ವೆಲ್ವಾ(ಸ್ಪೇನ್): ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರಿಕಾಂತ್ ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸಿಂಗಾಪೂರ್ನ ಲೋ ಕೀನ್ ಯಿವ್ ವಿರುದ್ಧ ಸೋಲು ಕಾಣುವ ಮೂಲಕ ಚಿನ್ನದ ಪದಕ ತಪ್ಪಿಸಿಕೊಂಡರು. ಆದರೆ, ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಮೊದಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಮೊದಲ ಪುರುಷ ಶಟ್ಲರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಸಿಂಗಾಪೂರ್ ಶಟ್ಲರ್ ಲೋ ಕೀನ್ ಯಿವ್ ವಿರುದ್ಧ 15-21, 20-22ರ ರೋಚಕ ಹೋರಾಟದಲ್ಲಿ ಸೋಲುಂಡರು. 14ನೇ ಶ್ರೇಯಾಂಕದ ಕಿಡಂಬಿ ಶ್ರಿಕಾಂತ್ ಮೊದಲ ಗೇಮ್ನಲ್ಲಿ 7-4ರಲ್ಲಿ ಮುನ್ನಡೆ ಸಾಧಿಸಿದ್ದರು.
ಆದರೆ, ಯಿವ್ 14 ಅಂಕಗಳ ನಂತರ ಭಾರತೀಯ ಆಟಗಾರನಿಗೆ ಅಂಕ ಬಿಟ್ಟುಕೊಡದೆ ಒತ್ತಡ ಹೇರಿ ಮೊದಲ ಗೇಮ್ ಗೆದ್ದುಕೊಂಡರು. ಆದರೆ, 2ನೇ ಗೇಮ್ನಲ್ಲಿ ಶ್ರೀಕಾಂತ್ 22ನೇ ಶ್ರೇಯಾಂಕದ ಯುವ ಆಟಗಾರನಿಗೆ ಕೊನೆಯ ಗೇಮ್ವರೆಗೂ ಪೈಪೋಟಿ ನೀಡಿದರಾದರೂ ಕೀನ್ ಆಟಕ್ಕೆ ಶರಣಾದರು.
-
This is the result of hard work, grit & determination. BAI congratulates @srikidambi for this phenomenal achievement 👏
— BAI Media (@BAI_Media) December 19, 2021 " class="align-text-top noRightClick twitterSection" data="
Way to go! 🔝🔥#BWFWorldChampionships2021#Badminton
📸 Badminton Photo pic.twitter.com/oU4GnQ4ajS
">This is the result of hard work, grit & determination. BAI congratulates @srikidambi for this phenomenal achievement 👏
— BAI Media (@BAI_Media) December 19, 2021
Way to go! 🔝🔥#BWFWorldChampionships2021#Badminton
📸 Badminton Photo pic.twitter.com/oU4GnQ4ajSThis is the result of hard work, grit & determination. BAI congratulates @srikidambi for this phenomenal achievement 👏
— BAI Media (@BAI_Media) December 19, 2021
Way to go! 🔝🔥#BWFWorldChampionships2021#Badminton
📸 Badminton Photo pic.twitter.com/oU4GnQ4ajS
ಭಾರತದ ಮೊದಲ ಬೆಳ್ಳಿ ಪದಕ : ಇನ್ನು ಫೈನಲ್ನಲ್ಲಿ ಸೋಲು ಕಂಡರೂ ಶ್ರೀಕಾಂತ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟರು.
ಈ ಹಿಂದೆ ಪುರುಷರ ವಿಭಾಗದಲ್ಲಿ ಪ್ರಕಾಶ್ ಪಡುಕೋಣೆ(1983), ಬಿ ಸಾಯಿ ಪ್ರಣೀತ್(2019) ಮತ್ತು ಇದೇ ವರ್ಷ ಲಕ್ಷ್ಯ ಸೇನ್ ಕಂಚಿನ ಪದಕ ಗೆದ್ದಿದ್ದೆ ದೊಡ್ಡ ಸಾಧನೆಯಾಗಿತ್ತು. ಆದರೆ, ಭಾರತದ ಮಹಿಳಾ ಸ್ಟಾರ್ ಪಿವಿ ಸಿಂಧು 2019ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಅದಕ್ಕೂ ಮುನ್ನ 2 ಬಾರಿ ಬೆಳ್ಳಿ ಪದಕ ಪಡೆದಿದ್ದರು.
ಇದನ್ನೂ ಓದಿ:World Championship : ನಂ.1 ಥಾಯ್ ಜು ಯಿಂಗ್ ಮಣಿಸಿ ವಿಶ್ವ ಚಾಂಪಿಯನ್ ಕಿರೀಟ ಧರಿಸಿದ ಅಕಾನೆ ಯಮಗುಚಿ