ಕಾಬೂಲ್(ಅಫ್ಘಾನಿಸ್ತಾನ): 17ನೇ ಆವೃತ್ತಿಯ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ(ಐಪಿಎಲ್) ಅಫ್ಘಾನಿಸ್ತಾನದ ಮೂವರು ಆಟಗಾರರು ಆಡುವುದು ಅನುಮಾನ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (ಎಸಿಬಿ) ಕ್ರಿಕೆಟಿಗರಾದ ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್ ಮತ್ತು ಫಜಲ್ಹಕ್ ಫಾರೂಕಿ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಲು ನಿರಾಕರಿಸಿದೆ. ನವೀನ್ ಉಲ್ ಹಕ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಫಜಲ್ ಹಕ್ ಫಾರೂಖಿ ಸನ್ರೈಸರ್ಸ್ ಹೈದರಾಬಾದ್, ಮುಜೀಬ್ ಉರ್ ರೆಹಮಾನ್ ಈ ಬಾರಿಯ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
-
🚨 ANNOUNCEMENT 🚨
— Afghanistan Cricket Board (@ACBofficials) December 25, 2023 " class="align-text-top noRightClick twitterSection" data="
The ACB has decided to delay the annual central contracts and opt not to grant NOCs to three national players, @Mujeeb_R88, @fazalfarooqi10 and Naveen Ul Haq.
Full Details 👉: https://t.co/FKECO8U7Ba pic.twitter.com/GMDaTzzNNP
">🚨 ANNOUNCEMENT 🚨
— Afghanistan Cricket Board (@ACBofficials) December 25, 2023
The ACB has decided to delay the annual central contracts and opt not to grant NOCs to three national players, @Mujeeb_R88, @fazalfarooqi10 and Naveen Ul Haq.
Full Details 👉: https://t.co/FKECO8U7Ba pic.twitter.com/GMDaTzzNNP🚨 ANNOUNCEMENT 🚨
— Afghanistan Cricket Board (@ACBofficials) December 25, 2023
The ACB has decided to delay the annual central contracts and opt not to grant NOCs to three national players, @Mujeeb_R88, @fazalfarooqi10 and Naveen Ul Haq.
Full Details 👉: https://t.co/FKECO8U7Ba pic.twitter.com/GMDaTzzNNP
ಈ ಆಟಗಾರರು ಫ್ರಾಂಚೈಸಿ ಲೀಗ್ನಲ್ಲಿ ಹೆಚ್ಚು ಭಾಗವಹಿಸುವ ಉದ್ದೇಶದಿಂದ ಅಫ್ಘಾನ್ ತಂಡದ ಕೇಂದ್ರೀಯ ಒಪ್ಪಂದದಿಂದ ಬಿಡುಗಡೆ ಬಯಸಿದ್ದರು. ರಾಷ್ಟ್ರೀಯ ತಂಡಕ್ಕಿಂತ ಫ್ರಾಂಚೈಸಿ ಲೀಗ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದ್ದಾರೆ ಎಂಬ ಕಾರಣಕ್ಕೆ ಆಟಗಾರರಿಗೆ ಎನ್‌ಒಸಿ ನೀಡದಿರಲು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ನವೀನ್, ಫಾರೂಖಿ ಹಾಗೂ ಮುಜೀಬ್ಗೆ ಮುಂದಿನ 2 ವರ್ಷಗಳ ಕಾಲ ನಿರಾಕ್ಷೇಪಣಾ ಪತ್ರ ನೀಡುವುದಿಲ್ಲ ಎಂದು ಮಂಡಳಿ ತಿಳಿಸಿದೆ.
ಎನ್ಸಿಒ ಎಂದರೇನು?: No Objection Certificates ಎಂದು ಕರೆಯಲಾಗುತ್ತದೆ. ಕ್ರಿಕೆಟ್ ಸಂಸ್ಥೆಗಳು ರಾಷ್ಟ್ರೀಯ ಕ್ರಿಕೆಟ್ ಹೊರತಾಗಿ ವಿದೇಶದಲ್ಲಿ ಲೀಗ್ಗಳನ್ನು ಆಡಲು ನೀಡುವ ಒಪ್ಪಿಗೆ. ಭಾರತೀಯ ಆಟಗಾರರಿಗೆ ಬಿಸಿಸಿಐ ಈ ಎನ್ಸಿಒ ನೀಡದ ಕಾರಣ ಯಾವುದೇ ವಿದೇಶಿ ಲೀಗ್ಗಳಲ್ಲಿ ಆಟಗಾರರು ಭಾಗವಹಿಸುವಂತಿಲ್ಲ. ಬಿಸಿಸಿಐನ ಒಪ್ಪಿಗೆ ಇಲ್ಲದೇ ಆಡಿದ್ದಲ್ಲಿ ಆಟಗಾರರನ್ನು ಬ್ಯಾನ್ ಮಾಡುವ ಸಾಧ್ಯತೆಯೂ ಇದೆ. ಇಂಗ್ಲೆಂಡ್ನಲ್ಲಿ ನಡೆಯುವ ದೇಶೀ ಟೂರ್ನಿ ಕೌಂಟಿ ಕ್ರಿಕೆಟ್‌ಗೆ ಮಾತ್ರ ಬಿಸಿಸಿಐ ಕೆಲ ಆಟಗಾರರಿಗೆ ಒಪ್ಪಿಗೆ ನೀಡುತ್ತದೆ.
ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನವೀನ್: ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ನಂತರ ಟಿ20 ವೈಟ್ ಬಾಲ್ ಕ್ರಿಕೆಟ್ ಮಾತ್ರ ಆಡುವುದಾಗಿ ನವೀನ್ ಉಲ್ ಹಕ್ ತಿಳಿಸಿದ್ದರು. ಅವರು ಲೀಗ್ ಕ್ರಿಕೆಟ್ಗಳತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು. ರಾಷ್ಟ್ರೀಯ ತಂಡದ ಸದಸ್ಯತ್ವ ತೊರೆದು ಲೀಗ್ಗೆ ಸೀಮಿತವಾಗುವ ನಿರ್ಧಾರಕ್ಕೆ ಎಸಿಬಿ ತಡೆಯೊಡ್ಡಿದೆ.
ಐಪಿಎಲ್ನ ಅಫ್ಘಾನಿಸ್ತಾನ್ ಆಟಗಾರರು:
- ರಶೀದ್ ಖಾನ್ (ಗುಜರಾತ್ ಟೈಟಾನ್ಸ್)
- ಮೊಹಮ್ಮದ್ ನಬಿ (ಮುಂಬೈ ಇಂಡಿಯನ್ಸ್)
- ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್)
- ರಹಮಾನುಲ್ಲಾ ಗುರ್ಬಾಝ್ (ಕೋಲ್ಕತ್ತಾ ನೈಟ್ ರೈಡರ್ಸ್)
- ನವೀನ್ ಉಲ್ ಹಕ್ (ಲಕ್ನೋ ಸೂಪರ್ ಜೈಂಟ್ಸ್)
- ಫಝಲ್ಹಕ್ ಫಾರೂಖಿ (ಸನ್ರೈಸರ್ಸ್ ಹೈದರಾಬಾದ್)
- ಅಝ್ಮತುಲ್ಲಾ ಒಮರ್ಝಾಹಿ (ಗುಜರಾತ್ ಟೈಟಾನ್ಸ್)
- ಮುಜೀಬ್ ಉರ್ ರೆಹಮಾನ್ (ಕೋಲ್ಕತ್ತಾ ನೈಟ್ ರೈಡರ್ಸ್)
ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ ನೀಡಿದ ದ.ಆಫ್ರಿಕಾ; 3 ವಿಕೆಟ್ ಪತನ