ಮುಂಬೈ: ಫೆಬ್ರವರಿ ತಿಂಗಳಲ್ಲಿ ಭಾರತದ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡ ಮೂರು ಏಕದಿನ ಹಾಗೂ ಮೂರು ಟಿ-20 ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಅದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಸ್ಥಳ ನಿಗದಿ ಮಾಡಿದೆ. ಇಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಹ್ಮದಾಬಾದ್ ಹಾಗೂ ಕೋಲ್ಕತ್ತಾ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.
ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯದಕ್ಕಾಗಿ ಬಿಸಿಸಿಐ ಈ ಹಿಂದೆ ಆರು ಸ್ಥಳ ನಿಗದಿ ಮಾಡಿತ್ತು. ಆದರೆ, ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಇದೀಗ ಕೇವಲ ಎರಡು ಸ್ಥಳಗಳಲ್ಲಿ ಪಂದ್ಯ ನಡೆಸಲು ನಿರ್ಧಾರ ಕೈಗೊಂಡಿದೆ. ಅಹ್ಮದಾಬಾದ್, ಕೋಲ್ಕತ್ತಾ ಜೊತೆಗೆ ಜೈಪುರ್, ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲೂ ಪಂದ್ಯ ನಡೆಸುವ ಯೋಜನೆ ಹಾಕಿಕೊಂಡಿತ್ತು.
ಇದನ್ನೂ ಓದಿರಿ: ರೋಚಕ ಪಂದ್ಯದಲ್ಲಿ ಪುಣೇರಿ ವಿರುದ್ಧ ಸೋಲು... 35-37 ಅಂತರದಿಂದ ಪಂದ್ಯ ಕೈಚೆಲ್ಲಿದ ಬೆಂಗಳೂರು ಬುಲ್ಸ್
ಭಾರತ-ವೆಸ್ಟ್ ಇಂಡೀಸ್ ನಡುವೆ ಫೆಬ್ರವರಿ 6ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಅಹ್ಮದಾಬಾದ್ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ತದನಂತರ ಟಿ-20 ಕ್ರಿಕೆಟ್ ಸರಣಿ ಆಡಲು ಉಭಯ ತಂಡಗಳು ಕೋಲ್ಕತ್ತಾಗೆ ಪ್ರವಾಸ ಕೈಗೊಳ್ಳಲಿವೆ. ಫೆ. 16ರಿಂದ ಪಂದ್ಯಗಳು ಆರಂಭವಾಗಲಿವೆ.
ಭಾರತ-ವೆಸ್ಟ್ ಇಂಡೀಸ್ ವೇಳಾಪಟ್ಟಿ ಇಂತಿದೆ
- ಫೆ. 6, ಫೆ, 9 ಹಾಗೂ ಫೆ. 11ರಂದು ಅಹ್ಮದಾಬಾದ್ನಲ್ಲಿ ಏಕದಿನ ಸರಣಿ
- ಫೆ.16,ಫೆ, 18 ಹಾಗೂ ಫೆ. 20ರಂದು ಕೋಲ್ಕತ್ತಾದಲ್ಲಿ ಟಿ20 ಪಂದ್ಯಗಳು
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ