ಅಬುಧಾಬಿ: ಪಾಕಿಸ್ತಾನ ಸೂಪರ್ ಲೀಗ್ ವೇಳೆ ಬೌನ್ಸರ್ ತಲೆಗೆ ಬಡಿದ ಪರಿಣಾಮ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಗಾಯಗೊಂಡಿದ್ದು, ಅವರನ್ನು ಮೈದಾನದಿಂದ ಸ್ಟ್ರೆಚರ್ ಮೂಲಕ ಮೈದಾನದಿಂದ ಕರೆದೊಯ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರಸೆಲ್ ಪಿಎಸ್ನಲ್ಲಿ ಕ್ವೆಟ್ಟ ಗ್ಲಾಡಿಯೇಟರ್ಸ್ ತಂಡದಲ್ಲಿದ್ದರು.
ಶುಕ್ರವಾರ ರಾತ್ರಿ ಮುಂದುವರಿದ ಪಿಎಸ್ಎಲ್ ಲೀಗ್ನ ಕ್ವೆಟ್ಟ ಗ್ಲಾಡಿಯೇಟರ್ಸ್ ಮತ್ತು ಇಸ್ಲಮಾಬಾದ್ ಯುನೈಡೆಡ್ ನಡುವೆ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಗ್ಲಾಡಿಯೇಟರ್ಸ್ ಪರ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ರಸೆಲ್ ಮೊಹಮ್ಮದ್ ಮೂಸಾ ಎಸೆದ ಬೌನ್ಸರ್ ರಸೆಲ್ ಹೆಲ್ಮೆಟ್‌ಗೆ ಬಡಿಯಿತು. ತಕ್ಷಣ ರಸೆಲ್ ನೆಲಕ್ಕೆ ಕುಸಿದು ಬಿದ್ದರು. ತಕ್ಷಣ ಅವರನ್ನು ವೈದ್ಯರು ಪರೀಕ್ಷೀಸಿದರು. ಬ್ಯಾಟಿಂಗ್ ಮುಂದುವರಿಸಿದರಾದರೂ ನಂತರ ಎಸೆತದಲ್ಲೇ ಮೊಹಮ್ಮದ್ ವಾಸಿಮ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
-
The first ever #Dre show for the #PurpleForce had everything !@Russell12A #GladiatorsForever #PurpleForce #QGvIU
— Quetta Gladiators (@TeamQuetta) June 11, 2021 " class="align-text-top noRightClick twitterSection" data="
pic.twitter.com/MdaZnhFcxn
">The first ever #Dre show for the #PurpleForce had everything !@Russell12A #GladiatorsForever #PurpleForce #QGvIU
— Quetta Gladiators (@TeamQuetta) June 11, 2021
pic.twitter.com/MdaZnhFcxnThe first ever #Dre show for the #PurpleForce had everything !@Russell12A #GladiatorsForever #PurpleForce #QGvIU
— Quetta Gladiators (@TeamQuetta) June 11, 2021
pic.twitter.com/MdaZnhFcxn
ಔಟಾದ ಬಳಿಕ ಅವರನ್ನು ಪೆವಿಲಿಯನ್ಗೆ ಸ್ಟ್ರೆಚರ್ ಮೂಲಕ ಕರೆದೊಯ್ಯಲಾಯಿತು. ನಂತರ ಸ್ಕ್ಯಾನ್ಗಾಗಿ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಸೆಲ್ ಬದಲು ಯುವ ವೇಗಿ ನಸೀಮ್ ಶಾಗೆ ಕನ್ಕಷನ್ ಬದಲಿ ಆಟಗಾರನಾಗಿ ಅವಕಾಶ ನೀಡಲಾಯಿತು. ಆದರೆ, ನಶೀಮ್ ಎಸೆದ ಮೊದಲ ಎಸೆತದಲ್ಲೇ 19 ರನ್ ನೀಡಿ ದುಬಾರಿಯಾದರು. ಗ್ಲಾಡಿಯೇಟರ್ಸ್ ನೀಡಿದ್ದ 134 ರನ್ಗಳ ಗುರಿಯನ್ನು ಇಸ್ಲಾಮಬಾದ್ ಕೇವಲ 10 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತು. ಕೀವಿಸ್ ಸ್ಫೋಟಕ ದಾಂಡಿಗ ಕಾಲಿನ್ ಮನ್ರೋ 36 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ಗಳ ನೆರವಿನಿಂದ ಅಜೇಯ 90 ರನ್ಗಳಿಸಿದರೆ, ಖವಾಜ 27 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 41 ರನ್ಗಳಿಸಿದರು.
ಇದನ್ನು ಓದಿ:ಅಂಪೈರ್ ಔಟ್ ನೀಡದ್ದಕ್ಕೆ ಸ್ಟಂಪ್ಗೆ ಒದ್ದ ಶಕಿಬ್, ಟೀಕೆಗಳ ಸುರಿಮಳೆ ನಂತರ ಕ್ಷಮೆಯಾಚನೆ!