ETV Bharat / sports

ಇಂಡೋನೇಷ್ಯಾ ಓಪನ್​: ಚೀನಾದ ಚೆನ್ ಯೂಫಿ ಮಣಿಸಿ ಫೈನಲ್​ಗೇರಿದ ಪಿವಿ ಸಿಂಧು

ಆಲ್​ ಇಂಗ್ಲೆಂಡ್​ ಚಾಂಪಿಯನ್​ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಸಿಂಧು ಫೈನಲ್ ಪಂದ್ಯದಲ್ಲಿ 21-19 21-10 ರ ನೇರ ಸೆಟ್​​ಗಳಿಂದ ಮಣಿಸುವ ಮೂಲಕ ಇಂಡೋನೇಷ್ಯಾ ಓಪನ್​ನಲ್ಲಿ ಫೈನಲ್​ ತಲುಪಿದ್ದಾರೆ.

Sindhu
author img

By

Published : Jul 20, 2019, 8:05 PM IST

ಜಕಾರ್ತ: 2016ರ ಒಲಿಂಪಿಂಕ್​ನ ಬೆಳ್ಳಿಪದಕ ವಿಜೇತೆ, ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಪಿವಿ ಸಿಂಧು ಇಂಡೋನೇಷ್ಯಾ ಓಪನ್​ನಲ್ಲಿ ಫೈನಲ್​ ತಲುಪಿದ್ದಾರೆ.

ಆಲ್​ ಇಂಗ್ಲೆಂಡ್​ ಚಾಂಪಿಯನ್​ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಸಿಂಧು ಫೈನಲ್ ಪಂದ್ಯದಲ್ಲಿ 21-19 21-10 ರ ನೇರ ಗೇಮ್​ಗಳಲ್ಲಿ ಮಣಿಸುವ ಮೂಲಕ ಈ ವರ್ಷದ ತಮ್ಮ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದರು.

ಸಿಂಧುಗೆ ಮೊದಲ ಸೆಟ್​ನಲ್ಲಿ ವಿಶ್ವದ 3ನೇ ಶ್ರೇಯಾಂಕದ ಚೆನ್​ ಪ್ರಬಲ ಪೈಪೋಟಿ ನೀಡಿದರಾದರೂ ದ್ವಿತೀಯ ಸೆಟ್​ನಲ್ಲಿ ಸಿಂಧು ವಿರುದ್ಧ ​ನಿಲ್ಲದಾದರು.

ವಿಶ್ವದ 5ನೇ ಶ್ರೆಯಾಂಕ ಪಡೆದಿರುವ ಸಿಂಧು ಈ ವರ್ಷದ ಸಿಂಗಾಪುರ್​ ಹಾಗೂ ಇಂಡಿಯ ಓಪನ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದರು. ಫೈನಲ್​ ಪಂದ್ಯದಲ್ಲಿ ಜಪಾನ್​ನ ಅಕಾನೆ ಯಮಗುಚಿಯನ್ನು ಎದುರಿಸಲಿದ್ದಾರೆ. ಸಿಂಧು ಯಮಗುಚಿ ವಿರುದ್ಧ ಕಳೆದ ನಾಲ್ಕು ಮುಖಾಮುಖಿಯಲ್ಲೂ ಗೆಲುವು ಸಾಧಿಸಿದ್ದಾರೆ. ಒಟ್ಟಾರೆ 10 - 4 ಗೆಲುವಿನ ಅಂತರ ಹೊಂದಿರುವ ಸಿಂಧು ಈ ಬಾರಿ ಚಾಂಪಿಯನ್​ ಆಗುವ ನೆಚ್ಚಿನ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.