ಜಕಾರ್ತ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವರ್ಷದ ಎರಡನೇ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲೂ ಆರಂಭದ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ನಿರಾಶೆಯನುಭವಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಮಲೇಷ್ಯಾ ಮಾಸ್ಟರ್ನಲ್ಲಿ ಕ್ವಾರ್ಟರ್ನಲ್ಲಿ ಸೋಲುಕಂಡಿದ್ದ ವಿಶ್ವದ 11 ಶ್ರೇಯಾಂಕದ ಸೈನಾ ನೆಹ್ವಾಲ್ ಬುಧವಾರ ನಡೆದ ಇಂಡೋನೇಷ್ಯ ಮಾಸ್ಟರ್ನಲ್ಲಿ ಜಪಾನ್ನ ಸಯಾಕಾ ತಕಹಶಿ ವಿರುದ್ಧ ಸೋಲುಕಾಣುವ ಮೂಲಕ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಸೈನಾ ನೆಹ್ವಾಲ್ ಜಪಾನ್ ಆಟಗಾರ್ತಿ ವಿರುದ್ಧ 21-19, 13-21 ಹಾಗೂ 5-21 ಗೇಮ್ಗಳ ಅಂತರದಿಂದ ಸೋಲುಕಂಡರು. ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ ಸೈನಾ ಎರಡನೇ ಸುತ್ತಿನಲ್ಲಿ ಪೈಪೋಟಿ ನೀಡಲು ಪ್ರಯತ್ನಿಸಿದರು, ಆದರೆ ಮೂರನೇ ಸುತ್ತಿನಲ್ಲಿ ಧಯನೀಯ ವೈಫಲ್ಯ ಅನುಭವಿಸಿ ಟೂರ್ನಿಯಿಂದ ಹೊರಬಿದ್ದರು.
ಇದಕ್ಕು ಮೊದಲು ವಿಶ್ವದ 12 ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ 21-18, 12-21, 14-21 ರಿಂದ ಇಂಡೋನೇಷ್ಯಾದ ರುಸ್ತಾವಿಟೊ ವಿರುದ್ಧ ಸೋಲನಭವಿಸಿದರು. ಮೊದಲ ಸೆಟ್ನಲ್ಲಿ ಭರವಸೆ ಆಟವಾಡಿದ್ದ ಶ್ರೀಕಾಂತ್ 21-18 ಪಾಯಿಂಟ್ಗಳಿಂದ ಗೆಲವು ಸಾಧಿಸಿದ್ದರು. ಆದರೆ ಎರಡು ಮತ್ತು ಮೂರನೇ ಸೆಟ್ನಲ್ಲಿ ರುಸ್ತಾವಿಟೊ 12-21, 14-21 ಪಾಯಿಂಟ್ಗಳಿಂದ ಶ್ರೀಕಾಂತ್ರನ್ನ ಸುಲಭವಾಗಿ ಸೋಲಿಸಿದರು.
ಮಿಶ್ರ ಡಬಲ್ಸ್ನಲ್ಲಿ, ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ, ದಕ್ಷಿಣ ಕೊರಿಯಾದ ಕೊ ಸುಂಗ್ ಹ್ಯುನ್ ಮತ್ತು ಇಒಮ್ ಹೆ ವಿರುದ್ಧ 8-21,14-21 ನೇರ ಸೆಟ್ನಿಂದ ಪರಾಭವಗೊಂಡಿದ್ದಾರೆ.