ಸಿನಿಮಾ, ಕಿರುತೆರೆ ಕಲಾವಿದರು ಯಾವಾಗಲೂ ಚಿತ್ರೀಕರಣದಲ್ಲಿ ಬ್ಯುಸಿ ಇರುತ್ತಾರೆ. ಅವರಿಗೆ ಇಂತ ಸಮಯ ಎಂದೇ ಇರುವುದಿಲ್ಲ. ಕರೆ ಬಂದರೆ ಈಗಿಂದೀಗಲೇ ಲೊಕೇಶನ್ಗೆ ಹೋಗಲು ರೆಡಿ ಇರಬೇಕು. ಈ ಬ್ಯುಸಿ ಶೆಡ್ಯೂಲ್ ನಡುವೆ ಸ್ವಲ್ಪ ಬಿಡುವು ದೊರೆತರೂ ಸಾಕು ಎಲ್ಲಾದರೂ ಹೊರಗೆ ಹೋಗಿ ವಿಶ್ರಾಂತಿ ಪಡೆದು ಬರೋಣ ಎನ್ನಿಸುವುದು ಗ್ಯಾರಂಟಿ.
- " class="align-text-top noRightClick twitterSection" data="
">
ಇದನ್ನೂ ಓದಿ: ಬಿಎಎಫ್ಟಿಎ ಪ್ರಶಸ್ತಿಗೆ ಆಯ್ಕೆಯಾದ ಪಿಗ್ಗಿ...ಸಂತೋಷ ಹಂಚಿಕೊಂಡ ಸಹೋದರಿ ಪರಿಣಿತಿ
ಮೋಕ್ಷಿತಾ, ರಕ್ಷ್, ರಿತ್ವಿಕ್ ಮಠದ್ ಸೇರಿ ಅನೇಕ ಕಲಾವಿದರು ಬ್ರೇಕ್ ಪಡೆದು ಮೆಚ್ಚಿನ ಸ್ಥಳಗಳಿಗೆ ತೆರಳಿ ಎಂಜಾಯ್ ಮಾಡಿ ಬಂದಿದ್ದಾರೆ. ನಟಿ ತೇಜಸ್ವಿನಿ ಪ್ರಕಾಶ್ ಕೂಡಾ ಬಿಡುವಿಲ್ಲದ ಶೂಟಿಂಗ್ನಿಂದ ಬಿಡುವು ಪಡೆದು ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಲಾವಣ್ಯ ಎಂಬ ಖಳನಾಯಕಿ ಆಗಿ ನಟಿಸುತ್ತಿರುವ ತೇಜಸ್ವಿನಿ ಪ್ರಕಾಶ್ ಈಗ ಜಾಲಿ ಮೂಡ್ನಲ್ಲಿದ್ದು ಕಾಶ್ಮೀರಕ್ಕೆ ತೆರಳಿದ್ದಾರೆ. ಹಿಮದ ನಡುವೆ ಪುಟ್ಟ ಮಕ್ಕಳಂತೆ ಎಂಜಾಯ್ ಮಾಡುತ್ತಿದ್ದಾರೆ. ಕಾಶ್ಮೀರದ ರಸ್ತೆಗಳಲ್ಲಿ ಓಡಾಡಿದ್ದಾರೆ. ಅಲ್ಲಿನ ಆಹಾರವನ್ನು ಕೂಡಾ ಸವಿದಿದ್ದಾರೆ. ಪ್ರವಾಸದಲ್ಲಿದ್ದರೂ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ತೇಜಸ್ವಿನಿ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಟ್ರಿಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತೇಜಸ್ವಿನಿ ಬಿಗ್ ಬಾಸ್ ಸೀಸನ್ 5 ರಲ್ಲಿ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ ಆ ಸಮಯದಲ್ಲಿ ತಂದೆಗೆ ಅನಾರೋಗ್ಯ ಕಾಡಿದ ಕಾರಣ ಸ್ಪರ್ಧೆಯಿಂದ ಅರ್ಧಕ್ಕೆ ಹೊರ ಬಂದಿದ್ದರು.
- " class="align-text-top noRightClick twitterSection" data="
">