.com/pnhjDKAAlh
">6️⃣, 6️⃣, 6️⃣
— ICC (@ICC) July 2, 2023
What a way to reach your Test ton! 😱
Ben Stokes 👏👏👏#WTC25 | #ENGvAUS 📝: https://t.co/liWqlPCKqn pic.twitter.com/pnhjDKAAlh6️⃣, 6️⃣, 6️⃣
— ICC (@ICC) July 2, 2023
What a way to reach your Test ton! 😱
Ben Stokes 👏👏👏#WTC25 | #ENGvAUS 📝: https://t.co/liWqlPCKqn pic.twitter.com/pnhjDKAAlh
ಇಂದು ಇಂಗ್ಲೆಂಡ್ ಗೆಲುವಿಗೆ 257 ರನ್ ಅಗತ್ಯ ಇತ್ತು. ಇಂದು ಮೊದಲ ಸೆಷನ್ನಲ್ಲಿ ಎರಡು ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ 129 ರನ್ ಗಳಿಸಿದೆ. ಬೆನ್ ಡಕೆಟ್ ಮತ್ತು ನಾಯಕ ಸ್ಟೋಕ್ಸ್ ಜೋಡಿ ಇಂದು ಆಂಗ್ಲ ತಂಡಕ್ಕೆ ಉತ್ತಮ ಆಸರೆ ಆದರಲ್ಲದೇ ಅವರ ಬೇಸ್ಬಾಲ್ ನೀತಿಯಂತೆ ಬ್ಯಾಟ್ ಬೀಸಿದರು. ಇದರಿಂದ ಆಸ್ಟ್ರೇಲಿಯಾ ಬಳಿ ಇದ್ದ ಗೆಲ್ಲುವ ಅವಕಾಶ ನಿಧಾನವಾಗಿ ಇಂಗ್ಲೆಂಡ್ ಕಡೆ ವಾಲಿದೆ. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು.
ಡಕೆಟ್ ನಂತರ ಬಂದ ಜಾನಿ ಬೈರ್‌ಸ್ಟೋವ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆದರೆ ನಾಯಕ ತನ್ನ ಏಕಾಂಗಿ ಆಟವನ್ನು ತಂಡಕ್ಕಾಗಿ ಆಡುತ್ತಾ ಸಾಗಿದರು. ಇದರಿಂದ ಅವರ ಖಾತೆಗೆ 13ನೇ ಶತಕ ಸೇರಿಕೊಂಡಿತು. ಭೋಜನ ವಿರಾಮದ ವೇಳೆಗೆ ಕ್ರೀಸ್ನಲ್ಲಿ 1 ರನ್ನಿಂದ ಸ್ಟೂವರ್ಟ್ ಬ್ರಾಡ್ ಮತ್ತು 108 ರನ್ ಗಳಿಸಿದ ಸ್ಟೋಕ್ಸ್ ಇದ್ದರು.
-
Ben Stokes at one point 82*(138) and then he smashed 6,6,6 and completed his Hundred at Lord's.
— CricketMAN2 (@ImTanujSingh) July 2, 2023 " class="align-text-top noRightClick twitterSection" data="
Ben Stokes - What a Freak, What a Cricketer!! pic.twitter.com/bk2dWTMGrC
">Ben Stokes at one point 82*(138) and then he smashed 6,6,6 and completed his Hundred at Lord's.
— CricketMAN2 (@ImTanujSingh) July 2, 2023
Ben Stokes - What a Freak, What a Cricketer!! pic.twitter.com/bk2dWTMGrCBen Stokes at one point 82*(138) and then he smashed 6,6,6 and completed his Hundred at Lord's.
— CricketMAN2 (@ImTanujSingh) July 2, 2023
Ben Stokes - What a Freak, What a Cricketer!! pic.twitter.com/bk2dWTMGrC
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ನ ಕೊನೆಯ ಆರು ವಿಕೆಟ್ನ್ನು ಕೇವಲ 72 ರನ್ ಗಳಿಸುವಷ್ಟರಲ್ಲಿ ಕಬಳಿಸಿತ್ತು. ಆದರೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಕಾಂಗರೂ ಪಡೆಯ ಬೌಲರ್ಗಳ ಚಮತ್ಕಾರ ನಡೆಯಲಿಲ್ಲ. ಅಲ್ಲದೇ ಆಸಿಸ್ನ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಗಾಯಗೊಂಡಿದ್ದು, ಅವರು ಬೌಲಿಂಗ್ ಮಾಡುತ್ತಿಲ್ಲ. ಇದು ಸಹ ಹಿನ್ನಡೆಗೆ ಕಾರಣ ಆಗಬಹುದು.
ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ ಅವರ 77 ರನ್ನ ಸಹಾಯದಿಂದ 371 ರನ್ ಗುರಿಯನ್ನು ಇಂಗ್ಲೆಂಡ್ ನೀಡಲು ಸಾಧ್ಯವಾಯಿತು. ನಾಲ್ಕನೇ ದಿನದ ಭೋಜನ ವಿರಾಮದ ವರೆಗೆ ಉತ್ತಮವಾಗಿ ಆಡುತ್ತಾ ಬಂದಿದ್ದ ಆಸಿಸ್ ನಂತರ ಒಮ್ಮೆಗೆ ಕುಸಿತ ಅನುಭವಿಸಿತು. ಇದರಿಂದ ಎರಡನೇ ಸೆಷನ್ ಪೂರ್ಣವಾಗಿ ಆಡುವ ಮೊದಲೇ ಆಲ್ಔಟ್ಗೆ ಗುರಿಯಾಯಿತು.
ಇದನ್ನೂ ಓದಿ: Ashes 2023: ಲಾರ್ಡ್ಸ್ ಟೆಸ್ಟ್ ಗೆಲ್ಲಲು ಆಸಿಸ್‌ಗೆ ಬೇಕು 6 ವಿಕೆಟ್, ಇಂಗ್ಲೆಂಡ್ಗೆ ಬೇಕು 257 ರನ್