ETV Bharat / sports

ಕಶ್ಯಪ್​ಗೆ ಆಘಾತ ನೀಡಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದ ಶ್ರೀಕಾಂತ್​

ಕಿಡಂಬಿ ಶ್ರೀಕಾಂತ್​ ಎರಡನೇ ಸುತ್ತಿನ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್​ ಅವರನ್ನು 18-21,22-20, 21-16 ರಲ್ಲಿ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

Syed Modi International
Syed Modi International
author img

By

Published : Nov 28, 2019, 2:23 PM IST

ಲಖನೌ : ಸಯ್ಯದ್​ ಮೋದಿ ಸೂಪರ್​ 300 ಟೂರ್ನಮೆಂಟ್​ನಲ್ಲಿ ಭಾರತದ ಸ್ಟಾರ್​ ಆಟಗಾರರಾದ ಶ್ರೀಕಾಂತ್​ - ಕಶ್ಯಪ್​ ನಡುವೆ ಭರ್ಜರಿ ಕಾದಾಟ ನಡೆದಿದ್ದು, ಅದರಲ್ಲಿ ಮಾಜಿ ನಂಬರ್​ ಒನ್​ ಆಟಗಾರ ಶ್ರೀಕಾಂತ್​ ಗೆಲುವಿನ ಸಿಹಿ ಅನುಭವಿಸಿದ್ದಾರೆ.

ಕಿಡಂಬಿ ಶ್ರೀಕಾಂತ್​ ಎರಡನೇ ಸುತ್ತಿನ ಪಂದ್ಯದಲ್ಲಿ ಕಶ್ಯಪ್​ರನ್ನು 18-21,22-20, 21-16 ರಲ್ಲಿ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಇಬ್ಬರು ಸ್ಟಾರ್​ ಆಟಗಾರರ ನಡುವೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಹೋರಾಟ ನಡೆಯಿತು.

ಮೊದಲ ಗೇಮ್​ನಲ್ಲಿ ಕಶ್ಯಪ್​ 21-18ರಲ್ಲಿ ಶ್ರೀಕಾಂತ್​ರನ್ನು ಮಣಿಸಿದರಾದರು, ಎರಡನೇ ಗೇಮ್​ನಲ್ಲಿ 22-2-ರಲ್ಲಿ ಕಠಿಣ ಪೈಪೋಟಿ ನೀಡಿ ಸೋಲು ಕಂಡರು. ನಿರ್ಣಾಯಕ ಮೂರನೇ ಗೇಮ್​ನಲ್ಲಿ ಶ್ರೀಕಾಂತ್​ 21-18 ರಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ಫೈನಲ್​ಗೆ ತೇರ್ಗಡೆಯಾದರು.

ಉಳಿದ ಸಿಂಗಲ್​ ಪಂದ್ಯದಲ್ಲಿ ಯುವ ಆಟಗಾರ ಲಕ್ಷ್ಯ ಸೇನ್​ ಮಾಜಿ ನಂಬರ್​ ಒನ್​ ಆಟಗಾರ ದಕ್ಷಿಣ ಕೊರಿಯಾದ ಸನ್​ ವಾನ್​ ಹೋ ರ ವಿರುದ್ಧ 21-14,21-17ರಲ್ಲಿ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿದರು.

ಬೆಳಗ್ಗೆ ನಡೆದ ಪಂದ್ಯದಲ್ಲಿ ಸೌರಭ್​ ವರ್ಮಾ ಭಾರತದವರೇ ಆದ ಅಲಾಪ್​ ಮಿಶ್ರಾ ಅವರನ್ನು 21-11,21-18ರಲ್ಲಿ ಮಣಿಸಿ ಕ್ವಾರ್ಟರ್​ ಫೈನಲ್​ಗೆ ತೇರ್ಗಡೆಯಾದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.