ಎಡ್ಜ್‌ಬಾಸ್ಟನ್ (ಲಂಡನ್): ಆಸ್ಟ್ರೇಲಿಯಾದ ಕರಾರುವಾಕ್ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ನ ಬ್ಯಾಟರ್ಗಳಿಂದ ದೊಡ್ಡ ಇನ್ನಿಂಗ್ಸ್ ಕಟ್ಟುವ ಗುರಿ ಈಡೇರಲಿಲ್ಲ. ಏಷ್ಯಾ ರಾಷ್ಟ್ರಗಳ ಪಿಚ್ಗಳಲ್ಲಿ ಸ್ಪಿನ್ಗೆ ವಿಕೆಟ್ ಒಪ್ಪಿಸುವಂತೆ ನಾಥನ್ ಲಯಾನ್ ಅವರ ಬಿಗು ಬೌಲಿಂಗ್‌ಗೆ ಆಂಗ್ಲ ಬ್ಯಾಟರ್ಗಳು ವಿಕೆಟ್ ಒಪ್ಪಿಸಿದರು. ಇದರಿಂದ 273 ರನ್‌ಗಳಿಗೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಆಲೋಟ್ ಆಯಿತು. 5 ಪಂದ್ಯಗಳ ಪ್ರತಿಷ್ಟಿತ ಆ್ಯಶಸ್ ಟೂರ್ನಿಯ ಮೊದಲ ಟೆಸ್ಟ್ ಗೆಲುವಿಗೆ ಆಸ್ಟ್ರೇಲಿಯಾಗೆ 281 ರನ್ ಗುರಿ ಬೇಕಿದೆ. ನಾಲ್ಕು ಸೆಷನ್ಗಳು ಆಸ್ಟ್ರೇಲಿಯಾ ಜೊತೆಗಿದ್ದು, 120 ಓವರ್‌ಗಳಲ್ಲಿ ಈ ಗುರಿ ಸಾಧಿಸಬೇಕಿದೆ.
ಮೂರನೇ ದಿನದ ಕೊನೆಯ ಸೆಷನ್ ಬಾಕಿ ಇರುವಾಗ ಆಲೌಟಾದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ್ದ ಮೊತ್ತಕ್ಕಿಂತ 7 ರನ್ ಹಿನ್ನಡೆ ಅನುಭವಿಸಿತ್ತು. ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ನಿನ್ನೆಯೇ ಆರಂಭಿಕ ಆಘಾತ ಉಂಟಾಗಿತ್ತು. 19 ರನ್ ಗಳಿಸಿ ಬೆನ್ ಡಕೆಟ್ ವಿಕೆಟ್ ಕೊಟ್ಟಿದ್ದರು. 7 ರನ್ಗೆ ಝಾಕ್ ಕ್ರಾಲಿ ಸಹ ಪೆವಿಲಿಯನ್ಗೆ ಮರಳಿದ್ದರು. ಮೂರನೇ ದಿನದ ಕೊನೆಯ ಸೆಷನ್ ವೇಳೆ ಎರಡು ಬಾರಿ ಮಳೆ ಬಂದು ಪಂದ್ಯ ಸ್ಥಗಿತವಾದ ಕಾರಣ ಕೇವಲ 10 ಓವರ್ಗೆ ದಿನ ಅಂತ್ಯ ಮಾಡಲಾಯಿತು. ಈ ವೇಳೆಗೆ ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು.
-
❌ ALL OUT ❌
— England Cricket (@englandcricket) June 19, 2023 " class="align-text-top noRightClick twitterSection" data="
We finish our second innings on 2️⃣7️⃣3️⃣, setting Australia need 2️⃣8️⃣1️⃣ to win.
Enter stage right, James Anderson & Stuart Broad 👇#EnglandCricket | #Ashes
">❌ ALL OUT ❌
— England Cricket (@englandcricket) June 19, 2023
We finish our second innings on 2️⃣7️⃣3️⃣, setting Australia need 2️⃣8️⃣1️⃣ to win.
Enter stage right, James Anderson & Stuart Broad 👇#EnglandCricket | #Ashes❌ ALL OUT ❌
— England Cricket (@englandcricket) June 19, 2023
We finish our second innings on 2️⃣7️⃣3️⃣, setting Australia need 2️⃣8️⃣1️⃣ to win.
Enter stage right, James Anderson & Stuart Broad 👇#EnglandCricket | #Ashes
ನಾಲ್ಕನೇ ದಿನವಾದ ಇಂದು ಮೋಡದ ನಡುವೆ ಪಂದ್ಯ 15 ನಿಮಿಷ ತಡವಾಗಿಯೇ ಆರಂಭವಾಯಿತು. ಆದರೆ ನಂತರ ಮಳೆಯ ಭೀತಿ ದೂರಾಯಿತು. ಇಂಗ್ಲೆಂಡ್ಗೆ ಹೊಡಿಬಡಿ ದಾಂಡಿಗ ಬ್ರೆಂಡಮ್ ಮೆಕಲಮ್ ಕೋಚ್ ಮತ್ತು ಬೆನ್ ಸ್ಟೋಕ್ಸ್ ನಾಯಕನಾದ ನಂತರ ಏಕದಿನ ಮಾದರಿಯಲ್ಲಿ ತಂಡ ರನ್ ಕಲೆಹಾಕುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ರೂಟ್ ಸ್ವಲ್ಪ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದು ಬಿಟ್ಟರೆ ಮಿಕ್ಕವರೆಲ್ಲ ಹೊಡಿಬಡಿ ಆಟವನ್ನೇ ಪ್ರದರ್ಶಿಸಿದ್ದರು.
ಎರಡನೇ ಇನ್ನಿಂಗ್ಸ್ ಆರಂಭದಲ್ಲೇ ಎರಡು ವಿಕೆಟ್ನ ಪತನವಾಗಿದ್ದರೂ ವಿಕೆಟ್ ನಿಲ್ಲಿಸುವ ಬಗ್ಗೆ ಯಾವುದೇ ಬ್ಯಾಟರ್ಗಳು ಚಿಂತಿಸದೇ, ರನ್ ಗರಿ ಹೆಚ್ಚಿಸುವತ್ತ ಗಮನ ಹರಿಸಿದರು. ಇದರಿಂದ ರನ್ ವೇಗವಾಗಿ ಬರುತ್ತಿದ್ದಂತೆ ಅತ್ತ ವಿಕೆಟ್ ನಷ್ಟವನ್ನು ತಂಡ ಅನುಭವಿಸಿತು. ಓಲಿ ಪೋಪ್ ಇಂದಿನ ಮೊದಲ ಸೆಷನ್ ಆರಂಭವಾಗುತ್ತಿದ್ದಂತೆ ವಿಕೆಟ್ ಕೊಟ್ಟರು. ಇವರ ನಂತರ ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ ಬಿರುಸಿನ ಇನ್ನಿಂಗ್ಸ್ ಕಟ್ಟಿದರು.
ಜೋ ರೂಟ್ 55 ಎಸೆತ ಎದುರಿಸಿ 1 ಸಿಕ್ಸ್ ಮತ್ತು 5 ಬೌಂಡರಿಯಿಂದ 46 ರನ್ ಕಲೆಹಾಕಿದರು. ಹ್ಯಾರಿ ಬ್ರೂಕ್ 52 ಬಾಲ್ನಲ್ಲಿ 46 ರನ್ ಮತ್ತು ನಾಯಕ ಬೆನ್ ಸ್ಟೋಕ್ಸ್ 66 ಎಸೆತದಲ್ಲಿ 43 ರನ್ ಚಚ್ಚಿದರು. ಜಾನಿ ಬೈರ್‌ಸ್ಟೋವ್ 20, ಮೊಯಿನ್ ಅಲಿ 19, ಆಲಿ ರಾಬಿನ್ಸನ್ 27, ಜೇಮ್ಸ್ ಆಂಡರ್ಸನ್ 12 ರನ್ಗಳಿಸಿ ಔಟಾದರು.
ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಲಯಾನ್ ತಲಾ 4 ವಿಕೆಟ್ ಪಡೆದರು. ಜೋಶ್ ಹ್ಯಾಜಲ್ವುಡ್ ಮತ್ತು ಸ್ಕಾಟ್ ಬೋಲ್ಯಾಂಡ್ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: Ashes 2023: ಕೈಗೆ ಡ್ರೈಯಿಂಗ್ ಸ್ಪ್ರೇ ಬಳಸಿದ ಮೊಯಿನ್ ಅಲಿ.. ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಿದ ಐಸಿಸಿ