ETV Bharat / sports

ಯುಎಇ ಅಲ್ಲ, 2022ರ ಐಪಿಎಲ್ ಈ ದೇಶದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ! - ದಕ್ಷಿಣ ಆಫ್ರಿಕಾ ಐಪಿಎಲ್

14ನೇ ಆವೃತ್ತಿ ಚಾಲ್ತಿಯಲ್ಲಿರುವಾಗಲೇ ಕೋವಿಡ್​ ಕಾರಣಕ್ಕೆ ಐಪಿಎಲ್​ ಸ್ಥಗಿತಗೊಳಿಸಿ ಸೆಪ್ಟೆಂಬರ್​ನಲ್ಲಿ ಯುಎಇನಲ್ಲಿ 2ನೇ ಹಂತ ಮುಗಿಸಲಾಯಿತು. ಈ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಇದೀಗ 10 ತಂಡಗಳ ವಿನೂತನ ಮಾದರಿಯ ಶ್ರೀಮಂತ ಲೀಗ್​ ಅನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಬಿಸಿಸಿಐ ಚಿಂತಿಸಿದೆ.

2022 edition of IPL could be held in South Africa
ಇಂಡಿಯನ್ ಪ್ರೀಮಿಯರ್ ಲೀಗ್​ 2022
author img

By

Published : Jan 13, 2022, 5:29 PM IST

Updated : Jan 13, 2022, 5:39 PM IST

ನವದೆಹಲಿ: ಭಾರತದಲ್ಲಿ ಏಪ್ರಿಲ್​ ವೇಳೆಗೆ ಮೂರನೇ ಕೊರೊನಾ ಅಲೆ ಕೊನೆಯಾಗದಿದ್ದರೆ ದಕ್ಷಿಣ ಅಫ್ರಿಕಾದಲ್ಲಿ 2022ರ ಇಂಡಿಯನ್ ಪ್ರೀಮಿಯರ್​ ಲೀಗ್​ ಆಯೋಜಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಶ್ರೀಲಂಕಾ ಕೂಡ ನಗದು ಸಮೃದ್ಧ ಲೀಗ್​ ಆಯೋಜನೆಗೆ ಮತ್ತೊಂದು ಆಯ್ಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

14ನೇ ಆವೃತ್ತಿ ಚಾಲ್ತಿಯಲ್ಲಿರುವಾಗಲೇ ಕೋವಿಡ್​ ಕಾರಣಕ್ಕೆ ಐಪಿಎಲ್​ ಸ್ಥಗಿತಗೊಳಿಸಿ ಸೆಪ್ಟೆಂಬರ್​ನಲ್ಲಿ ಯುಎಇನಲ್ಲಿ 2ನೇ ಹಂತ ಮುಗಿಸಲಾಯಿತು. ಈ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಇದೀಗ 10 ತಂಡಗಳ ವಿನೂತನ ಮಾದರಿಯ ಶ್ರೀಮಂತ ಲೀಗ್​ ಅನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಬಿಸಿಸಿಐ ಚಿಂತಿಸಿದೆ ಎನ್ನಲಾಗುತ್ತಿದೆ.

'ನಾವು ಎಲ್ಲಾ ಸಮಯದಲ್ಲೂ ಯುಎಇ ಮೇಲೆ ಅವಲಂಬಿತವಾಗಲು ಆಗುವುದಿಲ್ಲ. ಹಾಗಾಗಿ ಈ ಬಾರಿ ಹೊಸ ಆಯ್ಕೆಗಳನ್ನು ಅನ್ವೇಷಣೆ ಮಾಡಲು ನಿರ್ಧರಿಸಿದ್ದೇವೆ. ದಕ್ಷಿಣ ಆಫ್ರಿಕಾದ ಸಮಯದ ವ್ಯತ್ಯಾಸ ನಮ್ಮ ಆಟಗಾರರಿಗೆ ಸರಿಹೊಂದುತ್ತದೆ' ಎಂದು ಬಿಸಿಸಿಐ ಅಧಿಕಾರಿಗಳು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಲಖನೌ ಮತ್ತು ಅಹ್ಮದಾಬಾದ್​ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ 2022ರ ಐಪಿಎಲ್​ ತುಂಬಾ ದೀರ್ಘವಾಗಲಿದೆ. ಒಂದು ವೇಳೆ ಭಾರತದಿಂದ ಲೀಗ್​ ಹೊರಗೆ ನಡೆಸಲು ನಿರ್ಧರಿಸಿದರೆ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್​ 2ನೇ ಬಾರಿ ನಡೆದಂತಾಗುತ್ತದೆ. ಭಾರತದಲ್ಲಿ ಲೋಕಸಭೆ ಚುನಾವಣೆ ಆಯೋಜನೆಗೊಂಡಿದ್ದರಿಂದ 2009ರಲ್ಲಿ ದ.ಆಫ್ರಿಕಾದಲ್ಲಿ 2ನೇ ಆವೃತ್ತಿಯ ಐಪಿಎಲ್ ನಡೆಸಲಾಗಿತ್ತು.

ಎರಡನೇ ಟೆಸ್ಟ್‌ಗಾಗಿ ತಂಡವು ತಂಗಿದ್ದ ಸ್ಥಳವು ಹಲವಾರು ಎಕರೆಗಳಲ್ಲಿದ್ದು, ಆಟಗಾರರಿಗೆ ಅಗತ್ಯವಾಗಿರುವ ಸೌಲಭ್ಯಗಳು ಸುಲಭವಾಗಿ ಲಭ್ಯವಾಗಲಿದೆ ಎಂದು ಆ ಅಧಿಕಾರಿ ದಕ್ಷಿಣ ಆಫ್ರಿಕಾವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣವೆಂದು ತಿಳಿಸಿದ್ದಾರೆ.

ಆದರೆ, ಕೋವಿಡ್​ ರೂಪಾಂತರಿ ಒಮಿಕ್ರಾನ್ ಮೊದಲು ಕಾಣಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದಲ್ಲಿ ನಡೆಯಬೇಕಿದ್ದ ಟಿ20 ಸರಣಿಯನ್ನು ಬಿಸಿಸಿಐ ಮುಂದೂಡಿದೆ. ಆದರೆ ಪ್ರಸ್ತುತ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ 2022ರ ಲೀಗ್​ಗೆ 'ರೈಂಬೋ ನೇಷನ್'​ ಸರಿಯಾದ ಆಯ್ಕೆ ಎನ್ನಲಾಗುತ್ತಿದೆ. ಒಂದು ವೇಳೆ ಇಲ್ಲಿಯೂ ಸಾಧ್ಯವಾಗದಿದ್ದರೆ ಶ್ರೀಲಂಕಾ ಬಿಸಿಸಿಐ ಮುಂದಿರುವ ಮತ್ತೊಂದು ಆಯ್ಕೆಯಾಗಿದೆ.

ಇದನ್ನೂ ಓದಿ:5 ವರ್ಷಗಳ ನಂತರ ಐಪಿಎಲ್​ಗೆ ಮರಳುವ ಸುಳಿವು ಕೊಟ್ಟ ಮಿಚೆಲ್ ಸ್ಟಾರ್ಕ್​

Last Updated : Jan 13, 2022, 5:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.