ETV Bharat / sports

ದಕ್ಷಿಣ ಆಫ್ರಿಕಾ ಪ್ರವಾಸ: ಗಾಯಕ್ವಾಡ್ ಬದಲಿಯಾಗಿ ಅಭಿಮನ್ಯು ಈಶ್ವರನ್​ಗೆ ಸ್ಥಾನ

Abhimanyu Easwaran named replacement: ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡದಿಂದ ಹೊರಗುಳಿದಿರುವ ರುತುರಾಜ್ ಗಾಯಕ್ವಾಡ್ ಬದಲಿಗೆ ಅಭಿಮನ್ಯು ಈಶ್ವರನ್​ ತಂಡ ಸೇರಿಕೊಕೊಳ್ಳಲಿದ್ದಾರೆ.

Abhimanyu Easwaran
Abhimanyu Easwaran
author img

By ETV Bharat Karnataka Team

Published : Dec 23, 2023, 3:49 PM IST

ಹೈದರಾಬಾದ್​​: ಬೆರಳಿನ ಗಾಯದಿಂದಾಗಿ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ಎ ತಂಡದ ಭಾಗವಾಗಿ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿರುವ ಅಭಿಮನ್ಯು ಈಶ್ವರನ್ ಅವರನ್ನು ಗಾಯಕ್ವಾಡ್ ಬದಲಿಗೆ ಹೆಸರಿಸಲಾಗಿದೆ.

  • 🚨 NEWS 🚨

    Ruturaj Gaikwad ruled out of the #SAvIND Test series.

    The Selection Committee has added Rajat Patidar, Sarfaraz Khan, Avesh Khan & Rinku Singh to India A’s squad while Kuldeep Yadav has been released from the squad.

    Details 🔽 #TeamIndia

    — BCCI (@BCCI) December 23, 2023 " class="align-text-top noRightClick twitterSection" data=" ">

ಗ್ಕೆಬರ್ಹಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಎರಡನೇ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಕ್ವಾಡ್ ಅವರ ಬಲ ಉಂಗುರದ ಬೆರಳಿಗೆ ಗಾಯವಾಗಿತ್ತು. ಗಾಯಕ್ವಾಡ್ ಅವರನ್ನು ಸ್ಕ್ಯಾನ್ ಮಾಡಲಾಗಿದೆ ಮತ್ತು ತಜ್ಞರ ಸಮಾಲೋಚನೆಯ ನಂತರ ವೈದ್ಯಕೀಯ ತಂಡವು ಅವರನ್ನು ಪ್ರವಾಸದ ಉಳಿದ ಭಾಗದಿಂದ ಹೊರಗಿಟ್ಟಿದೆ ಎಂದು ಬಿಸಿಸಿಐ ಹೇಳಿದೆ. ಗಾಯಕ್ವಾಡ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಬಂಗಾಳದಲ್ಲಿ ಈಶ್ವರನ್ ಆರಂಭಿಕರಾಗಿ ಆಡುತ್ತಾ ಬಂದಿದ್ದಾರೆ. ಭಾರತ ತಂಡದಲ್ಲಿ ಹಲವು ಬಾರಿ ಸ್ಟ್ಯಾಂಡ್‌ಬೈ ಆಟಗಾರಾರು ಇದ್ದರು. ಕಳೆದ ವರ್ಷ ಬಾಂಗ್ಲಾದೇಶ ಪ್ರವಾಸ, 2021ರ ಇಂಗ್ಲೆಂಡ್​​ ವಿರುದ್ಧದ ತವರಿನ ಸರಣಿಯಲ್ಲೂ ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಒಬ್ಬರಾಗಿ ಹೆಸರಿಸಲ್ಪಟ್ಟರು.

ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇ (ಡಿಸೆಂಬರ್ 26) ರಂದು ಪ್ರಾರಂಭವಾಗುವ ಸರಣಿಯ ಆರಂಭಿಕ ಪಂದ್ಯಕ್ಕೆ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ಆಯ್ಕೆಯ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ. ಈಶ್ವರನ್ ಎರಡನೇ ಕೇಪ್ ಟೌನ್ ಟೆಸ್ಟ್‌ಗೆ (2024, ಜನವರಿ 3 - 7) ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.

ಈಶ್ವರನ್ ಸದ್ಯ ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತ ಎ ತಂಡದ ನಾಯಕತ್ವವನ್ನು ವಹಿಸಲಿದ್ದಾರೆ. ಎ ತಂಡಗಳ ನಡುವಿನ ಮೊದಲ ಟೆಸ್ಟ್​ ಡ್ರಾನಲ್ಲಿ ಅಂತ್ಯವಾಗಿದೆ. ಎರಡನೇ ಟೆಸ್ಟ್​ ಪಂದ್ಯ ಡಿ. 26 - 29 ವರೆಗೆ ಬೆನೋನಿಯ ವಿಲೋಮೂರ್ ಪಾರ್ಕ್‌ನಲ್ಲಿ ನಡೆಯಲಿದೆ.

ದಕ್ಷಿಣ ಆಫ್ರಿಕಾ 'ಎ' ವಿರುದ್ಧದ ನಾಲ್ಕು ದಿನಗಳ ಪಂದ್ಯಕ್ಕಾಗಿ ಈಶ್ವರನ್ ನೇತೃತ್ವದ ಭಾರತ ಎ ತಂಡಕ್ಕೆ ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಅವೇಶ್ ಖಾನ್ ಮತ್ತು ರಿಂಕು ಸಿಂಗ್ ಅವರನ್ನು ಸೇರಿಸಿರುವುದಾಗಿ ಬಿಸಿಸಿಐ ತಿಳಿಸಿದೆ. ಆದರೆ, ವೇಗದ ಬೌಲರ್ ಹರ್ಷಿತ್ ರಾಣಾ ಮಂಡಿರಜ್ಜು ಗಾಯದ ಕಾರಣ ಹೊಗುಳಿದಿದ್ದಾರೆ ಮತ್ತು ಕುಲದೀಪ್ ಯಾದವ್ ತಂಡದಿಂದ ಹೊಗುಳಿದಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊ. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್.

ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಧ್ರುವ್ ಜುರೆಲ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್, ನವದೀಪ್ ಸೈನಿ, ಆಕಾಶ್ ದೀಪ್, ವಿಧ್ವತ್ ಕಾವೇರಪ್ಪ, ಮಾನವ್ ಸುತಾರ್, ರಿಂಕು ಸಿಂಗ್.

ಇದನ್ನೂ ಓದಿ: ಆಸ್ಟ್ರೇಲಿಯಾದ ಡೆನಿಸ್ ಎಮರ್ಸನ್ ದಾಖಲೆ ಸರಿಗಟ್ಟಿದ ದೀಪ್ತಿ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.