ETV Bharat / sports

'ನನ್ನ ಹೃದಯ ತುಂಬಿ ಬಂತು': ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಭಾವನಾತ್ಮಕ ಸಂದೇಶ ಬರೆದ ಎಬಿಡಿ - ಈಟಿವಿ ಭಾರತ ಕನ್ನಡ

ಸ್ಫೋಟಕ ಬ್ಯಾಟಿಂಗ್‌ನಿಂದಲೇ ಗುರುತಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟರ್‌​ ಎಬಿ ಡಿವಿಲಿಯರ್ಸ್ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.​

ಎಬಿ ಡಿವಿಲಿಯರ್ಸ್​
ಎಬಿ ಡಿವಿಲಿಯರ್ಸ್​
author img

By

Published : Mar 29, 2023, 9:54 AM IST

Updated : Mar 29, 2023, 10:04 AM IST

'ಮಿಸ್ಟರ್ 360' ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾ ಕ್ರಿಕೆಟರ್​ ಎಬಿ ಡಿವಿಲಿಯರ್ಸ್ ಸ್ಪೋಟಕ, ವಿಭಿನ್ನ ಶೈಲಿಯ ಬ್ಯಾಟಿಂಗ್‌ನಿಂದಲೇ ಅಭಿಮಾನಿಗಳ ಮನಸ್ಸು ಗೆದ್ದವರು. ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯಿಂದ ಹಿಡಿದು ಸಾಧನೆಯ ಹಲವು ಮೈಲಿಗಲ್ಲುಗಳನ್ನು ತಲುಪಿದ ಶ್ರೇಯ ಹೊಂದಿರುವ ಅಪರೂಪದ ಕ್ರಿಕೆಟ್​ ದಿಗ್ಗಜ ಕೂಡಾ. ಅಂತಾರಾಷ್ಟೀಯ ಮಟ್ಟದಲ್ಲಿ ಮಾತ್ರವಲ್ಲದೇ ಡೊಮೆಸ್ಟಿಕ್​ ಕ್ರಿಕೆಟ್ ಪಂದ್ಯಗಳಲ್ಲೂ ಎಬಿಡಿ ಅಬ್ಬರಿಸಿದವರು. ಅದರಲ್ಲೂ ಆರ್​ಸಿಬಿಯ ಭರವಸೆಯ ಆಟಗಾರರಾಗಿದ್ದ ಇವರು 2021ರ ಐಪಿಎಲ್​ ಆವೃತ್ತಿಯ ನಂತರ ನಿವೃತ್ತಿ ಘೋಷಿಸಿದ್ದರು. ಇತ್ತೀಚೆಗೆ ತಂಡಕ್ಕೆ ವಿಶೇಷ ಕೊಡುಗೆ ನೀಡಿದ್ದ ಕ್ರಿಸ್​ ಗೇಲ್​ ಮತ್ತು ಎಬಿಡಿಗೆ 'ಹಾಲ್​ ಆಫ್​ ಫೇಮ್​' ನೀಡಿ ಗೌರವಿಸಲಾಗಿತ್ತು. ​

ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ನಂತರ ಮಾಜಿ ಕ್ರಿಕೆಟರ್​ ಎಬಿಡಿ, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಸಂದೇಶದಲ್ಲಿ ಆರ್​ಸಿಬಿ ತಂಡ ಮತ್ತು ತಮ್ಮ ಜರ್ಸಿ ಸಂಖ್ಯೆಯನ್ನು ನಿವೃತ್ತಿಗೊಳಿಸಿದ್ದಕ್ಕಾಗಿ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಸಮಾರಂಭದಲ್ಲಿ, ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಅವರೊಂದಿಗೆ ಎಬಿ ಡಿವಿಲಿಯರ್ಸ್ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳುವ ಮೂಲಕ ಫ್ರಾಂಚೈಸಿ ವಿಶೇಷವಾಗಿ ಗೌರವಿಸಿದೆ. ತಂಡಕ್ಕೆ ಈ ಇಬ್ಬರು ಆಟಗಾರರು ನೀಡಿರುವ ಕೊಡುಗೆಗೆ ಗೌರವ ಸೂಚಿಸಿದ ಬೆಂಗಳೂರು ಮೂಲದ ಆರ್​ಸಿಬಿ ಫ್ರಾಂಚೈಸಿ, ಡಿವಿಲಿಯರ್ಸ್ ಅವರ ಜೆರ್ಸಿ ಸಂಖ್ಯೆ 17 ಮತ್ತು ಕ್ರಿಸ್​ ಗೇಲ್ ಅವರ ಜೆರ್ಸಿ ಸಂಖ್ಯೆ 333ರನ್ನು ನಿವೃತ್ತಿಗೊಳಿಸಿದೆ. ಈ ಬಗ್ಗೆ ನಿನ್ನೆ ಎಬಿ ಡಿವಿಲಿಯರ್ಸ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

"ಮಾರ್ಚ್​ 26, 2023 ರಂದು ಕ್ರಿಸ್​ ಗೇಲ್ ಮತ್ತು ​ನಾನು ಆರ್​ಸಿಬಿ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡೆವು. ನನ್ನ ಪತ್ನಿ, ಮೂವರು ಮಕ್ಕಳೊಂದಿಗೆ ಆರ್​ಸಿಬಿ ವೇದಿಕೆ​ಯ ಮೆಟ್ಟಿಲುಗಳ ಮೇಲೆ ನಡೆದಾಗ ನನ್ನ ಹೃದಯ ತುಂಬಿ ಬಂತು. ಈ ಹಿಂದೆ ನಾನು ಹಲವು ಬಾರಿ ಇದೇ ಮೆಟ್ಟಿಲುಗಳ ಮೇಲೆ ನಡೆದಿದ್ದೆ. ಆದರೆ ಈ ಬಾರಿ ಆ ಮೆಟ್ಟಿಲುಗಳ ಮೇಲೆ ನಡೆದ ಅನುಭವವೇ ವಿಭಿನ್ನವಾಗಿತ್ತು".

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಡ್ರೆಸ್ಸಿಂಗ್​ ರೂಮಿನ ಬಾಲ್ಕನಿಯತ್ತ ಹೆಜ್ಜೆ ಹಾಕಿದಾಗ ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತು. ಎಬಿಡಿ ಎಬಿಡಿ ಎಂಬ ಅಭಿಮಾನಿಗಳ ಕೂಗು ನನ್ನ ಮನಸೂರೆಗೊಳಿಸಿತು. ಪ್ರತಿ ಸಲ ಅಭಿಮಾನಿಗಳ ಈ ರೀತಿಯ ಕೂಗು ನಮ್ಮನ್ನು ಗೆಲುವಿಗಾಗಿ ಹುರಿದುಂಬಿಸುತ್ತಿತ್ತು. ಆದರೆ ಈ ಬಾರಿಯ ಕೂಗಿನಲ್ಲಿ ಬೇರೆಯದ್ದೇ ಭಾವನೆ ಇತ್ತು. ಹೆಮ್ಮೆಯ ನಗರವನ್ನು ಪ್ರತಿನಿಧಿಸಿ ಮಧುರ ಕ್ಷಣಗಳನ್ನು ಪಡೆದಿದ್ದಕ್ಕೆ ನಾನು ಕೃತಜ್ಞ. ಹೆಮ್ಮೆಯ ನಗರ, ಅದ್ಭುತ ಫ್ರಾಂಚೈಸಿ ಮತ್ತು ತಂಡದ ಪ್ರತಿನಿಧಿಗಳಿಗೆ ಕೃತಜ್ಞತೆಗಳು"

"2003 ರಿಂದ ನಾನು ಭಾರತದಲ್ಲಿ ಕಳೆದ ದಿನಗಳ ಕುರಿತು ಯೋಚಿಸುತ್ತಿದ್ದಾಗ ಹಲವು ಮರೆಯಲಾರದ ನೆನಪುಗಳು ಕಣ್ಣಮುಂದೆ ಹಾದುಹೋದವು. ನಾನು ಈ ದೇಶ ಮತ್ತು ಜನರೊಂದಿಗೆ ಆಳವಾದ ಸಂಪರ್ಕ, ಸಂಬಂಧ ಹೊಂದಿದ್ದೇನೆ. ಇದಕ್ಕಾಗಿ ಎಂದಿಗೂ ಕೃತಜ್ಞ. ತಂಡದ ಸಹ ಆಟಗಾರರಿಗೆ ಹಾಗೂ ವಿಶೇಷವಾಗಿ ವಿರಾಟ್, ಆರ್‌ಸಿಬಿ, ಬೆಂಗಳೂರಿಗೆ ಧನ್ಯವಾದಗಳು" ಎಂದು ಎಬಿಡಿ ಬರೆದುಕೊಂಡಿದ್ದಾರೆ.

ನವೆಂಬರ್ 2021 ರಲ್ಲಿ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2011 ರಲ್ಲಿ RCB ಬಳಗ ಸೇರಿಕೊಂಡ ಅವರು ತಾವು ಆಡಿರುವ 144 ಇನ್ನಿಂಗ್ಸ್‌ನಲ್ಲಿ 158.33 ಸ್ಟ್ರೈಕ್ ರೇಟ್‌ನೊಂದಿಗೆ 4522 ರನ್ ಗಳಿಸಿದ್ದರು.

ಇದನ್ನೂ ಓದಿ: 'ಹಾಲ್​ ಆಫ್​ ಫೇಮ್'​ ಗೌರವಕ್ಕೆ ಎಬಿಡಿ,ಗೇಲ್​.. IPL ಇತಿಹಾಸದಲ್ಲಿ ವಿಶೇಷ ಪ್ರಶಸ್ತಿ ಪರಿಚಯಿಸಿದ ಆರ್​ಸಿಬಿ

Last Updated : Mar 29, 2023, 10:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.