ETV Bharat / sports

2nd Test Day 1: ಅಶ್ವಿನ್, ಉಮೇಶ್​ಗೆ ತಲಾ 4 ವಿಕೆಟ್.. 227 ರನ್​ಗಳಿಗೆ ಬಾಂಗ್ಲಾ ಸರ್ವಪತನ - Fast bowler Umesh Yadav

ಮೊದಲ ಟೆಸ್ಟ್ ಗೆದ್ದು ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ತಂಡವನ್ನು 227 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.

2nd-test-day-1-ashwin-umesh-pick-four-wickets-each-as-india-bowl-out-bangladesh-for-227
2nd Test Day 1: ಅಶ್ವಿನ್, ಉಮೇಶ್​ಗೆ ತಲಾ 4 ವಿಕೆಟ್.. 227 ರನ್​ಗಳಿಗೆ ಬಾಂಗ್ಲಾ ಸರ್ವಪತನ
author img

By

Published : Dec 22, 2022, 6:12 PM IST

ಢಾಕಾ (ಬಾಂಗ್ಲಾದೇಶ): ವೇಗಿ ಉಮೇಶ್ ಯಾದವ್ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಲಾ ನಾಲ್ಕು ವಿಕೆಟ್‌ಗಳ ನೆರವಿನಿಂದ ಭಾರತವು ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶ ತಂಡವನ್ನು 227 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ತನ್ನ ಮೊದಲ ಇನ್ನಿಂಗ್ಸ್​​ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ ವಿಕೆಟ್​ನಷ್ಟವಿಲ್ಲದೇ 19 ರನ್​ಗಳನ್ನು ಗಳಿಸಿದೆ.

ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್​ ಗೆದ್ದು ಮೊದಲ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಮೊಮಿನುಲ್ ಹಕ್ (84) ಹೊರತುಪಡಿಸಿದರೆ ಯಾವ ಆಟಗಾರರು ಬ್ಯಾಟ್​ ಬೀಸಲು ಸಾಧ್ಯವಾಗಲಿಲ್ಲ. ಹೀಗಾಗಿ 73.5 ಓವರ್‌ಗಳಲ್ಲಿ ಬಾಂಗ್ಲಾ 227 ರನ್‌ಗಳಿಗೆ ಸರ್ವಪತನ ಕಂಡಿತು.

ಆರಂಭಿಕರಾದ ನಜ್ಮುಲ್ ಹೊಸೈನ್ ಶಾಂತೋ (24) ಮತ್ತು ಜಾಕಿರ್​ ಹಸನ್​ (15) ತಂಡದ ಮೊತ್ತ 39 ರನ್​ ಆಗುವಷ್ಟರಲ್ಲಿ ವಿಕೆಟ್​ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಮೊಮಿನುಲ್ ಹಕ್ 157 ಎಸೆತಗಳಲ್ಲಿ ಒಂದು ಸಿಕ್ಸರ್​, 12 ಬೌಂಡರಿಗಳೊಂದಿಗೆ 84 ರನ್​ ಬಾರಿಸಿದರು. 130 ರನ್‌ಗಳವರೆಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡವು ನಂತರ ನಿಂರತರವಾಗಿ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತ್ತು.

ನಾಯಕ ಶಕೀಬ್ ಅಲ್ ಹಸನ್ (16), ಮುಶ್ಫಿಕರ್ ರಹೀಮ್ (26) ಮತ್ತು ಲಿಟ್ಟನ್ ದಾಸ್ 25 ರನ್​ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ರವಿಚಂದ್ರನ್ ಅಶ್ವಿನ್ ಹಾಗೂ ವೇಗಿ ಉಮೇಶ್ ಯಾದವ್ ದಾಳಿಗೆ ಬಾಂಗ್ಲಾ ತತ್ತರಿಸಿ ಹೋಯಿತು. 15 ಓವರ್​ಗಳನ್ನು ಎಸೆದ ವೇಗಿ ಉಮೇಶ್ ಯಾದವ್ 4 ಮೇಡನ್​ ಓವರ್​ಗಳೊಂದಿಗೆ ಕೇವಲ 25 ರನ್‌ ನೀಡಿ 4 ವಿಕೆಟ್ ಕಬಳಿಸಿದರು. ರವಿಚಂದ್ರನ್ ಅಶ್ವಿನ್ 71 ರನ್ ನೀಡಿ 4 ವಿಕೆಟ್ ಪಡೆದರು. 12 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಜಯದೇವ್ ಉನಾದ್ಕತ್ 2 ವಿಕೆಟ್ ಕಬಳಿಸಿದರು.

ಇತ್ತ, ಮೊದಲ ಇನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ ದಿನದಾಟ ಅಂತ್ಯಕ್ಕೆ 8 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 19 ರನ್‌ ಗಳಿಸಿದೆ. ಆರಂಭಿಕರಾದ ಶುಭ್‌ಮನ್ ಗಿಲ್ 14 ರನ್ ಹಾಗೂ ಕೆಎಲ್ ರಾಹುಲ್ 3 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಭಾರತ ತಂಡ ಮೊದಲ ಇನ್ಸಿಂಗ್ಸ್​ನಲ್ಲಿ 208 ರನ್‌ಗಳ ಹಿನ್ನಡೆಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.