ಅರಸನಕೋಟೆ ಅಖಿಲಾಂಡೇಶ್ವರಿ ನಿಮ್ಮನ್ನು ರಂಜಿಸಲು 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಬರುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಕೌಟುಂಬಿಕ ರಿಯಾಲಿಟಿ ಶೋ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ಮಿಂಚಲಿದ್ದಾರೆ.
- " class="align-text-top noRightClick twitterSection" data="
">
ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಬಹಳ ಸುಂದರವಾಗಿ ಮೂಡಿ ಬರುತ್ತಿರುವ 'ತುತ್ತಾಮುತ್ತಾ' ಕಾರ್ಯಕ್ರಮದಲ್ಲಿ ವಿನಯಾ ಪ್ರಸಾದ್ ತಮ್ಮ ಪತಿ ಹಾಗೂ ಅಮ್ಮನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ನಿರಂಜನ್ ಕೇಳಿರುವಂತಹ ತರಲೆ ಪ್ರಶ್ನೆಗಳಿಗೆ ಉತ್ತರಿಸಿರುವ ವಿನಯಾ ಪ್ರಸಾದ್ ಆಟವಾಡುತ್ತಾ ಸಖತ್ ಎಂಜಾಯ್ ಕೂಡಾ ಮಾಡಿದ್ದಾರೆ.ಅಂದ ಹಾಗೆ ವಿನಯಾ ಪ್ರಸಾದ್, ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಸಾಧನೆಯನ್ನು ಮೆಲುಕು ಹಾಕಿದ ಅಖಿಲಾಂಡೇಶ್ವರಿ, ಕಾಮಿಡಿ ಕಿಲಾಡಿಗಳು ಸೀಸನ್ 3 ರಲ್ಲಿ ಅತಿಥಿ ತೀರ್ಪುಗಾರರಾಗಿ ಕೂಡಾ ಕಾಣಿಸಿಕೊಂಡಿದ್ದರು. ಇದೀಗ ಪತಿ ಹಾಗೂ ತಾಯಿ ಜೊತೆ 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.